ಬ್ರೇಕಿಂಗ್ ನ್ಯೂಸ್
23-06-24 09:12 pm Giridhar Shetty, Mangaluru ಕರಾವಳಿ
ಮಂಗಳೂರು, ಜೂನ್ 23: ಕಲ್ಲಡ್ಕ ಹೆದ್ದಾರಿಯ ಸ್ಥಿತಿ ಪ್ರತಿ ಮಳೆಗಾಲಕ್ಕೂ ಅದೇ ರಾಗ, ಅದೇ ಹಾಡು ಎನ್ನುವಂತಿದೆ. ಮತ್ತೆ ಮಳೆಗಾಲ ಶುರುವಾಗುತ್ತಲೇ ಕಲ್ಲಡ್ಕದಲ್ಲಿ ಕೃತಕ ನೆರೆಯಲ್ಲ, ರಾಡಿಯೇ ಎದ್ದುಬಿಟ್ಟಿದೆ. ಭಾನುವಾರ ಸಂಜೆ ಹೆದ್ದಾರಿಯಲ್ಲಿ ಕೆಸರು ಮಿಶ್ರಿತ ಮಳೆ ನೀರು ತುಂಬಿಕೊಂಡು ಹೊಳೆಯಂತಾಗಿತ್ತು. ನೀರಿನ ನಡುವಲ್ಲೇ ವಾಹನಗಳನ್ನು ಚಾಲಕರು ಎಲ್ಲಿ ಗುಂಡಿಗೆ ಬೀಳುತ್ತೇವೋ ಅನ್ನುವ ಭಯದಲ್ಲೇ ಚಲಾಯಿಸುತ್ತಿದ್ದರು.
ವಿಶೇಷ ಅಂದ್ರೆ, ಕಳೆದ ಬಾರಿಯ ಮಳೆಗಾಲಕ್ಕೂ, ಈ ಸಲದ ಮಳೆಗಾಲಕ್ಕೂ ಕಲ್ಲಡ್ಕದ ಸ್ಥಿತಿ ಬದಲಾಗಿಲ್ಲ. ಅದೇ ಕೆಸರು, ಅದೇ ರಾಡಿ ಎದ್ದ ರಸ್ತೆ. ಕಲ್ಲಡ್ಕದಲ್ಲಿ ಎರಡೂವರೆ ಕಿಮೀ ಉದ್ದಕ್ಕೆ ಫ್ಲೈ ಓವರ್ ನಿರ್ಮಾಣಕ್ಕೆ ಅಲ್ಲಲ್ಲಿ ಪಿಲ್ಲರ್ ಹಾಕಿದ್ದಾರೆ. ಅಲ್ಲಿ ಪಿಲ್ಲರ್ ಹಾಕಿದ್ದು ಬಿಟ್ಟರೆ ಮುಂದಿನ ಕೆಲಸ ಆಗುತ್ತಿಲ್ಲ. ಕೆಲವೊಂದು ಕಡೆ ಮೇಲ್ಭಾಗದಲ್ಲಿ ಕಾಂಕ್ರೀಟ್ ಸಂಪರ್ಕ ಆಗಿದೆ. ಕಲ್ಲಡ್ಕದಲ್ಲಿ ಇಷ್ಟು ಉದ್ದದ ಫ್ಲೈ ಓವರ್ ಅಗತ್ಯವೇ ಇಲ್ಲದಿದ್ದರೂ, ಜನಪ್ರತಿನಿಧಿಗಳ ನಿರ್ಲಕ್ಷ್ಯದ ಮಧ್ಯೆ ಅಧಿಕಾರಿಗಳು, ಕಂಪನಿಯ ಇಂಜಿನಿಯರುಗಳು ತಾವು ಹೇಳಿದ್ದೇ ಆಟ ಎನ್ನುವಂತೆ ಅಷ್ಟುದ್ದದ ಓವರ್ ಪಾಸಿಂಗ್ ಮಾಡುತ್ತಿದ್ದಾರೆ.
ಅಂದಾಜು 700 ಕೋಟಿ ವೆಚ್ಚದ ಫ್ಲೈ ಓವರ್ ಕೆಲಸವನ್ನು ತುಂಬ ನಿಧಾನ ಗತಿಯಲ್ಲಿ ಮಾಡುತ್ತಿದ್ದು, ಪಿಲ್ಲರ್ ಕೆಲಸ ಶುರುವಾದ ಬಳಿಕ ಮೂರು ಮಳೆಗಾಲ ಕಳೆದುಹೋಗಿದೆ. ಈ ಬಾರಿ ಮಳೆಯ ಆರಂಭದಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳನ್ನು ಕರೆದು, ಜನರ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ಅದರಂತೆ, ಜಿಲ್ಲಾಧಿಕಾರಿ ಕಲ್ಲಡ್ಕಕ್ಕೆ ತೆರಳಿ ಸ್ಕೂಟರಿನಲ್ಲಿ ಒಂದು ರೌಂಡ್ ಹೊಡೆದು ಹೆದ್ದಾರಿ ಸ್ಥಿತಿಯನ್ನು ಪರಿಶೀಲನೆ ಮಾಡಿದ್ದರು. ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಹೆದ್ದಾರಿ ಅಧಿಕಾರಿಗಳಿಗೆ ಹೇಳಿ ತನ್ನ ಕೆಲಸ ಮುಗೀತು ಎನ್ನುವಂತೆ ಬಂದು ಕೂತಿದ್ದರು. ಮೊನ್ನೆ ನೂತನ ಸಂಸದ ಬ್ರಿಜೇಶ್ ಚೌಟ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆದ್ದಾರಿ ಅಧಿಕಾರಿಗಳನ್ನು ಕರೆದು, ಹೆದ್ದಾರಿ ಸ್ಥಿತಿಗಳ ಬಗ್ಗೆ ಮಾಹಿತಿ ಪಡೆದಿದ್ದರು. ಅಲ್ಲದೆ, ಕಲ್ಲಡ್ಕದಲ್ಲಿ ತುರ್ತಾಗಿ ಕಾಮಗಾರಿ ನಿರ್ವಹಿಸುವಂತೆ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಆದರೆ, ದಪ್ಪ ಚರ್ಮದ ಅಧಿಕಾರಿ ವರ್ಗ ಇನ್ನೂ ಎಚ್ಚತ್ತುಕೊಂಡಿಲ್ಲ. ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡವರನ್ನು ಕಿವಿ ಹಿಂಡಿ ಕೆಲಸ ಮಾಡಿಸುವುದಕ್ಕೂ ಮುಂದಾಗಿಲ್ಲ. ದೇಶದ ಬೇರೆಲ್ಲೂ ಇಲ್ಲದ ಹೆದ್ದಾರಿ ದುರವಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನರು ಕಳೆದ ನಾಲ್ಕು ವರ್ಷಗಳಿಂದ ಅನುಭವಿಸುತ್ತಿದ್ದಾರೆ. ಶಾಸಕರು, ಸಂಸದರು, ಸ್ಥಳೀಯ ಜನರು ಮನಸ್ಸು ಮಾಡಿದರೆ ಇಂಥ ಸ್ಥಿತಿಯನ್ನು ನಿವಾರಣೆ ಮಾಡಿಸಲು ಸಾಧ್ಯವಿದೆ. ಆದರೆ ಯಾರಿಗೂ ಇಲ್ಲದ ಉಸಾಬರಿ ನಮಗ್ಯಾಕೆ ಎನ್ನುವ ಅಸಡ್ಡೆ ಇದೆ. ಕಲ್ಲಡ್ಕದ ಸ್ಥಿತಿ ಇಷ್ಟು ನಿಕೃಷ್ಟವಾಗಿದ್ದರೂ, ಶಾಸಕರು ತನಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆ. ಪ್ರತಿ ದಿನ ತನ್ನ ಊರು, ತನ್ನ ಜನರು ಎನ್ನುವ ಕಾಳಜಿಯಿಂದ ಕಾಮಗಾರಿ ಬಗ್ಗೆ ನಿಗಾ ವಹಿಸಿದರೆ ಅಧಿಕಾರಿ ವರ್ಗಕ್ಕೂ ಕಾಳಜಿ ಬರುತ್ತದೆ. ಇಲ್ಲದಿದ್ದರೆ ಒಂದು ವರ್ಷದ ಮಟ್ಟಿಗೆ ಕರಾವಳಿಗೆ ಪ್ರವಾಸ ಎನ್ನುವಂತೆ ಬಂದು ಹೋಗುವ ಅಧಿಕಾರಿ ವರ್ಗಕ್ಕೆ ಇಲ್ಲಿನ ಜನ, ರಸ್ತೆಗಳ ಬಗ್ಗೆ ಕಾಳಜಿ ಬರೋದಾದ್ರೂ ಹೇಗೆ..?
#Mangalore #Kalladka highway flooded with water due to heavy #rains, officials show negligence, public in trouble #mangaluru #rain pic.twitter.com/jHZzzTW1iz
— Headline Karnataka (@hknewsonline) June 23, 2024
Mangalore Kalladka highway flooded with water due to heavy rains, officials show negligence, public in trouble. Even after frequent meetings by MP with highway officlas yet the highway has become a night mare for those travelling by kalladka Bangalore road.
21-09-25 01:28 pm
Bangalore Correspondent
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
21-09-25 02:30 pm
Bangalore Correspondent
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm