Mangalore, CT Ravi, Boliyar Stabbing, U T Khader: ಯು.ಟಿ.ಖಾದರ್ ನೆಟ್ಟಗಿರ್ತಿದ್ದರೆ ಕುಕ್ಕರ್ ಬ್ಲಾಸ್ಟ್ ಆಗುತ್ತಿರಲಿಲ್ಲ.. ಭಾರತ್ ಮಾತಾ ಕಿ ಜೈ ಅಂದ್ರೆ ಕೆಲವ್ರಿಗೆ ಮೆಣಸಿನ್ ಕಾಯಿ ಇಟ್ಟಂಗಾಗುತ್ತೆ ; ಸರ್ಕಾರದ ಬೆಂಬಲದಿಂದಲೇ ರಾಜ್ಯದಲ್ಲಿ ಕುಕೃತ್ಯ! ಸಿ.ಟಿ.ರವಿ ಆರೋಪ 

15-06-24 01:14 pm       Mangalore Correspondent   ಕರಾವಳಿ

ಯು.ಟಿ.ಖಾದರ್ ಅವರು ನೆಟ್ಟಗಿರುತ್ತಿದ್ದರೆ ಮಂಗಳೂರಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗುತ್ತಿರಲಿಲ್ಲ. ಭಾರತದಲ್ಲಿ ಭಾರತ್ ಮಾತಾ ಕಿ ಜೈ ಅಂದ್ರೆ ಕೆಲವ್ರಿಗೆ ಮೆಣಸಿನ್ ಕಾಯಿ ಇಟ್ಟಂಗೆ ಆಗುತ್ತೆ.

ಉಳ್ಳಾಲ, ಜೂ.15: ಯು.ಟಿ.ಖಾದರ್ ಅವರು ನೆಟ್ಟಗಿರುತ್ತಿದ್ದರೆ ಮಂಗಳೂರಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗುತ್ತಿರಲಿಲ್ಲ. ಭಾರತದಲ್ಲಿ ಭಾರತ್ ಮಾತಾ ಕಿ ಜೈ ಅಂದ್ರೆ ಕೆಲವ್ರಿಗೆ ಮೆಣಸಿನ್ ಕಾಯಿ ಇಟ್ಟಂಗೆ ಆಗುತ್ತೆ. ಮತೀಯ ಶಕ್ತಿಗಳು ಮತ್ತು ಮತಾಂಧರಿಗೆ ರಾಜ್ಯ ಕಾಂಗ್ರೆಸ್ ಸರಕಾರವು ಬೆಂಬಲ ನೀಡುತ್ತಿರುವುದರಿಂದಲೇ ರಾಜ್ಯದ ಉದ್ದಗಲದಲ್ಲಿ ಕುಕೃತ್ಯಗಳು ನಡೆಯುತ್ತಿವೆ ಎಂದು ಮಾಜಿ ಸಚಿವ, ವಿದಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.

ಬೋಳಿಯಾರು ಚೂರಿ ಇರಿತ ಪ್ರಕರಣದಲ್ಲಿ ಗಾಯಗೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರಾದ ನಂದನ್ ಮತ್ತು ಹರೀಶ್ ಅಂಚನ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಬೋಳಿಯಾರು ಪ್ರಕರಣದಲ್ಲಿ ಹೊರಗಿನವರು ಬಂದು ಸೌಹಾರ್ದ ಕೆಡಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿರುವ ಉಳ್ಳಾಲ ಶಾಸಕ, ಸ್ಪೀಕರ್ ಆಗಿರುವ ಯು.ಟಿ.ಖಾದರ್ ಒಳಗಿನವರೇ ಆಗಿದ್ದು, ಅವರು ನೆಟ್ಟಗಿದ್ದರೆ ಮಂಗಳೂರಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗುತ್ತಿರಲಿಲ್ಲ. ಒಳಗಿನವರು ಮತೀಯವಾದಿಗಳಿಗೆ ಕುಮ್ಮಕ್ಕು ಕೊಡೋದನ್ನ ನಿಲ್ಲಿಸಿ. ಆತ ಯಾರನ್ನು ಕೊಲ್ಲಲು ಸಂಚು ರೂಪಿಸಿ ಕುಕ್ಕರ್ ಬಾಂಬನ್ನ ಕೊಂಡೊಯ್ಯುತ್ತಿದ್ದ. ಒಳಗಿನವರು ಸರಿ ಇದ್ದಿದ್ದರೆ ಕುಕ್ಕರ್ ಬ್ಲಾಸ್ಟ್ ಆಗುತ್ತಿತ್ತೇ ಎಂದು ಪ್ರಶ್ನಿಸಿದರು.

ಪೊಲೀಸ್ ಇಲಾಖೆ ಕೂಡ ಮತಾಂಧರ ಕೈಗೊಂಬೆ ತರ ವರ್ತಿಸಬಾರದು. ಬಿಜೆಪಿ ಕಾರ್ಯಕರ್ತರಿಗೆ ಇರಿದ ಪ್ರಮುಖ ಆರೋಪಿ ಇನ್ನೂ ಸಿಕ್ಕಿಲ್ಲ. ಆತನನ್ನ ಶೀಘ್ರವೇ ಬಂಧಿಸಿ ನ್ಯಾಯಯುತ ನಿಷ್ಪಕ್ಷಪಾತವಾದ ಕ್ರಮ ಕೈಗೊಳ್ಳಬೇಕು. ಆರೋಪಿಗಳನ್ನ ರಕ್ಷಿಸಲು ಕೆಲವರು ಷಡ್ಯಂತರ ಮಾಡುತ್ತಿದ್ದು ಅದು ಅವರಿಗೆ ತಿರುಗು ಬಾಣ ಆಗಲಿದೆ. ಸರಕಾರದ ಈ ತಾರತಮ್ಯದ ಕೆಟ್ಟ ನೀತಿಯ ವಿರುದ್ಧ ವಿದಾನಸಭೆ ಮತ್ತು ವಿಧಾನ ಪರಿಷತ್ತಲ್ಲಿ ನಾವು ಧ್ವನಿ ಎತ್ತುತ್ತೇವೆ. ಮತೀಯವಾದಿಗಳಿಗೆ ಬೆಂಬಲ ಕೊಡುತ್ತಿರುವ ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿದ ಮೇಲೆ ಅವ್ರೂ ಅಧಿಕಾರದಲ್ಲಿರಲು ಸಾಧ್ಯವಿಲ್ಲ ಎಂದರು.

ಸಂಸದ ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಟ್ಯಾಡಿ, ಕಾರ್ಯದರ್ಶಿ ದಿನೇಶ್ ಅಮ್ಟೂರು, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮುಖಂಡರಾದ ಸಂತೋಷ್ ಕುಮಾರ್ ಬೋಳಿಯಾರು, ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಕಾರ್ಯದರ್ಶಿ ಜೀವನ್ ಕುಮಾರ್ ಕೆರೆಬೈಲು, ಯುವಮೋರ್ಚಾ ಅಧ್ಯಕ್ಷ ಮುರಳಿ ಕೊಣಾಜೆ, ಮಾಜಿ ಶಾಸಕರಾದ ಜಯರಾಮ ಶೆಟ್ಟಿ, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಯಶವಂತ ಅಮೀನ್, ಜಯಶ್ರೀ ಕರ್ಕೇರ, ಸುಷ್ಮಾ ಕೋಟ್ಯಾನ್, ಹೇಮಂತ್ ಶೆಟ್ಟಿ, ನಿಶಾನ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Boliyar Stabbing case, CT Ravi meets victims at hospital in Mangalore, slams Ut Khader. Says if Khader was right cooker bomb wouldn't have taken place in Mangalore he added.