ಬ್ರೇಕಿಂಗ್ ನ್ಯೂಸ್
27-02-24 08:32 pm Mangalore Correspondent ಕರಾವಳಿ
ಉಳ್ಳಾಲ, ಫೆ.27: ಜನರನ್ನ ಮಂಗ ಮಾಡಲು ಅತ್ಯಂತ ಶ್ರೇಷ್ಠ ನಟ ದೇಶದ ನಾಯಕನಾಗಿದ್ದಾನೆ. 2019ರಲ್ಲಿ ಕ್ಯಾಮೆರಾಮೆನ್ ಜತೆ ಗುಹೆ ಸೇರಿದ್ದವನು ಈಗ ಚುನಾವಣೆ ಬಂದಾಗ ಅಂಡರ್ ವಾಟರ್ ಗೆ ನುಗ್ಗಿದ್ದಾನೆ, ಮುಂದೆ ಚಂದ್ರನ ಮೇಲೇರುತ್ತಾನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಡಿವೈಎಫ್ಐ 12 ನೇ ರಾಜ್ಯ ಸಮ್ಮೇಳನದ ಪ್ರಯುಕ್ತ ತೊಕ್ಕೊಟ್ಟು ಬಳಿಯ ಕಲ್ಲಾಪಿನ ಯುನಿಟಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬಹಿರಂಗ ಸಮಾರೋಪ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಹಿಂದೆ ಸ್ವಾತಂತ್ರ್ಯಕ್ಕಾಗಿ ಉಪವಾಸ ಮಾಡುತ್ತಿದ್ದವರನ್ನ ಕಂಡಿದ್ದೇವೆ. ಆದರೆ ಇಂದು ದೇವಸ್ಥಾನ ಉದ್ಘಾಟನೆಗಾಗಿ ಉಪವಾಸ ಮಾಡೋರು ದೇಶದ ನಾಯಕರಾಗಿದ್ದಾರೆ. ಎಲ್ಲಾ ಧರ್ಮದ ಅಂಧ ಭಕ್ತರೇ ಸಮಾಜಕ್ಕೆ ಸಮಸ್ಯೆ. ದೇಶದಲ್ಲಿ ದೇವಸ್ಥಾನವನ್ನು ಉದ್ಘಾಟನೆ ಮಾಡುವ ಕೆಲಸ ಯಾರಾದರೂ ಪ್ರಧಾನಿ ಮಾಡಿದ್ದಾರಾ.. ಕೆಲಸ ಅಪೂರ್ಣವಾಗಿದ್ದರೂ ಉದ್ಘಾಟನೆ ಮಾಡಿದ್ದಾರೆ. ಮಂದಿರಕ್ಕೆ ಸಂಗ್ರಹಿಸಿದ ಇಟ್ಟಿಗೆ, ದುಡ್ಡೆಲ್ಲಾ ಎಲ್ಲಿ ಹೋಯ್ತು..? ಈಗ ಅದರಿಂದ ಮಂದಿರ ಕಟ್ಟುತ್ತಿಲ್ಲ ತಾನೇ..? ಎಂದು ಪ್ರಶ್ನಿಸಿದರು.
ಜನರನ್ನ ಮಂಗ ಮಾಡಿಸೋ ದೊಡ್ಡ ನಾಯಕ ನಟ ಮಶ್ರೂಮ್ ತಿಂದು, ದಿನಕ್ಕೆ 5 ಬಟ್ಟೆ ಬದಲಿಸಿ ಪ್ರಪಂಚ ಸುತ್ತೋದು ಯಾರ ಹಣದಲ್ಲಿ. ಮಣಿಪುರ ಹೊತ್ತಿ ಉರಿಯುತ್ತಿರುವಾಗ ಆಫ್ರಿಕಾದಿಂದ ಮರಳಿದ್ದ ಈತ ಅಲಹಾಬಾದ್ ನಿಂದ ಐದು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳನ್ನ ಉದ್ಘಾಟಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ. ನಾನು ಅದರಲ್ಲಿ ಒಂದಾದರೂ ರೈಲು ಮಣಿಪುರಕ್ಕೆ ಇದೆಯಾ ಅಂತ ಕೇಳಿದಕ್ಕೆ ಟ್ವೀಟ್ ಡಿಲೀಟ್ ಮಾಡಿದ್ದಾನೆ. ನಾವು ಇಂತವರನ್ನ ನಿರಂತರ ಪ್ರಶ್ನಿಸಿದರೇ ನಮ್ ಧ್ವನಿ ಕೇಳಿಸ್ತದೆ ಅವರಿಗೆ. ಈತ ವಂದೇ ಭಾರತ್ ಗೆ ಬಾವುಟ ತೋರಿಸಿದಷ್ಟು ಸ್ಟೇಷನ್ ಮಾಸ್ಟರ್ ಸಹ ಬಾವುಟ ತೋರಿಸಿರಲಿಕ್ಕಿಲ್ಲ, ಕರ್ಕಷ ಲೌಡ್ ಸ್ಪೀಕರ್ ಧ್ವನಿ ಅವನದ್ದು. ದೇಹಕ್ಕಾದ ಗಾಯಗಳು ಸುಮ್ಮನಿದ್ರು ಕಡಿಮೆಯಾಗುತ್ತೆ, ಆದ್ರೆ ದೇಶಕ್ಕಾದ ಗಾಯ ನಾವು ಸುಮ್ಮನಿದ್ದಷ್ಟು ಹೆಚ್ಚಾಗುತ್ತದೆ ಎಂದು ಹೇಳಿದರು.
ಹಿಂದೂ ರಾಷ್ಟ್ರ ಅಂತ ನಿರಂತರ ಬೊಬ್ಬೆ ಹೊಡೆಯುತ್ತಿದ್ದಾರೆ, ಹಿಂದೂ ರಾಷ್ಟ್ರ ಆದ ಮೇಲೆ ಹಿಂದೂ ರಾಷ್ಟ್ರವಾಗಿರಲ್ಲ. ಮತ್ತೆ ದೇಶದಲ್ಲಿ ಬ್ರಾಹ್ಮಣ, ಕ್ಷತ್ರಿಯ, ದಲಿತ ಎಂದು ಜಾತಿ ವ್ಯವಸ್ಥೆ ಮೇಳೈಸುತ್ತೆ. ಬಿಜೆಪಿ ಮತ್ತು ಆರ್.ಎಸ್.ಎಸ್ ನಂತಹ ಕಿಡ್ನಾಪಿಂಗ್ ಟೀಮ್ ಈ ದೇಶದಲ್ಲಿ ಬೇರೆ ಯಾವುದು ಇಲ್ಲ ಮಾತೆತ್ತಿದ್ರೆ ರಾಮಮಂದಿರ, ಮಸೀದಿ, ಹಿಂದೂ, ಮುಸ್ಲಿಂ ಅಂತಾರೆ. ಎಷ್ಟು ಅಂತಾ ಅಗೆಯುತ್ತಾ ಹೋಗ್ತೀರಾ ನೀವು .?ಮುಂದೆ ಹರಪ್ಪಾ, ಮೊಹೆಂಜದಾರೋ ಸಿಗಬಹುದು. ಹಾಗಾದ್ರೆ ಮತ್ತೆ ಶಿಲಾಯುಗಕ್ಕೆ ಹೋಗ್ತೀರಾ ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ಅಂದರೆ ಮೆಜಾರಿಟಿ ಅಲ್ಲ. ಮೆಜಾರಿಟಿ ಮುಖ್ಯವಾದ್ರೆ ಕಾಗೆ ರಾಷ್ಟ್ರೀಯ ಪಕ್ಷಿ ಆಗಬೇಕಿತ್ತು. ಹಸು ರಾಷ್ಟ್ರೀಯ ಪ್ರಾಣಿ ಆಗಬೇಕಿತ್ತು. ಗಿಳಿ, ನವಿಲಿನಲ್ಲಿ ವಿಶೇಷತೆ ಇರೋದ್ರಿಂದ ಮೇಲಿನ ಸ್ಥಾನಕ್ಕೆ ಹೋಗಿವೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಕೊಟ್ಟವರಲ್ಲಿ ಅಧಿಕಾರದ ಶಕ್ತಿ ಇದೆ. ಮೊನ್ನೆ ಪಾರ್ಲಿಮೆಂಟ್ ಒಳಗೆ ನುಗ್ಗಿ ಗಲಾಟೆ ಮಾಡಿದವರು ನಿರುದ್ಯೋಗದ ಸಮಸ್ಯೆ ಹೇಳಿದ್ದರು. ಯುವಕರು ಹಾಗೆ ಯಾಕೆ ಮಾಡಿದರು ಅಂತ ಯೋಚನೆ ಮಾಡಬೇಕಿದೆ. ನಾನು ಬಾಲ್ಯದಲ್ಲಿದ್ದಾಗ ಮಂಗಳೂರು ಹೀಗಾಗುತ್ತೆ ಎಂದು ಎನಿಸಿರಲಿಲ್ಲ. ಈಗ ಎಷ್ಟು ಜನ ಯುವಕರು ಜೈಲಿನಲ್ಲಿ ಇದ್ದಾರೆ. ಯಾರಾದ್ರೂ ಎಂಪಿ, ಎಂಎಲ್ಎಗಳ ಮಕ್ಕಳು ಜೈಲಿಗೆ ಹೋಗಿದ್ದಾರೆಯೇ.. ಇವರು ಗಲಾಟೆ ಮಾಡಿಸಿ ಅಮಾಯಕರನ್ನು ಜೈಲಿಗೆ ಹಾಕಿಸುತ್ತಿದ್ದಾರೆ ಎಂದು ಪ್ರಕಾಶ ರೈ ಹೇಳಿದರು.
ಡಿವೈಎಫ್ ಐ ಅಖಿಲ ಭಾರತ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಎ.ಎ.ರಹೀಮ್ ಅವರು ಪ್ರಧಾನ ಭಾಷಣಗೈದರು. ಬಹಿರಂಗ ಸಭೆಗೂ ಮುನ್ನ ಕುತ್ತಾರಿನಿಂದ ಕಲ್ಲಾಪುವಿನ ಯುನಿಟಿ ಸಭಾಂಗಣದ ವರೆಗೆ ಡಿವೈಎಫ್ ಐ ಕಾರ್ಯಕರ್ತರ ಆಕರ್ಷಕ ಯೂತ್ ಮಾರ್ಚ್ ನಡೆಯಿತು. ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಮೊದಲಾದವರು ಉಪಸ್ಥಿತರಿದ್ದರು.
Multilingual actor Prakash Raj criticised Prime Minister Narendra Modi for performing underwater pooja in Dwarka while speaking at the Democratic Youth Federation of India (DYFI) event in Mangaluru on Tuesday. Prakash Raj claimed that Modi offered prayers underwater in Dwarka to woo the voters for upcoming elections.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm