Mangalore Nalin Kateel, Twitter Trending, MP News: ಟಿಕೆಟ್ ಕೈತಪ್ಪುವ ಭೀತಿ, ಸಂಸದ ನಳಿನ್ ಪರ ಟ್ವಿಟರ್ ನಲ್ಲಿ ಕೃತಕ ಅಲೆ ; ‘’ದಕ್ಷಿಣ ಕನ್ನಡಕ್ಕೆ ಮತ್ತೆ ನಳಿನ್ ’’ ಉತ್ತರ ಭಾರತೀಯರಿಂದ ಹ್ಯಾಶ್ ಟ್ಯಾಗ್ ! ಟ್ವಿಟರ್ ದುರ್ಬಳಕೆಗೆ ಕಾರ್ಯಕರ್ತರ ಆಕ್ಷೇಪ 

06-03-24 07:01 pm       Mangalore Correspondent   ಕರಾವಳಿ

ಸಂಸದ ನಳಿನ್ ಕುಮಾರ್ ಗೆ ಈ ಬಾರಿ ಎಂಪಿ ಟಿಕೆಟ್ ಕೈತಪ್ಪಲಿದೆ ಎಂಬ ಸುದ್ದಿ ಹರಡಿರುವಾಗಲೇ ಟ್ವಿಟರ್ ನಲ್ಲಿ ಸಂಸದ ನಳಿನ್ ಪರವಾಗಿ ಕೃತಕ ರೀತಿಯಲ್ಲಿ ಅಲೆ ಎಬ್ಬಿಸಿರುವುದು ಕಂಡುಬಂದಿದೆ.

ಮಂಗಳೂರು, ಮಾ.6: ಸಂಸದ ನಳಿನ್ ಕುಮಾರ್ ಗೆ ಈ ಬಾರಿ ಎಂಪಿ ಟಿಕೆಟ್ ಕೈತಪ್ಪಲಿದೆ ಎಂಬ ಸುದ್ದಿ ಹರಡಿರುವಾಗಲೇ ಟ್ವಿಟರ್ ನಲ್ಲಿ ಸಂಸದ ನಳಿನ್ ಪರವಾಗಿ ಕೃತಕ ರೀತಿಯಲ್ಲಿ ಅಲೆ ಎಬ್ಬಿಸಿರುವುದು ಕಂಡುಬಂದಿದೆ. ಸಂಸದ ನಳಿನ್ ಕುಮಾರ್ ಪರವಾಗಿ ಟ್ವಿಟರ್ ನಲ್ಲಿ ಕನ್ನಡವೇ ತಿಳಿಯದ ಉತ್ತರ ಭಾರತೀಯರು ನಳಿನ್ ಕುಮಾರ್ ಫಾರ್ ದಕ್ಷಿಣ ಕನ್ನಡ ಎಂದು ಕನ್ನಡದಲ್ಲಿ ಪೋಸ್ಟ್ ಮಾಡಿದ್ದಲ್ಲದೆ, ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಮಾಡಿದ್ದಾರೆ.

ಬಿಜೆಪಿ ಸಂಸದೀಯ ಸಮಿತಿ ಸಭೆ ದೆಹಲಿಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿಯೇ ನಳಿನ್ ಕುಮಾರ್ ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಆಗುವಷ್ಟರ ಮಟ್ಟಿಗೆ ಅಲೆ ಎಬ್ಬಿಸಿದೆ. ಈತನಕವೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರೇ ನಳಿನ್ ಕುಮಾರ್ ಅವರಿಗೆ ವಿರೋಧ ವ್ಯಕ್ತಪಡಿಸಿ ಜಾಲತಾಣದಲ್ಲಿ ಅಭಿಯಾನ ನಡೆಸಿದ್ದಾರೆ. ಪುತ್ತೂರು, ಸುಳ್ಯ ಸೇರಿದಂತೆ ಬಹುತೇಕ ಕಡೆ ಕಾರ್ಯಕರ್ತರೇ ಈ ಬಾರಿ ಅಭ್ಯರ್ಥಿ ಬದಲಾವಣೆಗೆ ಆಗ್ರಹಿಸಿದ್ದಾರೆ. ಪಕ್ಷದಲ್ಲೇ ಈ ರೀತಿಯ ವಿರೋಧ ಎದುರಾಗಿದ್ದರೂ ಅದನ್ನು ಶಮನಗೊಳಿಸುವ ಯತ್ನವನ್ನು ಸ್ವತಃ ನಳಿನ್ ಕುಮಾರ್ ಆಗಲೀ, ಬಿಜೆಪಿ ನಾಯಕರಾಗಲೀ ಮಾಡಿಲ್ಲ.

ಆದರೆ, ಈಗ ಟ್ವಿಟರ್ ನಲ್ಲಿ ನಳಿನ್ ಕುಮಾರ್ ಪರವಾಗಿ ಫೇಕ್ ಐಡಿಯಲ್ಲಿ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಮಾಡಿರುವಂತೆ ಕಂಡುಬಂದಿದೆ. ಇದನ್ನು ಸಚಿನ್ ರಾಜ್ ಅಳಿಯೂರು ಎಂಬ ಬಿಜೆಪಿ ಕಾರ್ಯಕರ್ತರೊಬ್ಬರು ತನ್ನ ಫೇಸ್ಬುಕ್ ವಾಲ್ ನಲ್ಲಿ ಹಾಕಿದ್ದು, ಸಂಸದರಿಗೆ ಈ ರೀತಿಯ ದುರ್ಗತಿ ಬೇಕಿತ್ತೇ..? ಟಿಕೆಟ್ ಪಡೆಯುವುದಕ್ಕಾಗಿ ಇಂತಹ ಕಸರತ್ತು ಮಾಡಿದ್ದಾರೆ ಎಂದು ಬರೆದಿದ್ದಾರೆ. ಜಾಲತಾಣದಲ್ಲಿ ಈ ವಿಚಾರ ಪರ- ವಿರೋಧ ಚರ್ಚೆಗೆ ಗ್ರಾಸವಾಗಿದೆ.

Proud Indian ತುಳುವ ಫ್ಯಾನ್ ಎಂಬ ಹೆಸರಿನಲ್ಲಿ ಟ್ವಿಟರ್ ಖಾತೆಯುಳ್ಳವರು ಇದರ ಸ್ಕ್ರೀನ್ ಶಾಟ್ ತೆಗೆದು ಮರು ಪ್ರಶ್ನೆ ಮಾಡಿದ್ದಾರೆ. ಯಾದವ್, ಪಾಂಡೆ, ಶಿಂಧೆ, ಪಾಯಲ್, ಮಹ್ತೋ, ಶರ್ಮಾ ಇತ್ಯಾದಿ ಸರ್ ನೇಮ್ ಉಳ್ಳವರು ದಕ್ಷಿಣ ಕನ್ನಡ, ಮಂಗಳೂರಿನವರಲ್ಲ. ಇದು ನಳಿನ್ ಅವರ ಕೆಲಸವನ್ನು ಮೆಚ್ಚಿ ಮಾಡುತ್ತಿರುವ ಟ್ವೀಟ್ ಕೂಡ ಅಲ್ಲ, ನಾನ್ ಸೆನ್ಸ್. ಈ ರೀತಿಯಲ್ಲೂ ಟ್ವಿಟರ್ ಟ್ರೆಂಡಿಂಗ್ ಮಾಡಲಾಗುತ್ತಾ ಎಂದು ಪ್ರಶ್ನಿಸಿ ಮರು ಟ್ವೀಟ್ ಮಾಡಿದ್ದಾರೆ.

ಸಂಸದ ನಳಿನ್ ಪರವಾಗಿ ಕನ್ನಡದಲ್ಲಿ ಬರೆದಿರುವ ಪೋಸ್ಟ್ ಗಳನ್ನು ಉತ್ತರ ಭಾರತೀಯರೇ ಹೆಚ್ಚು ಪೋಸ್ಟ್ ಮಾಡುತ್ತಿದ್ದು, ಕೃತಕವಾಗಿ ನಳಿನ್ ಹ್ಯಾಶ್ ಟ್ಯಾಗನ್ನು ಟ್ರೆಂಡಿಂಗ್ ಮಾಡಿದ್ದಾರೆ. ಅವುಗಳಿಗೆ ಸ್ಥಳೀಯರು ಪ್ರಶ್ನೆ ಮಾಡಿದ್ದಕ್ಕೆ ಅವರಿಂದ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಯಾವುದೋ ಕಂಪನಿ ಕಡೆಯಿಂದ ದಕ್ಷಿಣ ಕನ್ನಡಕ್ಕೆ ಮತ್ತೆ ನಳಿನ್ ಎಂಬ ರೀತಿ ಜಾಲತಾಣದಲ್ಲಿ ಟ್ರೆಂಡಿಂಗ್ ಮಾಡಿರುವಂತೆ ಕಾಣುತ್ತಿದ್ದು ಸಂಸದರ ಈ ರೀತಿಯ ನಡೆಗೆ ಟೀಕೆಯೂ ಕೇಳಿಬಂದಿದೆ. ಕೆಲವರು, ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಬೇಡವಾದ ನಳಿನ್ ಈಗ ಉತ್ತರ ಭಾರತೀಯರಿಗೆ ಬೇಕಾಗಿದ್ದಾರೆ. ಉತ್ತರ ಭಾರತದಲ್ಲೇ ಚುನಾವಣೆಗೆ ನಿಲ್ಲಲು ಕರೆಯುತ್ತಿದ್ದಾರೆ ಎಂದು ಅಣಕಿಸಿದ್ದಾರೆ.

Mangalore Nalin kateel sponsored twitter promotion for Mp seat goes trending by North Indians handlers. Bjp members in Mangalore slam trending of #NalinkumarforDakshinaKannada. Many have tweeted who come North Indians are tweeting that people of Dakshin Kannada.