ಬ್ರೇಕಿಂಗ್ ನ್ಯೂಸ್
24-02-24 12:29 pm Mangalore Correspondent ಕರಾವಳಿ
ಉಳ್ಳಾಲ, ಫೆ. 24: ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಸಲಹೆಗೆ ಮುಜರಾಯಿ ಇಲಾಖೆಯಿಂದ ಮನ್ನಣೆ ದೊರಕಿದ್ದು ಇಷ್ಟರ ವರೆಗೆ ದೇವಸ್ಥಾನದಲ್ಲಿ ಸೇವೆ ಸಲ್ಲಿಸುವವರಿಗೆ ಮಾತ್ರ ಸರ್ಕಾರದಿಂದ ವೇತನ ಲಭಿಸುತ್ತಿದ್ದರೆ ಮುಂದಿನ ದಿನಗಳಲ್ಲಿ ದೈವಸ್ಥಾನದಲ್ಲಿ ದೈವಗಳ ಚಾಕರಿ(ಸೇವೆ) ಮಾಡುವವರಿಗೂ ಸರ್ಕಾರಿ ವೇತನ ಸಿಗಲಿದೆ. ರಾಜ್ಯ ಸರ್ಕಾರದ ಕ್ರಾಂತಿಕಾರಿ ಯೋಜನೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಹರ್ಷ ವ್ಯಕ್ತಪಡಿಸಿದೆ.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ವಕ್ತಾರ ದಿನೇಶ್ ಕುಂಪಲ, ದೈವದ ಚಾಕರಿ ಮಾಡುವವರಿಗೆ ಬೇರೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲದ ಕಾರಣ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳಲ್ಲಿ ಬರುತ್ತಿದ್ದ ಸಣ್ಣ ಸಂಭಾವನೆ ಮಾತ್ರ ಜೀವನಕ್ಕೆ ಆಧಾರವಾಗಿತ್ತು. ಫೆ.20ರಂದು ನಡೆದ ವಿಧಾನಸಭಾ ಕಲಾಪದಲ್ಲಿ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಖಾತೆಯಲ್ಲಿ ತಿದ್ದುಪಡಿ ತರುವ ಮೂಲಕ ಹಲವಾರು ದೈವ ಚಾಕರಿ ಕುಟುಂಬಗಳಿಗೆ ಭದ್ರತೆ ಕಲ್ಪಿಸಿದ್ದಾರೆಂದು ತಿಳಿಸಿದರು.
ಮುಜರಾಯಿ ಇಲಾಖಾ ಸಚಿವರು ತಿದ್ದುಪಡಿ ಮಾಡುವ ಸಂದರ್ಭ ಯು.ಟಿ.ಖಾದರ್ ಸ್ಪೀಕರ್ ಸ್ಥಾನದಲ್ಲಿದ್ದರೂ ಕರಾವಳಿ ಭಾಗದ ದೈವ ಚಾಕರಿಯವರಿಗೆ ಸಂಭಾವನೆ, ಸವಲತ್ತು ನೀಡುವಂತೆ ನೀಡಿದ ಸಲಹೆ ಪರಿಗಣಿಸಲಾಗಿದೆ. ತಲೆ ಸರಿ ಇದ್ದವರು ಯು.ಟಿ.ಖಾದರ್ ಗೆ ದೈವದ ಪ್ರಸಾದ ಕೊಡಲಾರರು ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಟೀಕಿಸಿದ್ದರೂ, ಖಾದರ್ ಅದ್ಯಾವುದನ್ನೂ ಲೆಕ್ಕಿಸದೆ ದೈವ ಪಾತ್ರಿಗಳ ಪರ ನಿಂತಿದ್ದಾರೆಂದು ತಿಳಿಸಿದರು.
