Mangalore Boliyar stabbing, five arrested: ಬೋಳಿಯಾರು ಚೂರಿ ಇರಿತ ಪ್ರಕರಣ ; ಐವರು ಆರೋಪಿಗಳ ಬಂಧನ, ಮಸೀದಿ ಮುಂಭಾಗದಲ್ಲಿ ಘೋಷಣೆ ಕೂಗಿದ್ದಾರೆಂದು ಮತ್ತೊಂದು ಕೇಸು, ಸಿಸಿಟಿವಿ ಆಧರಿಸಿ ಐವರ ವಿರುದ್ಧ ಪ್ರಕರಣ ದಾಖಲು

10-06-24 07:17 pm       Mangalore Correspondent   ಕರಾವಳಿ

ಬೋಳಿಯಾರಿನಲ್ಲಿ ಬಿಜೆಪಿ ಕಾರ್ಯಕರ್ತರಿಬ್ಬರ ಮೇಲೆ ಚೂರಿಯಿಂದ ದಾಳಿ ನಡೆಸಿದ ಘಟನೆ ಸಂಬಂಧಿಸಿ ಕೋಣಾಜೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಶಕೀರ್(28), ಅಬ್ದುಲ್ ರಜಾಕ್ (40), ಅಬೂಬಕ್ಕರ್ ಸಿದ್ದಿಕ್(35), ಸವಾದ್ (18) ಮತ್ತು ಮೋನು ಅಲಿಯಾಸ್ ಹಫೀಜ್ (24) ಬಂಧಿತರು.

ಮಂಗಳೂರು, ಜೂನ್ 10: ಬೋಳಿಯಾರಿನಲ್ಲಿ ಬಿಜೆಪಿ ಕಾರ್ಯಕರ್ತರಿಬ್ಬರ ಮೇಲೆ ಚೂರಿಯಿಂದ ದಾಳಿ ನಡೆಸಿದ ಘಟನೆ ಸಂಬಂಧಿಸಿ ಕೋಣಾಜೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಶಕೀರ್(28), ಅಬ್ದುಲ್ ರಜಾಕ್ (40), ಅಬೂಬಕ್ಕರ್ ಸಿದ್ದಿಕ್(35), ಸವಾದ್ (18) ಮತ್ತು ಮೋನು ಅಲಿಯಾಸ್ ಹಫೀಜ್ (24) ಬಂಧಿತರು.

ಇದೇ ವೇಳೆ, ಬೋಳಿಯಾರು ಜುಮ್ಮಾ ಮಸೀದಿ ಕಮಿಟಿಯ ಅಧ್ಯಕ್ಷ ಪಿ.ಕೆ ಅಬ್ದುಲ್ಲಾ ನೀಡಿದ ದೂರಿನಂತೆ ಕೋಣಾಜೆ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದ ಬಳಿಕ ಕೆಲವು ಕಾರ್ಯಕರ್ತರು ಮಸೀದಿ ಮುಂಭಾಗದಲ್ಲಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದರು. ಆಮೂಲಕ ಅಲ್ಲಿದ್ದ ಮುಸ್ಲಿಂ ಕಾರ್ಯಕರ್ತರನ್ನು ಪ್ರಚೋದಿಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದು, ಇದರ ಸಿಸಿಟಿವಿ ವಿಡಿಯೋವನ್ನೂ ಮಸೀದಿಯವರು ಬಿಡುಗಡೆ ಮಾಡಿದ್ದಾರೆ.

ದೂರು ಆಧರಿಸಿ ಪೊಲೀಸರು ಸೆಕ್ಷನ್ 143, 147, 148, 153ಎ, 504, 506, 149 ಅಡಿ ಪ್ರಕರಣ ದಾಖಲಿಸಿದ್ದಾರೆ. ಸುರೇಶ್, ವಿನಯ್, ಸುಭಾಶ್, ರಂಜಿತ್, ಧನಂಜಯ ಆರೋಪಿಗಳೆಂದು ಹೆಸರಿಸಲಾಗಿದೆ. ನಿನ್ನೆ ರಾತ್ರಿ 9 ಗಂಟೆಗೆ ಚೂರಿ ಇರಿತದ ವಿಚಾರ ತಿಳಿಯುತ್ತಿದ್ದಂತೆ ಬೋಳಿಯಾರಿನಲ್ಲಿ ಎರಡೂ ಕೋಮಿನ ಜನರು ಸೇರಿದ್ದರು. ಬಳಿಕ ಪೊಲೀಸರು ಅವರನ್ನು ಚದುರಿಸುವ ಪ್ರಯತ್ನ ಮಾಡಿದ್ದರು. ಆನಂತರ, ಮಧ್ಯರಾತ್ರಿ ವೇಳೆಗೆ ಕೋಣಾಜೆ ಠಾಣೆಯ ಮುಂದೆ ಸೇರಿದ್ದ ಕಾರ್ಯಕರ್ತರು ಆರೋಪಿಗಳನ್ನು ಬಂಧಿಸುವಂತೆ ಆಗ್ರಹ ಮಾಡಿದ್ದರು. ಈ ನಿಟ್ಟಿನಲ್ಲಿ ಪೊಲೀಸರು ಘಟನೆ ನಡೆದ ಬಾರ್ ಮುಂಭಾಗದ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

Mangalore Boliyar stabbing, five arrested by police. Additionally, reports indicate that the police have thoroughly reviewed the CCTV footage relevant to the case. The incident occurred following a victory procession organized by the BJP in Boliyar after the recent N.D.A. government formation at the Centre. Allegedly, a group accosted three BJP workers outside Boliyar Bar post-procession, leading to a violent altercation where two individuals, identified as Harish Nandakumar and Krishna Kumar, sustained injuries. They are currently receiving medical treatment at a private hospital in Deralakatte