ಬ್ರೇಕಿಂಗ್ ನ್ಯೂಸ್
06-03-24 10:31 pm Mangalore Correspondent ಕರಾವಳಿ
ಮಂಗಳೂರು, ಮಾ.6: ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಬೇಕಾದ ಎಲ್ಲ ಅರ್ಹತೆಗಳನ್ನು ಹೊಂದಿದೆ. ಮಲಯಾಳಂ ಭಾಷೆಯ ಲಿಪಿಗೂ ತುಳುವಿನದ್ದೇ ಮೂಲ ಲಿಪಿ. ತುಳು ಭಾಷೆ ಸಮೃದ್ಧ ಸಂಸ್ಕೃತಿಯನ್ನು ಒಳಗೊಂಡಿದ್ದು ನಾವೆಲ್ಲ ಸೇರಿ ಸಂವಿಧಾನಕ್ಕೆ ಸೇರ್ಪಡೆಗೊಳಿಸಲು ಪ್ರಯತ್ನ ಮಾಡಬೇಕಿದೆ ಎಂದು ಕೇರಳದ ರಾಜ್ಯಸಭೆ ಸದಸ್ಯ ಸಂತೋಷ್ ಕುಮಾರ್ ಹೇಳಿದ್ದಾರೆ.
ತುಳು ಭವನದಲ್ಲಿ ನಡೆದ ತುಳು ಭಾಷೆ ಸಂವಿಧಾನಕ್ಕೆ ಸೇರ್ಪಡೆ ಕುರಿತ ಸಂವಾದ ಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಹಿಂದೆ ಒಂದು ಸಾವಿರಕ್ಕೂ ಹೆಚ್ಚು ಭಾಷೆಗಳಿದ್ದವು. ಆದರೆ ಅವುಗಳಿಗೆ ರಾಜಾಳ್ವಿಕೆಯಲ್ಲಿ ಮತ್ತು ಆನಂತರದ ಆಡಳಿತದಲ್ಲಿ ಪೂರಕ ವಾತಾವರಣ ಸಿಗಲಿಲ್ಲ. ಈಗಲಾದರೂ ತುಳುವಿನಂತಹ ಸಮೃದ್ಧ ಸಾಹಿತ್ಯ, ಜನಪದ ಪರಂಪರೆ ಇರುವ ಭಾಷೆಯನ್ನು ಸಂವಿಧಾನಕ್ಕೆ ಸೇರಿಸಿ ರಾಜಾಶ್ರಯ ಸಿಗುವಂತೆ ಶ್ರಮಿಸಬೇಕು ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಈ ಹಿಂದಿನ ಅಧಿವೇಶನದಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿಸುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ಪ್ರಸ್ತಾಪವಾಗಿತ್ತು. ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಿಂದ ಅಲ್ಲಿ ಇತರೇ ಭಾಷೆಗಳನ್ನು ಎರಡನೇ ಭಾಷೆಯ ಸ್ಥಾನಮಾನ ನೀಡಿದ ಬಗ್ಗೆ ಮಾಹಿತಿ ತರಿಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಮತ್ತಷ್ಟು ದಾಖಲೆ ಮುಂದಿಟ್ಟು ಒತ್ತಾಯ ಮಾಡುತ್ತೇನೆ ಎಂದರು. ಕೇವಲ 50 ಸಾವಿರ ಜನರು ಮಾತನಾಡುವ ಬೋಡೋ ಭಾಷೆಯನ್ನು ಸಂವಿಧಾನಕ್ಕೆ ಸೇರಿಸಿದ್ದಾರೆ. ನಮ್ಮಲ್ಲಿ 50 ಲಕ್ಷಕ್ಕೂ ಹೆಚ್ಚು ಜನ ಮಾತಾಡುವ ತುಳು ಭಾಷೆಗೆ ಯಾಕೆ ಮಾನ್ಯತೆ ಸಿಕ್ಕಿಲ್ಲ ಎಂದು ನಾವು ಪ್ರಶ್ನಿಸಬೇಕಿದೆ ಎಂದರು.
ಪ್ರದೀಪ್ ಕಲ್ಕೂರ ಮಾತನಾಡಿ, ತುಳು ಭಾಷೆಗೆ ಕನ್ನಡಿಗರ ವಿರೋಧ ಇದೆಯೆನ್ನುವುದು ಸುಳ್ಳು. ನಾವು ರಾಯಚೂರು ಮತ್ತು ಮೂಡುಬಿದ್ರೆಯಲ್ಲಿ ಅಖಿಲ ಭಾರತ ಕನ್ನಡ ಸಮ್ಮೇಳನ ನಡೆಸಿದ ವೇಳೆ ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿಸುವ ನಿಟ್ಟಿನಲ್ಲಿ ನಿರ್ಣಯ ಸ್ವೀಕರಿಸಿದ್ದೇವೆ. ಅದರ ದಾಖಲೆಯನ್ನು ಶಾಸಕರಿಗೆ ನೀಡುತ್ತೇನೆ ಎಂದರು.
ತುಳುನಾಡು ಹೆಸರು ಪ್ರಾಮುಖ್ಯ ಆಗಬೇಕು
ದಯಾನಂದ ಕತ್ತಲ್ಸಾರ್ ಮಾತನಾಡಿ, ಡಾ.ಮೋಹನ ಆಳ್ವರ ಸಮಿತಿ ವರದಿ ಒಪ್ಪಿಸುವುದಕ್ಕೂ ಮೊದಲೇ ನಾವು ಪ್ರೊ.ವಿವೇಕ್ ರೈ ನೇತೃತ್ವದಲ್ಲಿ ಸಮಿತಿ ರಚಿಸಿ ತುಳು ಭಾಷೆಯ ಬಗ್ಗೆ ವರದಿಯನ್ನು ಸರಕಾರಕ್ಕೆ ನೀಡಿದ್ದೆವು. ತುಳು ಲಿಪಿ, ಭಾಷೆಗಾಗಿ ಹಲವು ಸಂಘಟನೆಗಳು ಕೆಲಸ ಮಾಡಿದ್ದಾರೆ. ಆದರೆ ನಮ್ಮಲ್ಲಿ ಇಚ್ಛಾಶಕ್ತಿಯ ಕೊರತೆ ಕಾರಣದಿಂದಲೇ ಹಿನ್ನಡೆಯಾಗಿದೆ. ಜಾತಿ, ಭೇದ ಇಲ್ಲದೆ ನಾವು ಭಾಷೆಯ ಹೆಸರಲ್ಲಿ ಧ್ವನಿ ಎತ್ತಬೇಕಿದೆ. ಏರ್ಪೋರ್ಟ್, ರೈಲು ನಿಲ್ದಾಣಕ್ಕೆ ತುಳುನಾಡು ಎಂದು ಹೆಸರಿಡುವ ಅಭಿಯಾನ ಆಗಬೇಕು. ತುಳುನಾಡಿಗೆ ಸ್ವಾಗತ ಎನ್ನುವ ಬೋರ್ಡ್ ಹಾಕಿ ಜಾಗೃತಿ ಮೂಡಿಸಬೇಕು. ಆಗ ನಮ್ಮಲ್ಲಿ ತುಳುನಾಡು ಕುರಿತು ಜಾಗೃತಿ ಬರುತ್ತದೆ ಎಂದರು.
ತುಳುವನ್ನು ತೃತೀಯ ಭಾಷೆಯಾಗಿಸಿ ಕಲಿಕೆಯ ಮಟ್ಟಕ್ಕೆ ತಂದಿದ್ದು ಪಾಲ್ತಾಡಿ ರಾಮಕೃಷ್ಣ ಆಚಾರ್ ಸಾಧನೆ. ಆದರೂ ಎಲ್ಲ ಶಾಲೆಗಳಲ್ಲಿ ತುಳು ಕಲಿಸುವ ಮಟ್ಟಕ್ಕೆ ತರಲು ನಮ್ಮಿಂದ ಆಗಿಲ್ಲ. ರಾಜ್ಯದಲ್ಲಿ ತುಳು ಪರಿಷತ್ ಮಾಡಲು ಸಾಧ್ಯವಾಗಿಲ್ಲ. ಬಸ್ರೂರಿನಲ್ಲಿ ಮತಾಂತರಗೊಂಡ ಕ್ರೈಸ್ತರು ಈಗಲೂ ತುಳುವಿನಲ್ಲೇ ಪ್ರಾರ್ಥನೆ ಮಾಡುತ್ತಾರೆ. ಅಲ್ಲಿ ಬಟ್ಟೆ ಒಗೆಯುವ ಕಲ್ಲುಗಳಲ್ಲಿಯೂ ತುಳು ಶಾಸನ ಇದೆ. ಇದು ತುಳುನಾಡಿನ ಸಮೃದ್ಧ ಇತಿಹಾಸವನ್ನು ಸಾರಿ ಹೇಳುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಮೊಯ್ದೀನ್ ಬಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿಜಯ ಕುಮಾರ್ ಕೊಡಿಯಾಲಬೈಲ್, ಕಟೀಲಿನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಯೋಗೀಶ್ ಶೆಟ್ಟಿ ಜಪ್ಪು, ಹರಿಕೃಷ್ಣ ಪುನರೂರು ಮತ್ತಿತರರಿದ್ದರು.
Kerala Rajya Sabha member Santosh kumar in Mangalore, talks about Tulu language importance. Malayalam language is made by the lipi of Tulu he added.
26-11-24 11:52 am
HK News Desk
ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೇಗೌಡರಿಗೆ ಜನ ಗೌರ...
25-11-24 05:51 pm
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm