Mangalore, Arun Kumar Puthila, Lok Sabha: ಲೋಕಸಭೆ ಸೇರಿ ಮುಂದಿನೆಲ್ಲ ಚುನಾವಣೆಗೆ ಪುತ್ತಿಲ ಪರಿವಾದ ಸ್ಪರ್ಧೆ ; ಮುಖಂಡರ ಘೋಷಣೆ, ಹುದ್ದೆಗಾಗಿ ಪಟ್ಟು ಹಿಡಿದು ಬಿಸಿಯೇರಿಸಲು ಪ್ಲಾನ್

29-02-24 07:03 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಲೋಕಸಭೆ ಚುನಾವಣೆಯಲ್ಲಿ ಅರುಣ್ ಪುತ್ತಿಲ ಪಕ್ಷೇತರ ಸ್ಪರ್ಧಿಸಲಿದ್ದಾರೆ ಎಂದು ಪುತ್ತಿಲ ಪರಿವಾರದ ಮುಖಂಡರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ಮಂಗಳೂರು, ಫೆ.29: ದಕ್ಷಿಣ ಕನ್ನಡ ಲೋಕಸಭೆ ಚುನಾವಣೆಯಲ್ಲಿ ಅರುಣ್ ಪುತ್ತಿಲ ಪಕ್ಷೇತರ ಸ್ಪರ್ಧಿಸಲಿದ್ದಾರೆ ಎಂದು ಪುತ್ತಿಲ ಪರಿವಾರದ ಮುಖಂಡರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ಅರುಣ ಪುತ್ತಿಲ ಬಿಜೆಪಿ ಸೇರ್ಪಡೆಯ ಬಗ್ಗೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು. ಆದರೆ ಪುತ್ತಿಲ ಪರಿವಾರ ಪುತ್ತೂರು ಮಂಡಲಾಧ್ಯಕ್ಷ ಸ್ಥಾನದ ಬೇಡಿಕೆ ಇರಿಸಿತ್ತು. ಆ ರೀತಿಯ ಬೇಡಿಕೆಗೆ ರಾಜ್ಯ ನಾಯಕರು ಮಣೆ ಹಾಕಿಲ್ಲ. ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಷರತ್ತಿಲ್ಲದೆ ಪಕ್ಷ ಸೇರುವಂತೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಪುತ್ತಿಲ ಪರಿವಾರದ ನಾಯಕರು ಸುದ್ದಿಗೋಷ್ಟಿ ನಡೆಸಿದ್ದು ನಾವು ಹಿಂದುತ್ವದ ರಕ್ಷಣೆಗಾಗಿ ಚುನಾವಣೆ ಸ್ಪರ್ಧೆ ಮಾಡುತ್ತೇವೆ. ಮುಂದಿನ ಲೋಕಸಭೆ ಸೇರಿದಂತೆ ಎಲ್ಲ ಚುನಾವಣೆಗೂ ಸ್ಪರ್ಧೆ ಮಾಡಲಿದ್ದೇವೆ. ಜಿಲ್ಲೆಯಾದ್ಯಂತ ಪುತ್ತಿಲ ಪರಿವಾರ ಸಂಘಟನೆಯನ್ನು ಬಲಪಡಿಸುತ್ತೇವೆ ಎಂದು ಹೇಳಿದ್ದಾರೆ.

ಆಮೂಲಕ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅರುಣ್ ಪುತ್ತಿಲ ಬಂಡಾಯ ಸ್ಪರ್ಧಿಸುತ್ತಾರೆ ಅನ್ನುವ ಸುಳಿವನ್ನು ನೀಡಿದ್ದಾರೆ. ಅಲ್ಲದೆ, ಲೋಕಸಭೆ ಬಂಡಾಯ ಸಾರುವ ಸುಳಿವು ಕೊಟ್ಟು ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸುವ ಯತ್ನ ಮಾಡಿದ್ದಾರೆ. ಈಗಾಗಲೇ ಜಿಲ್ಲಾ ಬಿಜೆಪಿ ನಾಯಕರು ಪುತ್ತೂರು ಮಂಡಲದ ಅಧ್ಯಕ್ಷ ಸ್ಥಾನವನ್ನು ತುಂಬದೆ ಉಳಿಸಿದ್ದಾರೆ. ಪಕ್ಷಕ್ಕೆ ಪುತ್ತಿಲ ಸೇರ್ಪಡೆಯಾದರೆ ಅವರಿಗೇ ಆ ಸ್ಥಾನ ಉಳಿಸಿಟ್ಟಂತೆ ಕಂಡಿತ್ತು. ಆದರೆ, ಬೇಷರತ್ತಾಗಿ ಪಕ್ಷ ಸೇರ್ಪಡೆಯಾಗುವಂತೆ ಬಾಹ್ಯವಾಗಿ ಬಿಜೆಪಿ ನಾಯಕರು ಸೂಚಿಸಿದ್ದರು. ಪಕ್ಷಕ್ಕೆ ಬಂದ ಮೇಲೆ ನಾವು ಹುದ್ದೆ, ಜವಾಬ್ದಾರಿ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂಬ ನಿರ್ಧಾರಕ್ಕೂ ಬಂದಿದ್ದಾರೆ. ಆದರೆ ಪುತ್ತಿಲ ಪರಿವಾರ ಲೋಕಸಭೆ ಚುನಾವಣೆಯಲ್ಲೇ ತೊಡೆ ತಟ್ಟಲು ತಯಾರಿ ನಡೆಸಿದಂತೆ ಭಾಸವಾಗಿದೆ.

Dakshina Kannada Lok Sabha Constituency Arun Kumar Puthila Decided To Contest Election As Independent Candidate.