ಇದುವರೆಗೆ ದೇವಸ್ಥಾನಗಳಲ್ಲಿ 25 ಲಕ್ಷಕ್ಕಿಂತ ಹೆಚ್ಚು ಹಣ ಬಳಸಲು ರಾಜ್ಯ ಮುಜರಾಯಿ ಇಲಾಖೆ ಆಯುಕ್ತರ ಅನುಮತಿ ಬೇಕಿತ್ತು. ಆದರೆ ಈಗ 25 ಲಕ್ಷದಿಂದ ಒಂದು ಕೋಟಿ ಖರ್ಚಿಗೆ ಸಹಾಯಕ ಆಯುಕ್ತರು ಮತ್ತು ಐದು ಕೋಟಿ ವರೆಗಿನ ಖರ್ಚಿಗೆ ಜಿಲ್ಲಾಧಿಕಾರಿ ಅನುಮತಿಗೆ ಅವಕಾಶ ಕಲ್ಪಿಸಲಾಗಿದೆ. ಹಿಂದೆ 'ಎ' ಗ್ರೇಡ್ ದೇವಸ್ಥಾನಗಳಿಂದ 10 ಶೇ., 'ಬಿ' ಗ್ರೇಡ್ ನಿಂದ 5 ಶೇ. ಹಣ ಸರ್ಕಾರಕ್ಕೆ ಹೋಗುತ್ತಿತ್ತು. ಈಗ ಅದಕ್ಕೂ ಕಡಿವಾಣ ಹಾಕಿರುವ ರಾಮಲಿಂಗಾ ರೆಡ್ಡಿ, ಆ ಹಣ ನೇರವಾಗಿ 'ಸಿ' ಗ್ರೇಡ್ ದೇವಸ್ಥಾನಕ್ಕೆ ಹೋಗುವಂತೆ ಮಾಡಿದ್ದಾರೆ. ಅರ್ಚಕರ ಮಕ್ಕಳ ಶಿಕ್ಷಣಕ್ಕೆ ಐದರಿಂದ 50 ಸಾವಿರ ಸ್ಕಾಲರ್ಶಿಪ್ ಘೋಷಿಸಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮರಣ ಫಂಡ್ 34 ಸಾವಿರದಿಂದ ಎರಡು ಲಕ್ಷದ ವರೆಗೆ ಏರಿಕೆ ಮಾಡಿದ್ದು, ಎಲ್ಲಾ ಅರ್ಚಕರಿಗೆ ಆರೋಗ್ಯ ವಿಮೆ ಕಲ್ಪಿಸಲಾಗಿದೆ. ದೇವಸ್ಥಾನ ಕಟ್ಟುವ, ಮೂರ್ತಿ ಕೆತ್ತುವ ವಿಶ್ವಕರ್ಮ ಸಮಾಜಕ್ಕೆ ದೇವಸ್ಥಾನ ಸಂಪರ್ಕ ನಿಟ್ಟಿನಲ್ಲಿ ವ್ಯವಸ್ಥಾಪನಾ ಸಮಿತಿಯಲ್ಲಿ ಮೀಸಲಾತಿ ನೀಡಲಾಗಿದೆ. ಆದರೆ 'ಹಿಂದೂ ಒಂದು' ಎಂದು ಹೇಳುತ್ತಿದ್ದ ಬಿಜೆಪಿ ಹಿಂದೂ ಧರ್ಮ, ಕ್ಷೇತ್ರಗಳಿಗೆ ಏನೂ ಮಾಡಿಲ್ಲ. ಧಾರ್ಮಿಕ ದತ್ತಿ ಇಲಾಖೆ ಹಣ ಲೂಟಿ ಮಾಡಲಾಗುತ್ತಿದೆ ಎಂದು ಸುಳ್ಳಾರೋಪ ಹೊರಿಸಿ ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಂಬಿಸುವ ಷಡ್ಯಂತ್ರ ನಡೆಸಿದೆ ಎಂದು ದಿನೇಶ್ ಕುಂಪಲ ಟೀಕಿಸಿದರು.
ಕಾಂಗ್ರೆಸ್ ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಭಟ್ನಗರ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಹಾಗೂ ಮುಖಂಡ ವಿಶಾಲ್ ಕೊಲ್ಯ ಸುದ್ದಿಗೋಷ್ಠಿಯಲ್ಲಿದ್ದರು.
The facilities that are available to temple priests will be available to temple assistants in the future like in Kerala. This demand was realised by the initiative of Speaker Khader during the Assembly session on February 20. It is an honour to the people of Tulunadu,” said Dinesh Kumpala
26-11-24 06:56 pm
Bangalore Correspondent
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೇಗೌಡರಿಗೆ ಜನ ಗೌರ...
25-11-24 05:51 pm
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
26-11-24 07:32 pm
HK News Desk
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
26-11-24 08:23 pm
Udupi Correspondent
Mangalore, Police Anupam Agarwal IPS, DYFI; ಸ...
26-11-24 05:37 pm
Mangalore Astra Group, lucky draw: ಕಾರು, ಫ್ಲಾ...
25-11-24 11:14 pm
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm