ಬ್ರೇಕಿಂಗ್ ನ್ಯೂಸ್
03-06-24 05:50 pm Mangalore Correspondent ಕರಾವಳಿ
ಮಂಗಳೂರು, ಜೂನ್ 3: ಪೊಲೀಸರ ವಿರುದ್ಧ ಜಿದ್ದಿಗೆ ಬಿದ್ದಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಹರಿಹಾಯ್ದಿದ್ದಾರೆ. ಎಸ್ಪಿ ರಿಷ್ಯಂತ್ ಸಿಂಗ್ ಕಾಂಗ್ರೆಸ್ ವಕ್ತಾರನ ರೀತಿ ಮಾತಾಡಿದ್ದಾರೆ. ಮೂರು ಜೀಪುಗಳಲ್ಲಿ 15ಕ್ಕೂ ಹೆಚ್ಚು ಪೊಲೀಸರು ಅರೆಸ್ಟ್ ಮಾಡುವುದಾಗಿ ಬಂದಿದ್ದರು. ಆದರೆ ಮೊನ್ನೆ ಧರ್ಮಸ್ಥಳದಲ್ಲಿ ಎಸ್ಪಿಯವರು ಕಾಗಕ್ಕ ಗೂಬಕ್ಕನ ಕತೆ ಹೇಳುವ ರೀತಿ ಮಾತಾಡಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ನಾಯಕರನ್ನು ಮತ್ತು ಮುಖ್ಯಮಂತ್ರಿಯನ್ನು ಮೆಚ್ಚಿಸಲು ಈ ರೀತಿ ಮಾತಾಡಿದ್ದಾರೆ ಎಂದು ಹರೀಶ್ ಪೂಂಜ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಅರೆಸ್ಟ್ ಮಾಡಿಕೊಂಡು ಹೋಗುತ್ತೇವೆಂದು ಡಿವೈಎಸ್ಪಿ ಸೇರಿದಂತೆ ಎಲ್ಲ ಪೊಲೀಸರು ಬಂದಿದ್ದರು. ನೋಟೀಸ್ ಕೊಟ್ಟು ಹೋಗುವುದಕ್ಕೆ ಅಷ್ಟು ಪೊಲೀಸರು ಬರಬೇಕಿತ್ತೇ.. ಇದಲ್ಲದೆ, ಸಂಜೆ ಏಳು ಗಂಟೆಯಾಗಿದ್ದರಿಂದ ಸ್ಥಳದಲ್ಲಿ ರಸ್ತೆ ಕಿರಿದಾಗಿದ್ದರಿಂದ ಪೊಲೀಸರು ಹಿಂತಿರುಗಿದ್ದರು ಎಂದು ಎಸ್ಪಿ ಒಂದು ಕಡೆ ಹೇಳುತ್ತಾರೆ. ಒಬ್ಬ ಜನಪ್ರತಿನಿಧಿಯ ಮಾತು ಕೇಳಿ ಹಿಂತಿರುಗಿದ್ದಾಗಿ ಹೇಳಿದ್ದಾರೆ. ಯಾರು ಆ ಜನಪ್ರತಿನಿಧಿಯೆಂದು ನಿರ್ದಿಷ್ಟವಾಗಿ ಹೇಳಬೇಕು ಎಂದು ಹೇಳಿದರು.

ಎಸ್ಪಿ ವರ್ತನೆ ಮಾಡಿರುವುದು ಅಕ್ಷಮ್ಯ. ಈ ರೀತಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಆಗಿಯೇ ಇಲ್ವಾ.. ಈ ಹಿಂದೆ ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಬಂದಾಗ, ಕಾಂಗ್ರೆಸ್ ಕಾರ್ಯಕರ್ತರು ಕರ್ತವ್ಯಕ್ಕೆ ಅಡ್ಡಿ ಮಾಡಿರಲಿಲ್ಲವೇ.. ಆಗ ಯಾವ ರೀತಿ ಪ್ರತಿಭಟನೆ ಮಾಡಿಲ್ಲ. ಅದಕ್ಕೆ ಪೊಲೀಸರು ಕೇಸು ಹಾಕಿದ್ದಾರೆಯೇ ಎಂದು ಪ್ರಶ್ನಿಸಿದರು. ಕಲ್ಲುಕೋರೆ ಇದ್ದ ಜಾಗ ಖಾಸಗಿಯೇ, ಸರಕಾರಿ ಜಾಗವೇ ಎಂದು ತನಿಖೆ ಮಾಡುವುದಾಗಿ ಎಸ್ಪಿ ಹೇಳಿದ್ದಾರೆ. ಸರಕಾರದ್ದೇ ದಿಶಾ ಏಪ್ ನಲ್ಲಿ ನಮೂದಿಸಿದಾಗ, ಅದು ಜಾಗ ಯಾರದ್ದೆಂದು ತಿಳಿಯುತ್ತದೆ. ಅದರ ಬಗ್ಗೆ ಎಸ್ಪಿ ಅವರಿಗೆ ಪರಿಜ್ಞಾನ ಇಲ್ಲವೇ. ಹೀಗಾಗಿ ಇವರು ಯಾವ ಜಮಾನದಲ್ಲಿದ್ದಾರೆಂದು ಕೇಳಬೇಕಾಗುತ್ತದೆ ಎಂದು ಪ್ರಶ್ನಿಸಿದರು.
ಪ್ರಕರಣ ನಡೆದ ಮೂರೇ ದಿನದಲ್ಲಿ ಚಾರ್ಜ್ ಶೀಟ್ ಹಾಕಿರುವುದು ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಮೊದಲು. ಕಳಂಜದಲ್ಲಿ ನಡೆದ ಘಟನೆ ಬಗ್ಗೆ ಅರಣ್ಯ ಇಲಾಖೆಯ ಕೇಸನ್ನು ವಜಾ ಮಾಡುತ್ತೇವೆಂದು ಸದನದಲ್ಲಿ ಸಚಿವರೇ ಹೇಳಿದ್ದರು. ಆದರೆ ಈಗ ಇಲಾಖೆಯಿಂದ ಚಾರ್ಜ್ ಶೀಟ್ ಹಾಕಿದ್ದಾರೆ ಎಂದರು. ಶಶಿರಾಜ್ ಶೆಟ್ಟಿ ಅಮಾಯಕನಾಗಿದ್ದು, ಆತನ ವಿರುದ್ಧ ಉದ್ದೇಶಪೂರ್ವಕ ಕೇಸು ದಾಖಲು ಮಾಡಿದ್ದಾರೆ ಎಂದಾಗ, ಆತನನ್ನು ನೀವು ಅಮಾಯಕ ಎಂದು ಹೇಗೆ ಹೇಳುತ್ತೀರಿ. ಅದನ್ನು ನೀವು ಕೋರ್ಟಿನಲ್ಲಿ ಸಾಬೀತು ಮಾಡಬೇಕಲ್ವಾ ಎಂದು ಕೇಳಿದ್ದಕ್ಕೆ, ಆತ ಅಮಾಯಕನೇ. ದೂರಿನಲ್ಲಿ ಹೆಸರು ಇಲ್ಲದಿದ್ದರೂ ಎಫ್ಐಆರ್ ಮಾಡಿದ್ದರು. ಕೋರ್ಟಿನಲ್ಲಿ ನಾವು ಅಮಾಯಕನೆಂದು ಸಾಬೀತು ಮಾಡುತ್ತೇವೆ ಎಂದರು.
ಕೋರ್ಟ್ ಛೀಮಾರಿ ಹಾಕಿದೆಯಲ್ವಾ..?
ನಿಮ್ಮ ವಿರುದ್ಧ ಹೈಕೋರ್ಟ್ ಛೀಮಾರಿ ಹಾಕಿದೆಯಲ್ಲಾ ಎಂಬ ಪ್ರಶ್ನೆಗೆ, ಕೋರ್ಟಿನ ವಿಚಾರ ಇರಲಿ, ನಾವು ನೋಡಿಕೊಳ್ಳುತ್ತೇವೆ. ಅದರ ಬಗ್ಗೆ ಈಗ ಚರ್ಚೆ ಬೇಡ ಎಂದರು. ಸಂಸದರ ವಿನಂತಿ ಮೇರೆಗೆ ಪೊಲೀಸರು ಹಿಂದೆ ಸರಿದಿದ್ದು ಅಂತ ಎಸ್ಪಿ ಹೇಳಿದ್ದರಲ್ಲವೇ ಎಂದು ಪ್ರಶ್ನೆ ಹಾಕಿದಾಗ, ಉತ್ತರಿಸಿದ ಸಂಸದ ನಳಿನ್ ಕುಮಾರ್ ನಾವು ಡಿವೈಎಸ್ಪಿ ಬಳಿ ಅರೆಸ್ಟ್ ಮಾಡ್ತೀರಾ ಎಂದು ಕೇಳಿದ್ದಕ್ಕೆ ನಾವು ನೋಟಿಸ್ ಕೊಡಲು ಬಂದಿದ್ದಾಗಿ ತಿಳಿಸಿದ್ದರು. ನೋಟೀಸ್ ಕೊಟ್ಟು ಹೋಗಿ, ಯಾಕೆ ಗೊಂದಲ ಮಾಡ್ತೀರಿ ಎಂದಿದ್ದಕ್ಕೆ, ಶಾಸಕರು ಠಾಣೆಗೆ ಬಂದು ಹೇಳಿಕೆ ಕೊಡಬೇಕು ಎಂದರು. ನಾವು ಠಾಣೆಗೆ ಬರುತ್ತೇವೆ, ನೀವು ಹೋಗಿ ಎಂದಿದ್ದಕ್ಕೆ ಪೊಲೀಸರು ಹಿಂತಿರುಗಿದ್ದರು. ಆನಂತರ, ಶಾಸಕರು ವಕೀಲರೊಂದಿಗೆ ರಾತ್ರಿ ಹೊತ್ತಿನಲ್ಲಿ ಠಾಣೆಗೆ ಹೋಗಿದ್ದರು. ಇಷ್ಟೇ ಆಗಿರೋದು ಎಂದು ಹೇಳಿ ಚರ್ಚೆಗೆ ತೆರೆ ಎಳೆದರು. ಸುದ್ದಿಗೋಷ್ಟಿಯಲ್ಲಿ ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಲೋಕಸಭೆ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಹಿರಿಯ ವಕೀಲ ಶಂಭು ಶರ್ಮ ಉಪಸ್ಥಿತರಿದ್ದರು.
Beltangady MLA Harish Poonja stated that the district superintendent of police (SP) C B Ryshyanth has made it inevitable for him to conduct a press meet.During a press conference on Monday, June 3, Poonja expressed discontent with the SP's conduct, particularly during a press meet in Dharmasthala. He accused the SP of making allegations akin to a Congress party spokesperson rather than an IPS officer.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm