ಮೂಡುಬಿದಿರೆ : ಓಮ್ನಿ ಕಾರಿನಲ್ಲಿ ಐದು ದನಗಳ ತುಂಬಿಸಿದ್ದ ಕಿರಾತಕರು ! ಬೆನ್ನಟ್ಟಿ ಹಿಡಿದ ಪೊಲೀಸರು ! 

26-11-20 11:01 pm       Mangaluru Correspondent   ಕರಾವಳಿ

ಅಮಾನುಷ ರೀತಿಯಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಓಮ್ನಿ ಕಾರನ್ನು ಮೂಡುಬಿದಿರೆ ಪೊಲೀಸರು ಗುರುವಾರ ಬೆಳಗ್ಗೆ ತಡೆದಿದ್ದು, ಐದು ದನಗಳನ್ನು ರಕ್ಷಿಸಿದ್ದು, ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಮೂಡುಬಿದಿರೆ, ನ. 26: ಜಾನುವಾರುಗಳನ್ನು ಅಮಾನುಷ ರೀತಿಯಲ್ಲಿ ಓಮ್ನಿ ಕಾರಿನೊಳಗೆ ಕಟ್ಟಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಮೂಡುಬಿದಿರೆ ಪೊಲೀಸರು ಗುರುವಾರ ಬೆಳಗ್ಗೆ ತಡೆದಿದ್ದು , ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. 

ಕಾರ್ಕಳ ಕಡೆಯಿಂದ ಮೂಡುಬಿದ್ರೆ ಮಾರ್ಗವಾಗಿ ಬೆಳ್ತಂಗಡಿ ಕಡೆಗೆ ಅತೀ ವೇಗವಾಗಿ ಹೋಗುತ್ತಿದ್ದ ಓಮ್ನಿ ಕಾರನ್ನು ಮೂಡುಬಿದ್ರೆ ಪೇಟೆಯಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಹಿಂಬಾಲಿಸಿದ್ದು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ, ಪ್ರಾಂತ್ಯ ಗ್ರಾಮದ ಬಜಾಜ್ ಶೋರೂಂ ಬಳಿಯ ಅಡ್ಡರಸ್ತೆಯಲ್ಲಿ ಓಮ್ನಿಯನ್ನು ನುಗ್ಗಿಸಿದ್ದು ಮುಂದೆ ಹೋಗಲು ರಸ್ತೆ ಇಲ್ಲದಾಗ ಹಿಂದೆ ಬರಲು ಯತ್ನಿಸಿದ್ದು ಹಿಂದಿನಿಂದ ಪೊಲೀಸರ ವಾಹನ ಅಡ್ಡನಿಂತಿದೆ. ಈ ವೇಳೆ, ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಓಡಿ ಪರಾರಿಯಾಗಿದ್ದಾರೆ. 

ಪೊಲೀಸರು ಓಮ್ನಿ ಕಾರನ್ನು ಪರಿಶೀಲಿಸಿದಾಗ ಐದು ದನಗಳನ್ನು ಅಮಾನುಷವಾಗಿ ತುಂಬಿಸಿರುವುದು ಕಂಡುಬಂದಿದೆ. ಅವುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದರು ಎನ್ನಲಾಗುತ್ತಿದ್ದು ಇದಕ್ಕೆ ಯಾವುದೇ ಅನುಮತಿ ಇಲ್ಲದೇ ಇದ್ದರಿಂದ ಕಾರನ್ನು ಬಿಟ್ಟು ಓಡಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

In a dramatic and swift operation, 5 cows were rescued from being smuggled in a vehicle for alleged cattle trafficking at Moodbidri.