Laxmi Hebbalkar, Udupi: ಉಡುಪಿಯಲ್ಲಿ ಕಾಂಗ್ರೆಸಿಗೆ ಬೆನ್ನು ಬೆನ್ನಿಗೆ ಸೋಲು ; ಜಿಲ್ಲಾ ನಾಯಕರ ಬಗ್ಗೆ ಕಾರ್ಯಕರ್ತರ ಆಕ್ರೋಶ, ಉಸ್ತುವಾರಿ ಸಚಿವರ ಬದಲಾವಣೆಗೆ ಜಾಲತಾಣದಲ್ಲಿ ಅಭಿಯಾನ 

05-06-24 06:12 pm       Udupi Correspondent   ಕರಾವಳಿ

ಲೋಕಸಭಾ ಫಲಿತಾಂಶದಲ್ಲಿ ಸೋಲಾದ ಬೆನಲ್ಲೇ ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋ ಬ್ಯಾಕ್ ಅಭಿಯಾನ ನಡೆಸಿದ್ದಾರೆ. ‌

ಉಡುಪಿ, ಜೂನ್ 5: ಲೋಕಸಭಾ ಫಲಿತಾಂಶದಲ್ಲಿ ಸೋಲಾದ ಬೆನಲ್ಲೇ ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋ ಬ್ಯಾಕ್ ಅಭಿಯಾನ ನಡೆಸಿದ್ದಾರೆ. ‌

ಜಾಲತಾಣದಲ್ಲಿ ʼಗೋ ಬ್ಯಾಕ್ʼ‌ ಅಭಿಯಾನ ಆರಂಭಿಸಿದ್ದು ಕರಾವಳಿಯಲ್ಲಿ ಕಾಂಗ್ರೆಸ್‌ ಸೋಲಿಗೆ ಜಿಲ್ಲಾ ಉಸ್ತುವಾರಿ ಸಚಿವರು ಕಾರಣ ಎಂದು ಗರಂ ಆಗಿದ್ದಾರೆ.‌ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಕಾರ್ಯಕರ್ತರು ಗರಂ ಆಗಿದ್ದು ಸಮಸ್ಯೆ ಆದಾಗ ನೀವು ಬರೋದೆ ಇಲ್ಲ.‌ ಉಡುಪಿ ಜಿಲ್ಲೆಗೆ ನಿಮ್ಮ ಕೊಡುಗೆ ಏನೂ ಇಲ್ಲ. ಜಿಲ್ಲಾ ಕಾಂಗ್ರೆಸ್ ನಾಯಕರು ಬಿಜೆಪಿ ಜೊತೆಗೆ ಒಳಗಿಂದೊಳಗೆ ಒಳ ಒಪ್ಪಂದ ಮಾಡಿದ್ದಾರೆ. ಕಾರ್ಯಕರ್ತರು ಮಾತ್ರ ಹಗಲು ರಾತ್ರಿ ಕೆಲಸ ಮಾಡುತ್ತಿರಬೇಕು ಎಂದು ಬರೆದುಕೊಂಡಿದ್ದಾರೆ. 

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರನ್ನ ಬದಲಿಸುವಂತೆ ಕಾರ್ಯಕರ್ತರು ಒತ್ತಾಯಿಸಿದ್ದು ಲಕ್ಷ್ಮೀ ಹೆಬ್ಬಾಳ್ಕರ್‌ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾಲತಾಣದಲ್ಲಿ ಕೈ ಕಾರ್ಯಕರ್ತರ ಗೋ ಬ್ಯಾಕ್ ಪೋಸ್ಟರ್ ವೈರಲ್ ಆಗಿದೆ. 

ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಐದಕ್ಕೆ ಐದು ಸ್ಥಾನದಲ್ಲೂ ಸೋಲಾಗಿದೆ. ಎರಡು ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದೇವೆ. ನಗರಸಭೆ, ಪುರಸಭೆ ಚುನಾವಣೆಯಲ್ಲಿ ಹೀನಾಯ ಸೋಲಾಗಿದೆ. ಇದಕ್ಕೆಲ್ಲ ಕಾಂಗ್ರೆಸ್ ನಾಯಕರ ನಿರ್ಲಕ್ಷ್ಯವೇ ಕಾರಣವೆಂದು ಆಕ್ರೋಶ ಹೊರಹಾಕಿದ್ದಾರೆ.

Go back camping starts against Laxmi Hebbalkar, says she’s the reason for congress defeat in lok sabha elections in Udupi. Social media post against Laxmi Hebbalkar has gone viral on social media.