ಬ್ರೇಕಿಂಗ್ ನ್ಯೂಸ್
23-02-24 06:02 pm Mangalore Correspondent ಕರಾವಳಿ
ಉಳ್ಳಾಲ, ಫೆ.23: ತೊಕ್ಕೊಟ್ಟಿನಲ್ಲಿ ನಡೆಯಲಿರುವ ಡಿವೈಎಫ್ಐ ರಾಜ್ಯ ಸಮ್ಮೇಳನದ ಪ್ರಚಾರಾರ್ಥ ನಗರದೆಲ್ಲೆಡೆ ಹಾಕಲಾಗಿರುವ ಫ್ಲೆಕ್ಸ್ ಗಳಲ್ಲಿ ತುಳುನಾಡಿನ ವೀರರು, ಕಾರಣಿಕ ಶಕ್ತಿಗಳಾದ ಕೋಟಿ-ಚೆನ್ನಯರ ಚಿತ್ರಗಳನ್ನ ಹಾಕಿ ಅವಮಾನಿಸಲಾಗಿದ್ದು ಎರಡು ದಿವಸದಲ್ಲಿ ವಿವಾದಿತ ಫ್ಲೆಕ್ಸ್ ಗಳನ್ನ ತೆರವುಗೊಳಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಉಳ್ಳಾಲದ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ. ಸುವರ್ಣ ಗಡುವು ನೀಡಿದ್ದಾರೆ.
ಕಲ್ಲಾಪಿನ ಯುನಿಟಿ ಸಭಾಂಗಣದಲ್ಲಿ ಫೆ.25, 26, 27ರಂದು ನಡೆಯಲಿರುವ ಡಿವೈಎಫ್ಐ ರಾಜ್ಯ ಸಮ್ಮೇಳನದ ಪ್ರಚಾರಾರ್ಥ ಅಳವಡಿಸಿರುವ ಫ್ಲೆಕ್ಸ್ ಗಳಲ್ಲಿ ತುಳುನಾಡಿನ ಆರಾಧ್ಯ ದೈವ ಸಂಭೂತರೆನಿಸಿರುವ ಕೋಟಿ- ಚೆನ್ನಯರ ಚಿತ್ರಗಳನ್ನ ಅಳವಡಿಸಿರುವ ನಡೆಯನ್ನ ಖಂಡಿಸಿ, ವಿವಾದಿತ ಫ್ಲೆಕ್ಸ್ ಗಳನ್ನ ತಕ್ಷಣ ತೆರವುಗೊಳಿಸುವಂತೆ ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆ ವತಿಯಿಂದ ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಬಾಲಕೃಷ್ಣ ಅವರಿಗೆ ಶುಕ್ರವಾರ ಮನವಿ ನೀಡಲಾಯಿತು.
ವೇದಿಕೆಯ ಅಧ್ಯಕ್ಷ ಕೆ.ಟಿ. ಸುವರ್ಣ ಮಾತನಾಡಿ ನಮ್ಮೆಲ್ಲರ ಆರಾಧ್ಯ ಕೋಟಿ-ಚೆನ್ನಯರ ಚಿತ್ರವನ್ನ ಕಾಲ ಕೆಳಭಾಗದಲ್ಲಿ ಫ್ಲೆಕ್ಸಲ್ಲಿ ಮುದ್ರಿಸಿ ಅವಮಾನಿಸಿದ್ದಾರೆ. ನಮ್ಮ ಯುವಕರು ವಿವಾದಿತ ಫ್ಲೆಕ್ಸ್ ಗಳನ್ನ ತೆರವುಗೊಳಿಸಲು ಮುಂದಾದರೂ ನಾವು ಶಾಂತಿ ಕದಡಲು ಅವಕಾಶ ನೀಡಿಲ್ಲ. ಎರಡು ದಿವಸದಲ್ಲಿ ವಿವಾದಾತ್ಮಕ ಫ್ಲೆಕ್ಸ್ ಗಳನ್ನ ತೆರವುಗೊಳಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಬಿಜೆಪಿ ಮಂಗಳೂರು ಮಂಡಲದ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಮಾತನಾಡಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರೇ ನಾವು ಎಡಪಂಥೀಯರೆಂದು ಹೇಳಿದ್ದಾರೆ. ಎಡಪಂಥೀಯರ ಸಮಾವೇಶದ ಫ್ಲೆಕ್ಸಲ್ಲಿ ನಮ್ಮ ಆರಾಧ್ಯ ಕೋಟಿ-ಚೆನ್ನಯರ ಭಾವಚಿತ್ರ ಏಕೆ ಬೇಕು..? ಸಮಾಜ ಸುಧಾರಕರ ಫೋಟೊ ಬಳಸಿ ನಮ್ಮದೇನೂ ಅದಕ್ಕೆ ಆಕ್ಷೇಪವಿಲ್ಲ, ಆದರೆ ಕಾರಣೀಕ ದೈವೀ ಸಂಭೂತರಾದ ಕೋಟಿ-ಚೆನ್ನಯರ ಫೊಟೊ ಬಳಸಿ ಸುಮ್ಮನೆ ವಿವಾದ ಹುಟ್ಟಿಸಿ, ಆಸ್ತಿಕ ಬಾಂಧವರ ಭಾವನೆಗಳಿಗೆ ಘಾಸಿ ಉಂಟು ಮಾಡಿ ನಿಮ್ಮ ಸಮಾವೇಶಕ್ಕೆ ಪ್ರಚಾರ ಪಡೆಯುವ ಹುನ್ನಾರ ಫಲಿಸದು ಎಂದರು.
ಶನಿವಾರ ಉಳ್ಳಾಲದಲ್ಲಿ ಅಬ್ಬಕ್ಕ ಉತ್ಸವ ನಡೆಯಲಿದ್ದು ಉಳ್ಳಾಲದ ಅಬ್ಬಕ್ಕ ಸರ್ಕಲ್ ನಲ್ಲಿ ಡಿವೈಎಫ್ ಐ ಸಂಘಟನೆಯ ಬಂಟಿಗ್ಸ್ ಹಾಕಲಾಗಿದ್ದು, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಆಗ್ರಹಕ್ಕೆ ಮಣಿದು ಉಳ್ಳಾಲ ನಗರಸಭೆ ಸಿಬ್ಬಂದಿಗಳು ಬಂಟಿಗ್ಸ್ ಗಳನ್ನ ತೆರವು ಮಾಡಿದರು. ಬಿಜೆಪಿ ಮುಖಂಡರಾದ ಸಂತೋಷ್ ಬೋಳಿಯಾರ್, ಜಗದೀಶ ಆಳ್ವ ಕುವೆತ್ತಬೈಲು, ಬಿಲ್ಲವ ವೇದಿಕೆ ಪ್ರಮುಖರಾದ ಎ.ಜೆ. ಶೇಖರ್, ಜೀವನ್ ಕೆರೆಬೈಲು, ಗಣೇಶ ಕಾಪಿಕಾಡು, ವಕೀಲರಾದ ಮೋಹನರಾಜ್ ಕೋಟೆಕಾರು ಮೊದಲಾದವರು ಉಪಸ್ಥಿತರಿದ್ದರು.
DYFI Conference in Mangalore, Koti Chennayya picture used in banner, Billava organisation demands to remove picture from the banners posted in the city.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm