Mangalore Kota srinivas Poojary, Nalin Kateel, Arun Puthila: ಕೋಟರಿಂದ ತೆರವಾದ ಪರಿಷತ್ ಸ್ಥಾನಕ್ಕೆ ಸದ್ಯದಲ್ಲೇ ಉಪ ಚುನಾವಣೆ ; ಬಿಜೆಪಿಯಿಂದ ಯಾರಾಗಲಿದ್ದಾರೆ ಅಭ್ಯರ್ಥಿ ? ಸ್ಥಾನದ ಮೇಲೆ ಹಲವರ ಕಣ್ಣು, ಕಾಂಗ್ರೆಸಿನಿಂದ ಗಟ್ಟಿಕುಳ ಇಳಿಸಲು ಸಿದ್ಧತೆ

21-06-24 10:20 pm       Mangalore Correspondent   ಕರಾವಳಿ

ಸ್ಥಳೀಯಾಡಳಿತ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿದ್ದರಿಂದ ಪರಿಷತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ.

ಮಂಗಳೂರು, ಜೂನ್.21: ಸ್ಥಳೀಯಾಡಳಿತ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿದ್ದರಿಂದ ಪರಿಷತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಪರಿಷತ್ ಸದಸ್ಯತ್ವ ಅವಧಿ 2028ರ ವರೆಗೆ ಇರುವುದರಿಂದ ಆ ಸ್ಥಾನಕ್ಕೆ ಆರು ತಿಂಗಳ ಒಳಗೆ ಉಪ ಚುನಾವಣೆ ನಡೆಯಲಿದೆ. ಈಗಾಗಲೇ ಈ ಸ್ಥಾನವನ್ನು ತುಂಬಲು ಬಿಜೆಪಿಯಲ್ಲಿ ಹಲವರು ಕಣ್ಣಿಟ್ಟಿದ್ದು ಲಾಬಿ ಆರಂಭಿಸಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯಾಡಳಿತ ಅಂದರೆ, ಮಹಾನಗರ ಪಾಲಿಕೆಯಿಂದ ಹಿಡಿದು ಜಿಪಂ, ತಾಪಂ, ಪುರಸಭೆ, ಗ್ರಾಮ ಪಂಚಾಯತ್ ಹೀಗೆ ಎಲ್ಲ ಸ್ತರದ ಆಡಳಿತ ಕ್ಷೇತ್ರಗಳ ಸದಸ್ಯರೂ ಇಲ್ಲಿ ಮತದಾನಕ್ಕೆ ಅರ್ಹರು. ಆದರೆ, ಜಿಪಂ ಮತ್ತು ತಾಪಂ ಚುನಾವಣೆ ನಡೆಯದೆ ಏಳೆಂಟು ವರ್ಷ ಆಗಿರುವುದರಿಂದ ಅವರಿಗೆ ಈ ಸಲ ಮತದಾನಕ್ಕೆ ಅವಕಾಶ ಇಲ್ಲ. ಉಳಿದಂತೆ, ಮಹಾನಗರ ಪಾಲಿಕೆ, ಪುರಸಭೆ, ನಗರಸಭೆ ಮತ್ತು ಗ್ರಾಪಂ ಸದಸ್ಯರು ಮತದಾನದ ಅರ್ಹತೆ ಹೊಂದಿದ್ದಾರೆ. ಅದರಲ್ಲಿ ಐದು ವರ್ಷದ ಆಡಳಿತ ಅವಧಿ ಪೂರೈಸಿದ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆ ಅಥವಾ ಇನ್ನಾವುದೇ ಆಡಳಿತ ಕ್ಷೇತ್ರ ಇದ್ದರೆ ಅವುಗಳ ಸದಸ್ಯರಿಗೆ ಚುನಾವಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲ. ಈ ಕಾರಣದಿಂದ ಇನ್ನೆರಡು ಮೂರು ತಿಂಗಳಲ್ಲಿ ಉಪ ಚುನಾವಣೆ ನಡೆದಲ್ಲಿ ಮತದಾನಕ್ಕೆ ಅರ್ಹತೆ ಇರುವ ಸದಸ್ಯರ ಸಂಖ್ಯೆ ಹೆಚ್ಚಿರದು ಎನ್ನುವ ಲೆಕ್ಕಾಚಾರ ಇದೆ.

Mithun Rai's victory in Dakshina Kannada, a distant dream: Harikrishna  Bantwal

ಬಿಜೆಪಿಯ ಸದಸ್ಯ ಸ್ಥಾನ ತೆರವು ಆಗಿರುವುದು ಮತ್ತು ಕರಾವಳಿಯಲ್ಲಿ ಪಕ್ಷದ ಪ್ರಾಬಲ್ಯ ಹೆಚ್ಚಿರುವುದರಿಂದ ಅದೇ ಪಕ್ಷದ ಸದಸ್ಯರು ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ, ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ದಕ್ಷಿಣ ಕನ್ನಡ ಸಂಸದ ಸ್ಥಾನದಿಂದ ಟಿಕೆಟ್ ವಂಚಿತರಾಗಿರುವ ನಳಿನ್ ಕುಮಾರ್ ಕರಾವಳಿಯಿಂದ ಪರಿಷತ್ತಿಗೆ ಹಾರಲು ಪ್ರಬಲ ನಿರೀಕ್ಷೆಯಲ್ಲಿದ್ದು, ಈಗಾಗಲೇ ಅವರ ಬೆಂಬಲಿಗರು ಕೋಟ ಶ್ರೀನಿವಾಸ ಪೂಜಾರಿಯಿಂದ ತೆರವಾದ ಸ್ಥಾನವನ್ನು ನಳಿನ್ ಅವರಿಗೆ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ನಳಿನ್ ಕುಮಾರ್ ಮತ್ತು ಬೆಂಬಲಿಗರು ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸದೆ, ಹಿಂದುಗಡೆ ನಿಂತುಕೊಂಡೇ ಮತ್ತೆ ಮುಂಚೂಣಿಗೆ ಬರಲು ಲೆಕ್ಕ ಹಾಕುತ್ತಿದ್ದಾರೆ. ಆದರೆ, ಕೋಟ ಬಿಲ್ಲವರಾಗಿದ್ದರಿಂದ ಆ ಸ್ಥಾನವನ್ನು ಬಿಲ್ಲವರಿಗೇ ಕೊಡಬೇಕೆಂಬ ಒತ್ತಾಯವೂ ಇದೆ. ಬಿಲ್ಲವ ಕೋಟಾದಿಂದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಆಕಾಂಕ್ಷಿ ಇದ್ದಾರೆ.

Muniyal Udaya Kumar Shetty's name proposed for Byndoor constituency at BJP  meeting | udayavani

Udupi: Pramod Madhwaraj leaving Congress for BJP? Here's why it may happen  - Daijiworld.com

ರಾಜ್ಯ ಬಿಜೆಪಿ ಮೂಲಗಳ ಮಾಹಿತಿ ಪ್ರಕಾರ, ಕೋಟ ಜಾಗಕ್ಕೆ ಪುತ್ತೂರಿನಲ್ಲಿ ಕಳೆದ ಬಾರಿ ಬಿಜೆಪಿಗೆ ಪ್ರಬಲ ಸ್ಪರ್ಧೆಯೊಡ್ಡಿ ಮತ್ತೆ ಪಕ್ಷ ಸೇರ್ಪಡೆಯಾಗಿರುವ ಅರುಣ್ ಪುತ್ತಿಲ ಮತ್ತು ಸುದೀರ್ಘ ಅವಧಿಯಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿರುವ ಉಡುಪಿ ಮೂಲದ ಉದಯ ಕುಮಾರ್ ಶೆಟ್ಟಿ ಹೆಸರು ಇದೆಯಂತೆ. ಬ್ರಾಹ್ಮಣರನ್ನು ಸಣ್ಣ ಜಾತಿಯೆಂದು ತುಳಿದಿದ್ದಾರೆಂದು ಮಾಜಿ ಶಾಸಕ ರಘುಪತಿ ಭಟ್ ಹೇಳುತ್ತ ಬಂದಿದ್ದರಿಂದ ಅದೇ ಕೋಟಾದಿಂದ ಅರುಣ್ ಪುತ್ತಿಲ ಟಿಕೆಟ್ ಗಿಟ್ಟಿಸಿಕೊಂಡರೂ ಅಚ್ಚರಿಯಿಲ್ಲ. ಆದರೆ, ಪುತ್ತೂರಿನ ಪುತ್ತಿಲ ಪರಿವಾರದ ಆಪ್ತರ ಪ್ರಕಾರ, ಅರುಣ್ ಪುತ್ತಿಲರಿಗೆ ಪುತ್ತೂರಿನಲ್ಲೇ ಅಸೆಂಬ್ಲಿಗೆ ನಿಲ್ಲಬೇಕೆಂಬ ಬಯಕೆ ಇದೆಯಂತೆ. ಜಾತಿ ಕೋಟಾದಲ್ಲಿ ಗೋಜಲು ಉಂಟಾದರೆ, ಇತರೇ ಜಾತಿಗಳವರಿಗೆ ಈ ಸ್ಥಾನ ಸಿಕ್ಕರೂ ಸಿಕ್ಕೀತು. ಹಾಗಾದಲ್ಲಿ ಉಡುಪಿಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅಥವಾ ಹಿಂದುತ್ವದ ಬೆಲ್ಟ್ ನಿಂದ ಬೇರೊಬ್ಬ ಟಿಕೆಟ್ ಗಿಟ್ಟಿಸಲೂ ಬಹುದು.

Ramanath Rai announces retirement from electoral politics, says Cong will  work hard to regain lost seats in DK | coastaldigest.com - The Trusted News  Portal of India

SCDCC Bank Chairman Rajendra Kumar likely to contest Council polls - The  Hindu

ಕಾಂಗ್ರೆಸಿನಲ್ಲಿ ಗೆಲ್ಲುವ ವ್ಯಕ್ತಿ ಯಾರು ?

ಇತ್ತ ಕಾಂಗ್ರೆಸಿನಲ್ಲಿ ಕೋಟರಿಂದ ತೆರವಾದ ಕ್ಷೇತ್ರವನ್ನು ಗೆಲ್ಲುವುದಕ್ಕೆ ರಣತಂತ್ರ ಹೆಣೆಯಲು ಕಸರತ್ತು ಆರಂಭಗೊಂಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು ಯಾವ ಅಭ್ಯರ್ಥಿಯನ್ನು ಇಳಿಸಿದರೆ ಗೆಲ್ಲಬಹುದು ಎನ್ನುವ ವರದಿಯನ್ನು ರಾಜ್ಯಾಧ್ಯಕ್ಷ ಡಿಕೆಶಿ ಕೇಳಿದ್ದಾರೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ ಆಕಾಂಕ್ಷಿಯಾಗಿದ್ದರು. ಹಾಗಾಗಿ, ಈ ಸಲ ರಮಾನಾಥ ರೈ ಹೆಸರು ಮುಂಚೂಣಿ ಇರುವುದರಲ್ಲಿ ಸಂದೇಹ ಇಲ್ಲ. ಇದರ ಜೊತೆಗೆ, ಕಳೆದ ಬಾರಿ 2022ರಲ್ಲಾದ ಸ್ಥಳೀಯಾಡಳಿತದಿಂದ ಪರಿಷತ್ತಿಗೆ ನಡೆದ ಚುನಾವಣೆ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ಕಾಂಗ್ರೆಸ್ ಮತ್ತು ಬಿಜೆಪಿ ಎರಡರಲ್ಲೂ ಟಿಕೆಟ್ ಪಡೆಯಲು ಲಾಬಿ ನಡೆಸಿದ್ದು ಕೊನೆಕ್ಷಣದಲ್ಲಿ ವಿಫಲರಾಗಿದ್ದರು. ಈ ಸಲದ ಚುನಾವಣೆಯಲ್ಲಿ ಹಣ ಸುರಿಯುತ್ತೇನೆ, ಟಿಕೆಟ್ ಕೊಡಿ ಎಂದರೆ ಇಲ್ಲ ಎನ್ನಲಿಕ್ಕಿಲ್ಲ ಕಾಂಗ್ರೆಸ್ ಅನ್ನುವ ಭಾವನೆ ಇದೆ.

Kota Srinivas Pujari, who was elected to the Legislative Council from the Local Government Constituency, resigned as a member of the Council. As the term of Parishad membership is up to 2028, the position is within six months