ಬ್ರೇಕಿಂಗ್ ನ್ಯೂಸ್
04-03-24 10:14 pm Mangalore Correspondent ಕರಾವಳಿ
ಉಳ್ಳಾಲ, ಮಾ.4: ಗಟ್ಟಿ ಸಮುದಾಯದವರು ಸೋಮೇಶ್ವರ ಸೋಮನಾಥ ದೇವಸ್ಥಾನವನ್ನ ನಮ್ಮದೆಂದು ಹೇಳುತ್ತಲೇ ಹೋರಾಟ ನಡೆಸಿದ್ದಲ್ಲದೆ ನಾವು ಲಾಸು, ಲಾಸು ಅಂತ ಅಳುತ್ತಿದ್ದರು. ಅದಕ್ಕಾಗಿಯೇ ನಾನು ಸೋಮೇಶ್ವರದ ಮಂಡಲ ಪ್ರಧಾನನಾಗಿದ್ದಾಗ ಸೋಮನಾಥ ದೇವಸ್ಥಾನವನ್ನ ಮುಜರಾಯಿ ಇಲಾಖೆಗೆ ಸೇರಿಸಿದ್ದೆ. ನಾನು ಅಂದು ತೆಗೆದ ನಿರ್ಧಾರ ಸರಿಯಾಗಿದೆ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿರುವ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ವಿರುದ್ಧ ಗಟ್ಟಿ ಸಮಾಜ ಬಾಂಧವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೊಂಡಾಣ ಕ್ಷೇತ್ರದ ಭಂಡಾರಮನೆ ಧ್ವಂಸ ಪ್ರಕರಣದ ವಿಚಾರದಲ್ಲಿ ಭಾನುವಾರ ತೊಕ್ಕೊಟ್ಟಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು ಗಟ್ಟಿ ಸಮಾಜ ಬಾಂಧವರಿಗೆ ಅವಹೇಳನ ಮಾಡಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ.
ಮಾಧ್ಯಮದ ಮುಂದೆ ಮಾತನಾಡಿದ್ದ ಸದಾಶಿವ ಅವರು ನಾನು ಸೋಮೇಶ್ವರದ ಮಂಡಲ ಪ್ರಧಾನನಾಗಿದ್ದಾಗ ಸೋಮನಾಥ ದೇವಸ್ಥಾನವನ್ನ ಗಟ್ಟಿ ಸಮುದಾಯದವರು ಯಾವಾಗಲೂ ನಮ್ಮದೆಂದು ಹೇಳಿ ಹೋರಾಟ ಮಾಡುತ್ತಿದ್ದರು. ವಾರ್ಷಿಕ ಜಾತ್ರೆ ಮುಗಿದ ನಂತರವೂ ಲಾಸು, ಲಾಸಂತ ಹೇಳುತ್ತಿದ್ದರು. ನನಗೆ ಊರವರು, ಭಕ್ತಾಧಿಗಳ ಒತ್ತಡ ಬಂದ ಹಿನ್ನಲೆಯಲ್ಲಿ ದೇವಸ್ಥಾನವನ್ನ ಅಂದು ಮುಜರಾಯಿ ಇಲಾಖೆಯ ಅಧೀನಕ್ಕೆ ಸೇರಿಸಿದ್ದೆ. ಅಂದು ನಾನು ತೆಗೆದ ನಿರ್ಧಾರವು ಸರಿಯಾಗಿದೆ. ಈವಾಗ ಸೋಮನಾಥ ಕ್ಷೇತ್ರವು ಎಷ್ಟು ಅಭಿವೃದ್ಧಿಗೊಂಡಿದೆ ಎಂದು ಸದಾಶಿವ ಉಳ್ಳಾಲ್ ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದು ಅದರ ವೀಡಿಯೋ ವೈರಲ್ ಆಗಿದೆ. ಸದಾಶಿವ ಉಳ್ಳಾಲ್ ಅವರಿಗೆ ಕಳೆದ ವಾರ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಲಭಿಸಿತ್ತು.
ತಮ್ಮ ಜಾತಿಯ ಹೆಸರೆತ್ತಿ ತುಚ್ಚವಾಗಿ ಮಾತನಾಡಿದ ಸದಾಶಿವ ಉಳ್ಳಾಲ್ ವಿರುದ್ಧ ಗಟ್ಟಿ ಸಮಾಜ ಬಾಂಧವರು ಉರಿದು ಬಿದ್ದಿದ್ದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
Mangalore kondana temple, Ullal Block Congress president sadashiv ullal statement sparks controversy among Gatti community.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 03:09 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm