Koragajjana Adi Kshetra padayatra at Kuttar in Mangalore: ಹಿಂದೂ ಸಮಾಜದ ಐಕ್ಯತೆ, ಲೋಕ ಕಲ್ಯಾಣಾರ್ಥ ಮಾ.17 ರಂದು "ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ" ಪಾದಯಾತ್ರೆ, ಕುತ್ತಾರಿನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ 

02-03-24 10:54 pm       Mangalore Correspondent   ಕರಾವಳಿ

ಹಿಂದೂ ಸಮಾಜದ ಐಕ್ಯತೆ ಮತ್ತು ಲೋಕ ಕಲ್ಯಾಣಾರ್ಥ ಮಂಗಳೂರು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಇದೇ ಮಾರ್ಚ್ 17 ರಂದು ಕದ್ರಿ ಮಂಜುನಾಥೇಶ್ವರ ಕ್ಷೇತ್ರದಿಂದ ಕುತ್ತಾರು ದೆಕ್ಕಾಡಿನ ಕೊರಗಜ್ಜನ ಆದಿ ಸ್ಥಳಕ್ಕೆ " ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ" ಹೆಸರಿನಲ್ಲಿ ನಾಲ್ಕನೇ ವರುಷದ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕುತ್ತಾರಿನ ಕೊರಗಜ್ಜನ ಆದಿ ಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು.

ಉಳ್ಳಾಲ, ಮಾ.2: ಹಿಂದೂ ಸಮಾಜದ ಐಕ್ಯತೆ ಮತ್ತು ಲೋಕ ಕಲ್ಯಾಣಾರ್ಥ ಮಂಗಳೂರು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಇದೇ ಮಾರ್ಚ್ 17 ರಂದು ಕದ್ರಿ ಮಂಜುನಾಥೇಶ್ವರ ಕ್ಷೇತ್ರದಿಂದ ಕುತ್ತಾರು ದೆಕ್ಕಾಡಿನ ಕೊರಗಜ್ಜನ ಆದಿ ಸ್ಥಳಕ್ಕೆ " ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ" ಹೆಸರಿನಲ್ಲಿ ನಾಲ್ಕನೇ ವರುಷದ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕುತ್ತಾರಿನ ಕೊರಗಜ್ಜನ ಆದಿ ಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು.

ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಕೊರಗಜ್ಜನ ಚರಿತ್ರೆಯು ಕದಿರೆಯಿಂದ ಕುತ್ತಾರಿನ ವರೆಗೆ ಇದ್ದು ಸಾಮಾನ್ಯನಾಗಿದ್ದ ಕೊರಗ ತನಿಯ ತನ್ನ ಸತ್ಯದ ಕಾಯಕದಿಂದ ಶಕ್ತಿರೂಪವಾಗಿ ಅವತರಿಸಿ ಕುತ್ತಾರಿನಲ್ಲಿ ನೆಲೆಸಿದ್ದು ಇದರ ಸಂಕೇತವಾಗಿ ವಿಶ್ವಹಿಂದು ಪರಿಷತ್‌, ಬಜರಂಗದಳವು ಕಳೆದ ಮೂರು ವರ್ಷಗಳಿಂದ ಕದ್ರಿ ಮಂಜುನಾಥ ಕ್ಷೇತ್ರದಿಂದಲೇ ಕುತ್ತಾರಿಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕೆಲವೇ ವರುಷಗಳ ಹಿಂದೆ ಜನ ಸಂಚಾರವೇ ಇಲ್ಲದ ಕುತ್ತಾರಿನ ಪ್ರದೇಶದಲ್ಲೀಗ ದೇಶದ ಮೂಲೆ ಮೂಲೆಗಳಿಂದ ಹೊಸ, ಹೊಸ ಜನರು ಬಂದು ಕೊರಗಜ್ಜ ದೈವಕ್ಕೆ ತಲೆಬಾಗಿ ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಹರಕೆ ಹೊತ್ತುಕೊಳ್ಳುತ್ತಿದ್ದು ಕ್ಷೇತ್ರವು ಕಾರಣೀಕ ಸ್ಥಳವಾಗಿ ಬೆಳಗುತ್ತಿದೆ ಎಂದರು. 

ದೈವಾರಾಧಕ ರೋಹಿತ್‌ ಉಳ್ಳಾಲ್ ಮಾತನಾಡಿ "ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ" ಪಾದಯಾತ್ರೆಯು ಮಾ.17ರಂದು ಕದ್ರಿ ಮಂಜುನಾಥೇಶ್ವರ ಕ್ಷೇತ್ರದಿಂದ ಬೆಳಗ್ಗೆ 6 ಗಂಟೆಗೆ ಹೊರಟು 9.30 ಗಂಟೆಗೆ ಕುತ್ತಾರು ದೆಕ್ಕಾಡುವಿಗೆ ತಲುಪಿ ಸಮಾರೋಪ ಸಮಾರಂಭ ನಡೆಯಲಿದೆ. ಕೊರಗಜ್ಜನ ಆದಿ ಸ್ಥಳವು ಬೇಡಿದವರ ಇಷ್ಟಾರ್ಥ ನೆರವೇರಿಸುವ ಕಾರಣಿಕ ಕ್ಷೇತ್ರವಾಗಿರುವುದರಿಂದ ಕಳೆದ ಮೂರು ವರುಷಗಳಿಂದಲೂ ಜಿಲ್ಲೆಯ ಎಲ್ಲಾ ಕಡೆಗಳಿಂದ ಸಹಸ್ರಾರು ಜನರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ಈ ಬಾರಿಯೂ ಅದೇ ರೀತಿ ಭಕ್ತಾದಿಗಳು ಬರಿಗಾಲಿಂದ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆಂದು ಹೇಳಿದರು.

ಕೊರಗತನಿಯ ದೈವದ ಆದಿಸ್ಥಳ ದೆಕ್ಕಾಡು ಕುತ್ತಾರ್ ಇದರ ಟ್ರಸ್ಟಿ ದೇವಿಪ್ರಸಾದ್ ಶೆಟ್ಟಿ, ದೈವ ನರ್ತಕ ಮಾಯಿಲ ದೆಕ್ಕಾಡು, ವಿ.ಹಿಂ.ಪ ಉಳ್ಳಾಲ ನಗರ ಪ್ರಖಂಡ ಅಧ್ಯಕ್ಷ ನಾರಾಯಣ ಕುಂಪಲ, ಕಾರ್ಯದರ್ಶಿ ಕಿಶನ್ ತಾರಿಪಡ್ಪು, ವಿ.ಹಿಂ.ಪ ಜಿಲ್ಲಾ ಸಂಪರ್ಕ ಪ್ರಮುಖ್ ಪ್ರವೀಣ್ ಕುತ್ತಾರ್, ಯತೀಶ್ ಶೆಟ್ಟಿ ಪಂಡಿತ್ ಹೌಸ್ ಮೊದಲಾದವರು ಉಪಸ್ಥಿತರಿದ್ದರು.

Unity of Hindu Samaj, Lok Kalyanartha on March 17, walk to Koragajjana Adi Kshetra" padayatra at Kuttar in Mangalore.