Chief Minister Siddaramaiah, 44 corporations: 44 ನಿಗಮ, ಮಂಡಳಿಗೆ ಅಧ್ಯಕ್ಷರ ನೇಮಕ, ಶಾಸಕರನ್ನು ಬಿಟ್ಟು ಪಕ್ಷದ ಕಾರ್ಯಕರ್ತರಿಗೆ ಮಣೆ, ಮೂಡಾಗೆ ಸ್ಪೀಕರ್ ಖಾದರ್ ಆಪ್ತ ಸದಾಶಿವ ಉಳ್ಳಾಲ್, ಗೇರು ಮಂಡಳಿಗೆ ಮಮತಾ ಗಟ್ಟಿ, ತುಳು ಅಕಾಡೆಮಿಗಿಲ್ಲ ಪಟ್ಟಿಯಲ್ಲಿ ಸ್ಥಾನ

29-02-24 11:11 am       Mangalore Correspondent   ಕರಾವಳಿ

ರಾಜ್ಯದ ಕಾಂಗ್ರೆಸ್ ಸರಕಾರ ಕೊನೆಗೂ 44 ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನಾಗಿ ಪಕ್ಷದ ಪ್ರಮುಖರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಸಿಎಂ ಸಿದ್ದರಾಮಯ್ಯ ಆದೇಶ ಮಾಡಿರುವ ನೇಮಕಾತಿ ಪಟ್ಟಿಯನ್ನು ಮುಖ್ಯಮಂತ್ರಿಯವರ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.

ಮಂಗಳೂರು, ಫೆ.29: ರಾಜ್ಯದ ಕಾಂಗ್ರೆಸ್ ಸರಕಾರ ಕೊನೆಗೂ 44 ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನಾಗಿ ಪಕ್ಷದ ಪ್ರಮುಖರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಸಿಎಂ ಸಿದ್ದರಾಮಯ್ಯ ಆದೇಶ ಮಾಡಿರುವ ನೇಮಕಾತಿ ಪಟ್ಟಿಯನ್ನು ಮುಖ್ಯಮಂತ್ರಿಯವರ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸ್ಪೀಕರ್ ಯುಟಿ ಖಾದರ್ ಆಪ್ತ, ಸದಾಶಿವ ಉಳ್ಳಾಲ್ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೆ, ಉಳ್ಳಾಲ ಕ್ಷೇತ್ರದವರೇ ಆದ ಕಾಂಗ್ರೆಸ್ ನಾಯಕಿ, ಮಾಜಿ ಜಿಪಂ ಅಧ್ಯಕ್ಷೆ ಮಮತಾ ಗಟ್ಟಿ ಅವರನ್ನು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಹಿಂದೆ ಮಮತಾ ಗಟ್ಟಿ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ಆಗಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಮೂಡಾ ಹುದ್ದೆಗೆ ಖಾದರ್ ಆಪ್ತ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಕಣ್ಣಿಟ್ಟು ಬಹಳ ಸಮಯದಿಂದ ಲಾಬಿ ನಡೆಸಿದ್ದರು. ಅವರಿಗೂ ಅವಕಾಶ ತಪ್ಪಿದ್ದು, ಹಿರಿಯ ಕಾರ್ಯಕರ್ತ ಎಂಬ ನೆಲೆಯಲ್ಲಿ ಉಳ್ಳಾಲ ಘಟಕದ ಅಧ್ಯಕ್ಷರಾಗಿದ್ದ ಸದಾಶಿವ ಉಳ್ಳಾಲ್ ಅವರನ್ನು ಮೂಡಾಗೆ ನೇಮಕ ಮಾಡಲಾಗಿದೆ.

ಉಳಿದಂತೆ ಕರಾವಳಿಗೆ ಸಂಬಂಧಪಟ್ಟ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ಮಂಗಳೂರು, ಉಡುಪಿಯವರಲ್ಲದ ಮಾಲಾ ನಾರಾಯಣ ರಾವ್ ಎಂಬವರನ್ನು ಆಯ್ಕೆ ಮಾಡಲಾಗಿದೆ. ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮಂತ್ ಗೌಡ ಅವರನ್ನು ಭದ್ರಾ ಅಭಯಾರಣ್ಯ ವಲಯ, ಕಾಡಾ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಸಾಧು ಕೋಕಿಲ ಅವರನ್ನು ಆಯ್ಕೆ ಮಾಡಲಾಗಿದೆ. ಕರಾವಳಿಯಲ್ಲಿ ಬಹು ಬೇಡಿಕೆಯಲ್ಲಿದ್ದ ತುಳು ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರ ನೇಮಕ ಆಗಿಲ್ಲ. ತುಳು ಅಕಾಡೆಮಿಗೆ ಈ ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಎಸಿ ಭಂಡಾರಿ ಅವರೇ ಆಕಾಂಕ್ಷಿಯಾಗಿದ್ದರು. ವಯಸ್ಸು ಮೀರಿದ್ದರೂ ಅವರನ್ನೇ ಮತ್ತೆ ನೇಮಕ ಮಾಡಲಾಗುತ್ತೆ ಎಂಬ ಸುದ್ದಿಗಳಿದ್ದವು.

The Congress government in the state has finally elected party leaders as chairpersons of 44 corporations, boards and authorities. The list of appointments ordered by Chief Minister Siddaramaiah has been published on the Chief Minister's Twitter account.