ಬ್ರೇಕಿಂಗ್ ನ್ಯೂಸ್

Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ದೌರ್ಜನ್ಯ ; ಬೇಕಲ ಶಿಕ್ಷಣಾಧಿಕಾರಿ, ರೈಲ್ವೇ ಉದ್ಯೋಗಿ, ಜಮಾತೆ ಇಸ್ಲಾಮಿ, ಲೀಗ್ ಕಾರ್ಯಕರ್ತರು ಸೇರಿ ಹತ್ತು ಮಂದಿ ಪೊಲೀಸ್ ಬಲೆಗೆ, ಕಾಸರಗೋಡಿನಲ್ಲಿ ಸಂಚಲನ ಮೂಡಿಸಿದ ಪ್ರಕರಣ     |    ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆ    |    Mahesh Shetty Timarodi, Arms, FIR: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿಯಲ್ಲಿ ಮತ್ತೊಂದು ಎಫ್ಐಆರ್, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲು    |   

Pro-Pak slogan case, VHP in Mangalore protest: ಪಾಕ್ ಪರ ಘೋಷಣೆ ; ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್ ಬಂಧನಕ್ಕೆ ಆಗ್ರಹಿಸಿ ಬಜರಂಗದಳ ಪ್ರತಿಭಟನೆ, ಪ್ರತಿಕೃತಿ ದಹನ

29-02-24 10:39 pm       Mangalore Correspondent   ಕರಾವಳಿ

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದನ್ನು ಖಂಡಿಸಿ ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್ ಪ್ರತಿಕೃತಿಯನ್ನು ಬೆಂಕಿ ಕೊಟ್ಟು ದಹಿಸಿ ಪ್ರತಿಭಟನೆ ನಡೆಸಿದರು.

ಮಂಗಳೂರು, ಫೆ.29: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದನ್ನು ಖಂಡಿಸಿ ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್ ಪ್ರತಿಕೃತಿಯನ್ನು ಬೆಂಕಿ ಕೊಟ್ಟು ದಹಿಸಿ ಪ್ರತಿಭಟನೆ ನಡೆಸಿದರು.

ನಗರದ ಕದ್ರಿ ಮಲ್ಲಿಕಟ್ಟೆಯ ವೃತ್ತದಲ್ಲಿ ಗುರುವಾರ ಸಂಜೆಯ ವೇಳೆಗೆ ನೂರಾರು ಕಾರ್ಯಕರ್ತರು ಸೇರಿ ಪಾಕ್ ಪರ ಘೋಷಣೆ ಕೂಗಿದ ಕೃತ್ಯವನ್ನು ಖಂಡಿಸಿ ಧಿಕ್ಕಾರ ಕೂಗಿದ್ದಾರೆ. ಕಾಂಗ್ರೆಸ್ ರಾಜ್ಯ ಸರಕಾರ ಮತ್ತು ಕಾಂಗ್ರೆಸ್ ನಾಯಕರಿಗೆ ಧಿಕ್ಕಾರ ಹಾಕಿದ್ದಾರೆ.

ಬಳಿಕ ನಾಸಿರ್ ಹುಸೇನ್ ಪ್ರತಿಕೃತಿಯನ್ನು ನೆಲದಲ್ಲಿ ಹಾಕಿ, ತುಳಿದು ಕೊನೆಗೆ ಬೆಂಕಿ ಕೊಟ್ಟು ಸುಟ್ಟು ಹಾಕಿದ್ದಾರೆ. ಶಿವಾನಂದ ಮೆಂಡನ್ ನೇತೃತ್ವದಲ್ಲಿ ಕಾರ್ಯಕರ್ತರು ದೇಶದ್ರೋಹಿ ನಾಸಿರ್ ಹುಸೇನ್ ಮತ್ತು ಬೆಂಬಲಿಗರನ್ನು ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ.

Pro-Pak slogan case, VHP in Mangalore protest burning the image of Nasir.