ಬ್ರೇಕಿಂಗ್ ನ್ಯೂಸ್
06-03-24 02:16 pm Mangalore Correspondent ಕರಾವಳಿ
ಮಂಗಳೂರು, ಮಾ.06: ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಕಡೆಗೂ ಪೂರ್ಣಕಾಲಿಕ ಕುಲಸಚಿವರನ್ನಾಗಿ ಪ್ರೊ.ಪಿ.ಎಲ್.ಧರ್ಮ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯ ಸರಕಾರ ಮತ್ತು ರಾಜ್ಯಪಾಲರ ಕಚೇರಿಯ ನಡುವೆ ಆರು ತಿಂಗಳ ಜಟಾಪಟಿಯ ಬಳಿಕ ಪ್ರೊ.ಧರ್ಮ ಅವರನ್ನೇ ರಾಜ್ಯಪಾಲರು ಕುಲಸಚಿವ ಹುದ್ದೆಗೆ ನೇಮಕ ಮಾಡಿದ್ದಾರೆ.
ಮೈಸೂರು ಮೂಲದ ಪ್ರೊಫೆಸರ್ ಮುಜಾಫರ್ ಅಸಾದಿ ಅವರನ್ನು ಮಂಗಳೂರು ವಿವಿಯ ಕುಲಸಚಿವರ ಹುದ್ದೆಗೆ ರಾಜ್ಯ ಸರಕಾರದಿಂದ ಶಿಫಾರಸು ಮಾಡಲಾಗಿತ್ತು. ಆದರೆ, ಈ ಹೆಸರನ್ನು ಆಯ್ಕೆಗೆ ಪರಿಗಣಿಸಲು ರಾಜ್ಯಪಾಲರು ಮುಂದಾಗದೆ ಫೈಲ್ ಬದಿಗೆ ಸರಿಸಿದ್ದರು. ಇದೇ ಸಂದರ್ಭದಲ್ಲಿ ಪ್ರೊ.ಪಿ.ಎಲ್ ಧರ್ಮ ಮತ್ತು ಈ ಹಿಂದೆ ಮಂಗಳೂರು ವಿವಿಯಲ್ಲಿ ರಿಜಿಸ್ಟ್ರಾರ್ ಆಗಿದ್ದ ಕಿಶೋರ್ ಕುಮಾರ್, ಕುಲಪತಿ ಹುದ್ದೆಗೆ ಪ್ರಯತ್ನ ಮಾಡಿದ್ದರು. ರಾಜ್ಯ ಸರಕಾರದ ಶಿಫಾರಸು ಉಳಿದಿಬ್ಬರಿಗೆ ದೊರೆತಿಲ್ಲದ ಕಾರಣ ಅವರ ಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲ.
ಕಳೆದ ಜೂನ್ 2ರಂದು ಕುಲಪತಿ ಹುದ್ದೆಯಿಂದ ನಿವೃತ್ತರಾದ ಪ್ರೊ.ಪಿಎಸ್ ಯಡಪಡಿತ್ತಾಯ ಅವರ ಸ್ಥಾನಕ್ಕೆ ಹಿರಿತನ ಆಧಾರದಲ್ಲಿ ಪ್ರೊ.ಜಯರಾಜ ಅಮೀನ್ ಅವರನ್ನು ಪ್ರಭಾರ ನೆಲೆಯಲ್ಲಿ ನೇಮಕ ಮಾಡಲಾಗಿತ್ತು. ಜಯರಾಜ ಅಮೀನ್ ಇದೇ ಮಾರ್ಚ್ ತಿಂಗಳಲ್ಲಿ ನಿವೃತ್ತರಾಗಲಿದ್ದು, ಇದೀಗ ರಾಜಕೀಯ ಶಾಸ್ತ್ರ ವಿಭಾಗದಲ್ಲಿ ಡೀನ್ ಆಗಿದ್ದ ಮತ್ತು ಈ ಹಿಂದೆ ವಿವಿಯಲ್ಲಿ ಪರೀಕ್ಷಾಂಗ ಕುಲಸಚಿವರಾಗಿದ್ದ ಪ್ರೊ.ಪಿ.ಎಲ್. ಧರ್ಮ ಅವರನ್ನು ಕುಲಪತಿ ಹುದ್ದೆಗೆ ನೇಮಕ ಮಾಡಲಾಗಿದೆ. ಕಿಶೋರ್ ಕುಮಾರ್ ದೈಹಿಕ ಶಿಕ್ಷಣ ವಿಭಾಗದಲ್ಲಿ ನಿರ್ದೇಶಕರಾಗಿರುವುದು ಮತ್ತು ಅಕಾಡೆಮಿಕ್ ಅಲ್ಲದ ಅರ್ಹತೆ ಅನ್ನುವ ಕಾರಣಕ್ಕೆ ಅವರ ಹೆಸರನ್ನು ಬದಿಗೆ ಸರಿಸಲಾಗಿದೆ. ಪ್ರೊ.ಧರ್ಮ ಅವರ ಹುದ್ದೆ ನಾಲ್ಕು ವರ್ಷಗಳ ಅವಧಿಗೆ ಇರಲಿದೆ ಎನ್ನುವುದು ಮಹತ್ತರ ಅಂಶ.
ಪ್ರೊ.ಪಿ.ಎಲ್ ಧರ್ಮ ಅವರು ಈ ಹಿಂದೆ ಎರಡು ವರ್ಷಗಳ ಕಾಲ ಮಂಗಳೂರು ವಿವಿಯಲ್ಲಿ ಪರೀಕ್ಷಾಂಗ ಕುಲಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆದರೆ, ಆ ಸಂದರ್ಭದಲ್ಲಿ ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಪರೀಕ್ಷಾ ಫಲಿತಾಂಶ ವಿಳಂಬ, ಅಂಕಪಟ್ಟಿ ವಿಳಂಬ, ಮೌಲ್ಯಮಾಪನದಲ್ಲಿ ವಿಳಂಬ ಆಗಿದ್ದರಿಂದ ಎಬಿವಿಪಿ ವಿದ್ಯಾರ್ಥಿಗಳು ವಿವಿಯ ಕೊಣಾಜೆ ಕ್ಯಾಂಪಸಿಗೆ ಮುತ್ತಿಗೆ ಹಾಕಿದ್ದರು. ಇದೇ ಕಾರಣಕ್ಕೆ ಪ್ರೊ.ಧರ್ಮ ನನ್ನಿಂದ ವೈಫಲ್ಯ ಆಗಿದ್ದರೆ, ರಾಜಿನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದರು. ಪರೀಕ್ಷಾ ಫಲಿತಾಂಶ ವಿಳಂಬದ ವಿಚಾರ ಆನಂತರ ವಿಧಾನಸಭೆ ಅಧಿವೇಶನದಲ್ಲಿಯೂ ಪ್ರಸ್ತಾಪಗೊಂಡಿತ್ತು. ಆನಂತರ, ಪ್ರೊ.ಧರ್ಮ ಅವರಿದ್ದ ಜಾಗಕ್ಕೆ ಬೇರೊಬ್ಬರನ್ನು ನೇಮಕ ಮಾಡಲಾಗಿತ್ತು.
ಹೊಸ ಕುಲಪತಿಗೆ ಅಪರಿಮಿತ ಸವಾಲು
ಮಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬಂದಿಯ ಕರ್ತವ್ಯದ ಮೇಲಿನ ನಿರ್ಲಕ್ಷ್ಯದಿಂದಾಗಿ ವಿವಿಗೆ ಯುಜಿಸಿಯಲ್ಲಿ ಬಿ ಗ್ರೇಡ್ ಸಿಕ್ಕಿದೆ. ಇದರಿಂದಾಗಿ ಯುಜಿಸಿಯಿಂದ ಬರುವ ಅನುದಾನದಲ್ಲಿ ಕಡಿತವಾಗಿದ್ದು, ಅದನ್ನು ಸರಿಪಡಿಸಲು ಶ್ರಮಿಸಬೇಕಾಗಿದೆ. ಮಂಗಳೂರು ವಿವಿಗೆ ಮತ್ತೆ ಎ ಗ್ರೇಡ್ ತರಿಸುವುದು ಪ್ರೊ.ಪಿ.ಎಲ್ ಧರ್ಮ ಅವರ ಮುಂದಿರುವ ಮೊದಲ ಸವಾಲು. ಇದಲ್ಲದೆ, ಅಂಕಪಟ್ಟಿ ವಿಳಂಬ, ಪರೀಕ್ಷಾ ಫಲಿತಾಂಶ ವಿಳಂಬದ ತೊಂದರೆ ಈಗಲೂ ಮುಂದುವರೆದಿದ್ದು, ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿದ್ದಾರೆ. ಅದನ್ನು ಸರಿಪಡಿಸಿ, ವಿವಿಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಡಳಿತಾತ್ಮಕವಾಗಿ ಗಟ್ಟಿಗೊಳಿಸುವ ಜವಾಬ್ದಾರಿ ಕುಲಪತಿಗೆ ಇದೆ.
ಆರೋಪದಿಂದ ಮುಕ್ತಗೊಳ್ಳುವ ಹೊಣೆ
ಇತ್ತೀಚೆಗೆ ಪರೀಕ್ಷಾಂಗ ಕುಲಸಚಿವರಾಗಿದ್ದ ರಾಜು ಚಲ್ಲನ್ನವರ್ ಕೊಚಿಮುಲ್ ಹಗರಣದಲ್ಲಿ ಸಿಕ್ಕಿಬಿದ್ದಿರುವುದು, ಪರೀಕ್ಷೆ ಹೆಸರಲ್ಲಿ ಹಣ ಪಡೆದ ಆರೋಪ ಕೇಳಿಬಂದಿದ್ದು ವಿವಿಯ ಘನತೆಗೆ ಕಪ್ಪು ಚುಕ್ಕೆಯಾಗಿತ್ತು. ಆನಂತರ, ರಾಜು ಚಲ್ಲನ್ನವರ್ ಹುದ್ದೆಯಿಂದ ತೆರವಾಗಿದ್ದರೂ, ವಿವಿಯೇನೂ ಆರೋಪದಿಂದ ಮುಕ್ತಗೊಂಡಿಲ್ಲ. ಅವರಿದ್ದ ಜಾಗಕ್ಕೆ ಹೊಸತಾಗಿ ಅಧಿಕಾರಿಯ ನೇಮಕವೂ ಆಗಿಲ್ಲ. ಅಲ್ಲದೆ, ಆಡಳಿತಾತ್ಮತ ರಿಜಿಸ್ಟ್ರಾರ್ ಹುದ್ದೆಗೆ ರಾಜು ಮೊಗವೀರ ತಾತ್ಕಾಲಿಕ ನೆಲೆಯಲ್ಲಿ ವರ್ಗಾವಣೆಗೊಂಡು ಬಂದಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರನ್ನು ಉಡುಪಿ ಜಿಪಂನಿಂದ ಮಂಗಳೂರು ವಿವಿಗೆ ವರ್ಗಾವಣೆ ಆಗಿದ್ದರಿಂದ ಚುನಾವಣೆ ಮುಗಿದ ಬಳಿಕ ಹಿಂತಿರುಗಲಿದ್ದಾರೆ. ಪೂರ್ಣಕಾಲಿಕ ಅಧಿಕಾರಿ ನೇಮಕ ಆಗದೇ ಇದ್ದರೆ, ಮಂಗಳೂರು ವಿವಿಯ ಆಡಳಿತವನ್ನು ಸುಗಮಗೊಳಿಸುವುದು, ಕಳಕೊಂಡ ಘನತೆಯನ್ನು ಮತ್ತೆ ತರುವುದು ಕಷ್ಟವಾದೀತು.
Dr. P. L. Dharma, Head of the Department of Political Science at Mangalore University, has been appointed as the 10th Vice Chancellor of Mangalore University.
26-11-24 11:52 am
HK News Desk
ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೇಗೌಡರಿಗೆ ಜನ ಗೌರ...
25-11-24 05:51 pm
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm