ಬ್ರೇಕಿಂಗ್ ನ್ಯೂಸ್
12-03-24 12:46 pm Mangalore Correspondent ಕರಾವಳಿ
ಮಂಗಳೂರು, ಮಾ.12: ಯಾರೇ ಅಭ್ಯರ್ಥಿ ಆದರೂ ಮೋದಿ ಮತ್ತೆ ಪ್ರಧಾನಿಯಾಗಬೇಕು, ಬಿಜೆಪಿ ಮತ್ತೆ ಗೆಲ್ಲಬೇಕು ಎಂಬುದು ನಮ್ಮೆಲ್ಲರ ಗುರಿ. ರಾಷ್ಟ್ರೀಯ ನಾಯಕರ ಯೋಚನೆಗೆ ನಾವು ಬದ್ದರಾಗಿ ಕೆಲಸ ಮಾಡ್ತೇವೆ. ಪಾರ್ಟಿ ಏನು ಹೇಳುತ್ತೋ ಅದನ್ನ ನಾವು ಮಾಡ್ತೇವೆ. ಗುಡಿಸಿ ಅಂದ್ರೆ ಗುಡಿಸ್ತೇವೆ, ಒರೆಸಿ ಅಂದ್ರೆ ಒರೆಸ್ತೇವೆ.. ಹೀಗೆಂದು ಸಂಸದ ನಳಿನ್ ಕುಮಾರ್ ಭಾವುಕ ಮಾತುಗಳನ್ನಾಡಿದ್ದಾರೆ.
ಈ ಬಾರಿ ಪ್ರತಾಪಸಿಂಹ ಸೇರಿದಂತೆ ಕೆಲವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ, ಸಂಸದ ನಳಿನ್ ಕುಮಾರ್ ಕಟೀಲ್ ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾನ್ಯ ಕಾರ್ಯಕರ್ತರನ್ನ ಗುರುತಿಸೋದು ನಮ್ಮ ಪಾರ್ಟಿಯ ವಿಶೇಷತೆ. ಪಕ್ಷದ ರಾಷ್ಟ್ರೀಯ ನಾಯಕರು ಯೋಚನೆ ಮಾಡಿಕೊಂಡು ಸಂಸದ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಮಾಡ್ತಾರೆ. ಪಕ್ಷ ನಿಂತ ನೀರಾಗಬಾರದು, ಹೊಸಬರು ಬರ್ತಾ ಇರಬೇಕು, ಸ್ವಾಗತಿಸ್ತೇನೆ ಎಂದು ಪರೋಕ್ಷವಾಗಿ ತನಗೂ ಟಿಕೆಟ್ ಸಿಗುತ್ತಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಪಕ್ಷದ ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಅಧಿಕಾರ ಮುಖ್ಯ ಅಲ್ಲ, ರಾಷ್ಟ್ರೀಯ ನಾಯಕರ ಚಿಂತನೆ ಮುಖ್ಯ. ನಾನು ಸಾಮಾಜಿಕ ತಾಣಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಪಕ್ಷದ ನಿರ್ಧಾರಕ್ಕೆ ಬದ್ಧನಿದ್ದೇನೆ. ನಾವು ಅದನ್ನೇ ನಂಬಿ ಇದ್ದವರಲ್ಲ, ಸಂಘಟನೆ ಕಾರ್ಯವನ್ನು ನಂಬಿದವರು. ಕಾರ್ಯಕರ್ತರ ಆಧಾರದಲ್ಲಿ ಇದೆಲ್ಲಾ ಕಾರ್ಯಗಳು ಆಗುತ್ತೆ. ರಾಷ್ಟ್ರೀಯ ನಾಯಕರ ಯಾವ ತೀರ್ಮಾನಕ್ಕೂ ನಾವು ಬದ್ಧರಿದ್ದೇವೆ ಎಂದರು.
ನನಗೆ ಮೂರು ಬಾರಿ ಅವಕಾಶ ಕೊಡಲಾಗಿದೆ, 15 ವರ್ಷ ಕೆಲಸ ಮಾಡಿದ್ದೇನೆ. ಎಲ್ಲಿಯೂ ವ್ಯತ್ಯಾಸಗಳಿಲ್ಲ, ನಮ್ಮ ಪಕ್ಷದಲ್ಲಿ ಯಾವುದೇ ರೀತಿಯಲ್ಲೂ ತುಳಿಯೋ ಕೆಲಸ ನಡೆಯಲ್ಲ, ಬೆಳೆಸೋ ಕೆಲಸ ಮಾಡ್ತಾರೆ ಎಂದು ಹೇಳಿದ ನಳಿನ್ ಕುಮಾರ್, ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದೆ, ಸಂಘದ ವಿಚಾರ ಇಟ್ಟುಕೊಂಡಿದ್ದೆ. ಹಿರಿಯರು ಬಿಜೆಪಿ ಕೆಲಸ ಮಾಡು ಅಂತ ಹೇಳಿದ್ರು, ಲೋಕಸಭೆಗೆ ಅವಕಾಶ ಕೊಟ್ಟರು. ಸಾಮಾನ್ಯ ಕಾರ್ಯಕರ್ತನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೂಡ ಕೊಟ್ಟರು ಎಂದರು.
ಅವಕಾಶ ಸಿಕ್ಕಾಗ ನ್ಯಾಯ ಸಿಕ್ಕಿದೆ, ಸಿಗದೇ ಇದ್ದಾಗ ಅನ್ಯಾಯ ಆಗಿದೆ ಎನ್ನುವ ಹಕ್ಕು ನನಗಿಲ್ಲ. ಪಕ್ಷ ಎಲ್ಲರನ್ನೂ ಬೆಳೆಸಿದೆ, ಪಕ್ಷದ ಕೆಲಸಕ್ಕೆ ಜನ ಬೇಕಿದೆ. ಎಲ್ಲರಿಗೂ ಅಧಿಕಾರದ ಸ್ಥಾನ ಸಿಗಲ್ಲ. ಪಕ್ಷ ಹೇಳಿದರೆ ಯಾವ ಕೆಲಸ ಮಾಡೋದಕ್ಕೂ ರೆಡಿ ಇದ್ದೇನೆ ಎಂದರು. ಅಸಮಾಧಾನ ಇದೆಯಾ ಎಂಬ ಪ್ರಶ್ನೆಗೆ, ಅಸಮಾಧಾನ ಯಾಕೆ ಆಗಬೇಕು? ನಾವು ಮಾಡೋದು ಸಂಘಟನೆ ಕಾರ್ಯ. ನಮಗೆ ಅಸಮಾಧಾನ ಯಾವುದೇ ಸಂದರ್ಭದಲ್ಲಿ ಇರಲ್ಲ, ಅದು ಅಸಾಧ್ಯ ಎಂದು ಹೇಳಿದರು.
Mangalore MP Nalin Kateel says ready for anything, will respect BJP High command decision, he was quite emotional as he was speaking to media persons here in Mangalore.
18-09-25 05:34 pm
Bangalore Correspondent
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
18-09-25 04:31 pm
Mangalore Correspondent
Mangalore, Traffic Police: ನಂಗೆ ಕೈಮಾಡಲು ನಿಂಗೇ...
18-09-25 02:42 pm
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
Dharmasthala: ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನ...
17-09-25 11:05 pm
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm