Mangalore, Minister Krishna Byre Gowda, BJP: ಸಿರಿವಂತರ 20 ಲಕ್ಷ ಕೋಟಿ ಸಾಲ ಮನ್ನಾ ಬಿಟ್ಟಿ ಭಾಗ್ಯವಲ್ಲವೇ..?ದುಡಿಯೋ ವರ್ಗದವರಿಗಾಗಿ ಕೊಟ್ಟ ಗ್ಯಾರಂಟಿ ಯೋಜನೆಗಳಿಗೆ ಮೂದಲಿಕೆ ಏಕೆ ? ಬಿಜೆಪಿ ನಾಯಕರಿಗೆ ಸಚಿವ ಕೃಷ್ಣ ಭೈರೇಗೌಡ ಪ್ರಶ್ನೆ 

09-03-24 09:56 pm       Mangalore Correspondent   ಕರಾವಳಿ

ದೇಶದ ಧನಿಕರ ಇಪ್ಪತ್ತು ಲಕ್ಷ ಕೋಟಿ ರೂಪಾಯಿಗಳನ್ನ ಮನ್ನಾ ಮಾಡಿದ ಕೇಂದ್ರದ ಬಿಜೆಪಿ ಸರಕಾರದ್ದು ಬಿಟ್ಟಿ ಭಾಗ್ಯವಲ್ಲವೇ..?ಬಡ ದುಡಿಯೋ ವರ್ಗದವರ ಉಪಯೋಗಕ್ಕಾಗಿ ರಾಜ್ಯ ಕಾಂಗ್ರೆಸ್ ಸರಕಾರ ಕೊಟ್ಟ ಗ್ಯಾರಂಟಿ ಯೋಜನೆಗಳನ್ನ ಬಿಟ್ಟಿ ಭಾಗ್ಯ, ಬಿಟ್ಟಿ ಭಾಗ್ಯವೆಂದು ಮೂದಲಿಸೋದು ಯಾಕೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ವಿರೋಧ ಪಕ್ಷದವರನ್ನ ಪ್ರಶ್ನಿಸಿದ್ದಾರೆ. 

ಉಳ್ಳಾಲ, ಮಾ.9: ದೇಶದ ಧನಿಕರ ಇಪ್ಪತ್ತು ಲಕ್ಷ ಕೋಟಿ ರೂಪಾಯಿಗಳನ್ನ ಮನ್ನಾ ಮಾಡಿದ ಕೇಂದ್ರದ ಬಿಜೆಪಿ ಸರಕಾರದ್ದು ಬಿಟ್ಟಿ ಭಾಗ್ಯವಲ್ಲವೇ..?ಬಡ ದುಡಿಯೋ ವರ್ಗದವರ ಉಪಯೋಗಕ್ಕಾಗಿ ರಾಜ್ಯ ಕಾಂಗ್ರೆಸ್ ಸರಕಾರ ಕೊಟ್ಟ ಗ್ಯಾರಂಟಿ ಯೋಜನೆಗಳನ್ನ ಬಿಟ್ಟಿ ಭಾಗ್ಯ, ಬಿಟ್ಟಿ ಭಾಗ್ಯವೆಂದು ಮೂದಲಿಸೋದು ಯಾಕೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ವಿರೋಧ ಪಕ್ಷದವರನ್ನ ಪ್ರಶ್ನಿಸಿದ್ದಾರೆ. 

ತೊಕ್ಕೊಟ್ಟು ಸಮೀಪದ ಕಲ್ಲಾಪುವಿನ ಯುನಿಟಿ ಸಭಾಂಗಣದ ಬಳಿಯ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಉಳ್ಳಾಲ ತಾಲೂಕು ವ್ಯಾಪ್ತಿಯ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. 

ಕೇಂದ್ರ ಸರಕಾರವು ಶ್ರೀಮಂತ ವರ್ಗದವರಿಗೆ ತೆರಿಗೆ ವಿನಾಯಿತಿ ನೀಡಿ, ದಿನ ನಿತ್ಯ ಬಳಕೆಯ ಎಲ್ಲ ವಸ್ತುಗಳ ಬೆಲೆಯನ್ನು ಏರಿಸಿ ಬಡವರಿಗೆ ಹೊರೆ ಹಾಕಿತ್ತು. ನಮ್ಮ ರಾಜ್ಯ ಸರಕಾರವು ಬಡವರ ತೆರಿಗೆಯ ಹಣವು ಅವರಿಗೇ ಲಭಿಸಬೇಕೆಂಬ ಸದುದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಿದೆ. ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ನಾವು ಏಳು ಕೆ.ಜಿ ಪಡಿತರ ಅಕ್ಕಿ ಕೊಡುತ್ತಿದ್ದೆವು. ಆದರೆ ನಂತರ ಬಂದ ಬಿಜೆಪಿ ಸರಕಾರವು ಅದರಲ್ಲೂ ಎರಡು ಕೆ.ಜಿ ಅಕ್ಕಿಯನ್ನ ಕಿತ್ತುಕೊಂಡಿತ್ತು. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಹತ್ತು ಕೆ.ಜಿ ಅಕ್ಕಿ ಕೊಡ್ತೇವೆ ಎಂದು ಹೇಳಿದ್ದೆವು. ಆದರೆ ಕೇಂದ್ರ ಸರಕಾರ ನಮಗೆ ಐದು ಕೇಜಿ ಅಕ್ಕಿಯನ್ನ ಕೊಡಲಿಲ್ಲ. ನಮ್ಮ ದಾರಿಗೆ ಕಲ್ಲು ,ಮುಳ್ಳುಗಳನ್ನ ಹಾಕಿದರೂ ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಸರಕಾರವು ಅಕ್ಕಿಯ ಬದಲಾಗಿ ಪ್ರತಿಯೊಬ್ಬರಿಗೂ ಕೆ.ಜಿ ಗೆ 34 ರೂಪಾಯಿಯಂತೆ ಪ್ರತೀ ತಿಂಗಳು 170 ರೂಪಾಯಿಗಳನ್ನ ಬ್ಯಾಂಕ್ ಖಾತೆಗೆ ಹಾಕುತ್ತಿದ್ದು ಕೊಟ್ಟ ಮಾತನ್ನ ಉಳಿಸಿದ್ದೇವೆ ಎಂದರು. ..

ಯಾರ ಕಾಲಿಗೂ ದುಂಬಾಲು ಬೀಳದೆ ಇಂದು ಗೃಹಿಣಿಯರು ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿಗಳನ್ನ ನೇರವಾಗಿ ಪಡೆಯುತ್ತಿದ್ದಾರೆ. ಯಾರಿಗೆ ಯೋಜನೆಗಳು ತಲುಪಿಲ್ಲವೋ ಅವರಿಗೆ ತಲಪಬೇಕೆಂದೇ ಈ ಸಮಾವೇಶದಲ್ಲಿ ಸ್ಟಾಲ್ ಗಳನ್ನು ಓಪನ್ ಮಾಡಿಸಿ ಅಧಿಕಾರಿಗಳಿಂದ ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪಿಸುವ ಕೆಲಸ ಮಾಡಿದ್ದೇವೆ ಎಂದರು. ನೀವೇನೇ ಟೀಕೆ ಮಾಡಿದರೂ ನಮ್ಮ ಸಂಕಲ್ಪ ಧೃಡವಾಗಿದ್ದು, ಎಂದಿಗೂ ದುಡಿಯುವ ವರ್ಗದ ಪರವಾಗಿರುತ್ತೇವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ರಾಜ್ಯದಲ್ಲಿ ಬರಗಾಲ ಬಂದಿದ್ದು ರೈತರು ಸಂಕಷ್ಟದಲ್ಲಿದ್ದರೂ ಕೇಂದ್ರ ಸರಕಾರ ಒಂದು ರೂಪಾಯಿ ಪರಿಹಾರ ಕೊಡುತ್ತಿಲ್ಲ. ರಾಜ್ಯ ಸರಕಾರವೇ 680 ಕೋಟಿ ರೂಪಾಯಿಗಳನ್ನ ರೈತರಿಗೆ ಪರಿಹಾರವಾಗಿ ನೀಡಿದೆ. ಪ್ರಯಾಣದ ಪ್ರಯಾಸದಿಂದ ಮಂಗಳೂರಿನಲ್ಲಿ ಬೆಂಗಳೂರಿನ ಉದ್ದಿಮೆದಾರರು ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ಹಾಗಾಗಿ ಬೆಂಗಳೂರಿಂದ ಕೇವಲ ನಾಲ್ಕೇ ಗಂಟೆಗಳಲ್ಲಿ ಮಂಗಳೂರು ಸಂಪರ್ಕದ ವಿಶೇಷ ಆರ್ಥಿಕ ಕಾರಿಡಾರ್ ಕಾರ್ಯಕ್ರಮ ರೂಪಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರು ಬಜೆಟ್ ನಲ್ಲಿ ಘೋಷಿಸಿರುವುದಾಗಿ ಹೇಳಿದರು.

ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಳ್ಳಾಲ ನಗರಸಭೆಗೆ ತ್ಯಾಜ್ಯ ವಿಲೇವಾರಿಗಾಗಿ ನೂತನ ವಾಹನಗಳನ್ನ ಹಸ್ತಾಂತರಿಸಲಾಯಿತು. ಗ್ಯಾರಂಟಿ ಯೋಜನೆಯ ಫಲಾನುಭವಿಗಳು ತಮಗಾದ ಪ್ರಯೋಜನಗಳ ಬಗ್ಗೆ ವೇದಿಕೆಯಲ್ಲಿ ಅನುಭವ ಹಂಚಿಕೊಂಡರು.

BJP government at the Centre has waived off Rs 20 lakh crore of the country's rich? Revenue Minister Krishna Byre Gowda has questioned the opposition as to why the guarantee schemes given by the Congress government in the state for the benefit of the poor working class are being termed as 'bitti bhagya' and 'bitti bhagya'.