ಬ್ರೇಕಿಂಗ್ ನ್ಯೂಸ್
05-03-24 05:50 pm Mangalore Correspondent ಕರಾವಳಿ
ಕಾರವಾರ, ಮಾ.5: ಚುನಾವಣೆಗೆ ಸ್ಪರ್ಧಿಸಲು ಯಾರಾದ್ರೂ ಯುವಕರು ತುಂಬ ಸಶಕ್ತರಾಗಿದ್ದರೆ ಬನ್ನಿ.. ಇಂದೇ ಕುರ್ಚಿ ಮುಂದೆ ಇಟ್ಟು ಹೊಗ್ತೇನಿ. ಧಮ್ ಇದ್ರೆ ಮುಂದೆ ಬನ್ನಿ ಎಂದು ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ, ಬಿಜೆಪಿ ಕಾರ್ಯಕರ್ತರಿಗೆ ಸವಾಲು ಹಾಕಿದ್ದಾರೆ.
ಭಟ್ಕಳದ ಮಾವಳ್ಳಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಟೇಬಲ್ ಮೇಲೆ ಕುರ್ಚಿ ಇಟ್ಟು ಮುಕ್ತ ಪಂಥಾಹ್ವಾನ ಕೊಟ್ಟು ಕಾರ್ಯಕರ್ತರನ್ನೇ ಸಂಸದ ಅನಂತಕುಮಾರ ಹೆಗಡೆ ಅಣಕಿಸಿದ್ದಾರೆ. ಅನಿವಾರ್ಯವಾಗಿ ನಾನು ಈ ಬಾರಿ ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಬೇಕಿದೆ. ನಂಗೆ ರಾಜಕೀಯ ಬೇಡ, ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅಂತಾ ನೇರವಾಗಿ ಹೇಳಿದ್ದೆ. ಆದ್ರೂ ಕೆಲವರು ನನ್ನ ಬಳಿ ಬಂದು ಸ್ಪರ್ಧೆ ಮಾಡಲು ಒತ್ತಾಯ ಮಾಡಿದ್ರು. ಹೇಗೋ ಯು ಟರ್ನ್ ಮಾಡ್ಕೊಂಡು ಮತ್ತೆ ರಾಜಕೀಯದಲ್ಲಿ ಮುಂದುವರೆಯುತ್ತಿದ್ದೇನೆ ಎಂದರು.
ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ರಾಜಕಾರಣಿಯಾಗಿ ಸಾಯುವುದಿಲ್ಲ. ರಾಜಕಾರಣದಲ್ಲಿ ಮುಂದುವರೆಯುವ ಅನಿವಾರ್ಯತೆಯೂ ನಮಗಿಲ್ಲ. ರಾಜಕಾರಣ ಮಾಡುವುದು ಅಷ್ಟು ಸುಲಭದ ಕೆಲಸ ಅಲ್ಲ. ಹಾಗಾಗಿದ್ರೆ ಎಲ್ರೂ ರಾಜಕಾರಣ ಮಾಡುತ್ತಿದ್ರು. ನಾನು ಚಾಲೆಂಜ್ ಮಾಡುತ್ತೇನೆ, ಯಾರಾದ್ರೂ ಉತ್ತರ ಕುಮಾರರು ಸ್ಪರ್ಧೆಗೆ ರೆಡಿ ಇದ್ರೆ ಮುಂದೆ ಬನ್ನಿ. ಈ ಕ್ಷೇತ್ರದ ಅರಿವೇ ಇಲ್ಲದವರು ಪಾರ್ಲಿಮೆಂಟ್ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಎಷ್ಟೋ ಜನರಿಗೆ ಕಿತ್ತೂರು, ಖಾನಾಪೂರ ಜಿಲ್ಲೆಯ ನಕ್ಷೆಯಲ್ಲಿ ಎಲ್ಲಿ ಬರುತ್ತೆ ಅನ್ನೋದೆ ಗೊತ್ತಿಲ್ಲ. ಅಂಥವರು ಸಂಸದ ಸ್ಥಾನದ ಬಗ್ಗೆ ಮಾತಾಡುತ್ತಾರೆ ಎಂದು ಪರೋಕ್ಷವಾಗಿ ಸಂಸದ ಸ್ಥಾನಕ್ಕೆ ಆಕಾಂಕ್ಷಿ ಎನ್ನುತ್ತಿರುವವರಿಗೆ ಟಾಂಗ್ ನೀಡಿದ್ದಾರೆ.
Mp Anantkumar Hegde slams BJP members, challenges of gut to stand against him.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 03:09 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm