ಬ್ರೇಕಿಂಗ್ ನ್ಯೂಸ್
24-06-24 05:00 pm Mangalore Correspondent ಕರಾವಳಿ
ಉಳ್ಳಾಲ, ಜೂ.24: ಬೋಳಿಯಾರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಇರಿತ ಪ್ರಕರಣದಲ್ಲಿ ಹದಿನಾರು ಮಂದಿ ಆರೋಪಿಗಳ ಬಂಧನವಾಗಿದ್ದರೂ ಪೊಲೀಸರು ಬೇಟೆ ಮುಂದುವರಿಸಿದ್ದಾರೆ. ಮಧ್ಯರಾತ್ರಿ ವೇಳೆ ಬೋಳಿಯಾರು ಪ್ರದೇಶದ ಮುಸ್ಲಿಮರ ಮನೆಗೆ ನುಗ್ಗಿ ಅಮಾಯಕರನ್ನ ಬಂಧಿಸುತ್ತಿದ್ದು, ಇದನ್ನ ಪ್ರಶ್ನಿಸಬೇಕಾದ ಮುಸ್ಲಿಂ ಸಮುದಾಯದ ಶಾಸಕ ಯು.ಟಿ.ಖಾದರ್ ವಿದೇಶದಲ್ಲಿ ಕುಳಿತಿದ್ದಾರೆ. ಮುಸ್ಲಿಮರ ವಿರುದ್ಧ ಪೊಲೀಸ್ ಬೇಟೆಯನ್ನ ಖಂಡಿಸಿ ಸಮುದಾಯದವರು ಒಟ್ಟು ಸೇರಿ ಕೊಣಾಜೆ ಪೊಲೀಸ್ ಠಾಣೆ ಮುಂಭಾಗದಲ್ಲಿ ಜೂನ್ 25ರಂದು ಪ್ರತಿಭಟನೆ ದಡೆಸುವುದಾಗಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಹೇಳಿದ್ದಾರೆ.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ಬಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೋಳಿಯಾರಿನಲ್ಲಿ ಚೂರಿ ಇರಿತ ಘಟನೆ ಬಗ್ಗೆ ಮಸೀದಿ ಕಮಿಟಿಯವರು ಮೊದಲಿಗೆ ಪೊಲೀಸರಿಗೆ ದೂರು ಕೊಡುತ್ತಾರೆ. ಮಂಗಳೂರು ಪೊಲೀಸ್ ಆಯುಕ್ತರೇ ಪತ್ರಿಕಾಗೋಷ್ಟಿಯಲ್ಲಿ ಹೇಳಿಕೆ ನೀಡಿದ್ದು ವಿಜಯೋತ್ಸವ ಸಂದರ್ಭ ಬಿಜೆಪಿಗರು ಮಸೀದಿ ಮುಂಭಾಗದಲ್ಲಿ ಜೈ ಶ್ರೀರಾಮ್, ಪಾಕಿಸ್ತಾನದ ಬಗೆಗಿನ ಘೋಷಣೆ ಹಾಕಿದ್ದೇ ಗಲಾಟೆಗೆ ಕಾರಣ ಎಂದಿದ್ದಾರೆ. ಘಟನೆ ನಡೆದು ಹತ್ತು ಹದಿನೈದು ದಿನಗಳಾಗಿವೆ. ಇರಿತಕ್ಕೆ ಸಂಬಂಧಿಸಿ ಹದಿನಾರು ಆರೋಪಿಗಳನ್ನ ಬಂಧಿಸಿದ್ದರೂ ಬೋಳಿಯಾರಿನಲ್ಲಿ ಮುಸ್ಲಿಮ್ ಯುವಕರ ಮನೆಗೆ ಪೊಲೀಸರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಅಮಾಯಕ ಯುವಕರನ್ನ ವಿಚಾರಣೆ ನೆಪದಲ್ಲಿ ಎರಡು ರಾತ್ರಿ, ಎರಡು ಹಗಲು ಅಕ್ರಮವಾಗಿ ಠಾಣೆಯಲ್ಲಿ ಕೂರಿಸಿದ್ದಾರೆ. ಸಿಸಿ ಕ್ಯಾಮೆರಾ ಫೂಟೇಜ್ ಆಧಾರದಲ್ಲಿ ಅದರಲ್ಲಿ ಕಂಡವರ ಸಂಬಂಧಿಗಳನ್ನ ಠಾಣೆಗೆ ಕರೆದು ಕೂರಿಸಿದ್ದು ಯಾವ ಕಾನೂನು. ಅದೇ ಸಿಸಿ ಕ್ಯಾಮೆರಾದಲ್ಲಿ ಗಲಭೆಗೆ ಪ್ರಚೋದಿಸಿದ ಸಂಘ ಪರಿವಾರದವರ ಕೃತ್ಯ ಕಾಣಸಿಕ್ಕಿಲ್ಲವೇ.. ಅವರ ಬಂಧನ ಯಾಕಿಲ್ಲ. ರಾಜ್ಯದಲ್ಲಿ ಸಿದ್ಧರಾಮಯ್ಯ ಸರಕಾರ ಇದೆಯೇ ..? ಅಥವಾ ಹಿಂದಿನ ಬೊಮ್ಮಾಯಿ ಸರಕಾರನೇ ಮುಂದುವರೆದಿದೆಯೇ ಎಂದು ಪ್ರಶ್ನಿಸಿದರು.
ಭಾನುವಾರ ರಾತ್ರಿ ಕೂಡ ರಶೀದ್ ಎಂಬವನನ್ನ ಮಧ್ಯರಾತ್ರಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಮಹಿಳೆಯರಿರುವ ಮನೆಗಳ ಬಾಗಿಲುಗಳನ್ನ ಮಧ್ಯರಾತ್ರಿ ಬಡಿದು ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಪೊಲೀಸರು ಸರಕಾರ ಮತ್ತು ಸಂಘ ಪರಿವಾರವನ್ನ ಸಂತೃಪ್ತಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ರಾತ್ರಿ ಹಗಲು ದುಡಿದವರು ಜೈಲಿನಲ್ಲಿದ್ದಾರೆ. ಶಾಸಕ ಖಾದರ್ ಅವರೇ ನೀವು ಬ್ಯಾಲೆನ್ಸಿಂಗ್ ರಾಜಕೀಯ ನಿಲ್ಲಿಸಿ. ಸಂಘ ಪರಿವಾರದ ರಕ್ಷಿಸಲು ವಿಧಾನಸೌಧ, ಕೇಶವ ಕೃಪಾದಿಂದ ಸರಕಾರಕ್ಕೆ ಆದೇಶ ಬರುತ್ತಿದೆಯೇ ಎಂದು ಅನ್ವರ್ ಸಾದತ್ ಪ್ರಶ್ನಿಸಿದರು.
ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಮಾತನಾಡಿ ಕಾಂಗ್ರೆಸಿಗರಿಗೆ ಜೈಕಾರ ಹಾಕಲು ಮಾತ್ರ ಮಸಲ್ಮಾನರು ಬೇಕು. ಈಗ ಮುಸಲ್ಮಾನರನ್ನ ಪೊಲೀಸರ ಮೂಲಕ ಜೈಲಿಗೆ ಕಳಿಸುತ್ತಿದ್ದಾರೆ. ನಾವು ಇದುವರೆಗೂ ಸಂಯಮದಲ್ಲಿದ್ದೇವೆ. ಬಕ್ರೀದ್ ಹಬ್ಬದ ಪ್ರಯುಕ್ತ ಮಂಗಳೂರು ಪೊಲೀಸ್ ಕಮೀಷನರ್ ಶಾಂತಿ ಸಭೆ ನಡೆಸುತ್ತಾರೆ. ಬಕ್ರೀದ್ ಹಬ್ಬದ ಮರುದಿವಸವೇ ಬಿಜೆಪಿ ವಿಜಯೋತ್ಸವಕ್ಕೆ ಅನುಮತಿ ನೀಡಿದ್ದಾರೆ, ಇದೆಂತಹ ತಾರತಮ್ಯ ನೀತಿ. ಬೋಳಿಯಾರು ಇರಿತ ಪ್ರಕರಣದಲ್ಲಿ ಹದಿನಾರು ಮಂದಿ ಬಂಧನದ ಬಳಿಕವೂ ಪೊಲೀಸ್ ಇಲಾಖೆಗೆ ಇನ್ನೂ ಹೆಚ್ಚಿನ ಆಸಕ್ತಿಯೇಕೆ. ಪೊಲೀಸರ ಕೋಲಾರ್ ಪಟ್ಟಿ ಹಿಡಿಯುತ್ತೇನೆಂದ ಶಾಸಕ ಹರೀಶ್ ಪೂಂಜನ ಬಂಧಿಸಲು ನಿಮಗೆ ತಾಕತ್ತಿಲ್ಲವೇ.. ಜಿಲ್ಲೆಯು ಸಂಘ ಪರಿವಾರದ ಪ್ರಯೋಗ ಶಾಲೆಯಾಗುವುದಾದರೆ ಅಲ್ಪಸಂಖ್ಯಾತರೂ ಪಕ್ಷಾತೀತವಾಗಿ ಒಟ್ಟಾಗಿ ಹೋರಾಡಲಿದ್ದೇವೆಂದು ಎಚ್ಚರಿಸಿದರು.
ಇರಿತ ಪ್ರಕರಣದಲ್ಲಿ ಬಂಧಿತ ಆರೋಪಿ ಸಿರಾಜ್ ಪತ್ನಿ ಖೈರುನ್ನೀಸ ಮಾತನಾಡಿ ನನ್ನ ಪತಿಯನ್ನ ವಿಚಾರಣೆಗೆಂದು ಮಧ್ಯರಾತ್ರಿ ಕರಕೊಂಡು ಹೋಗಿ ಎಫ್ ಐಆರ್ ದಾಖಲಿಸಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿ ಇಲ್ಲದೆಯೇ ಮಧ್ಯರಾತ್ರಿ ಮನೆಗೆ ನುಗ್ಗಿ ಪೊಲೀಸರು ಕ್ರೌರ್ಯ ತೋರಿಸುತ್ತಿದ್ದಾರೆ ಎಂದು ಅಲವತ್ತುಕೊಂಡರು. ಪತ್ರಿಕಾಗೋಷ್ಟಿಯಲ್ಲಿ ಎಸ್ಡಿಪಿಐ ಕ್ಷೇತ್ರಾಧ್ಯಕ್ಷರಾದ ಬಶೀರ್ ಎಸ್. ಎಂ, ರಾಜ್ಯ ಸಮಿತಿ ಸದಸ್ಯರಾದ ನವಾಜ್ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ಫಳ್ನೀರ್ ಉಪಸ್ಥಿತರಿದ್ದರು.
Mangalore Boliyar Stabbing case, many innocent Muslims have been arrested for no reason without any involvement says SDPI. UT Khader has now gone abroad helping no one added district president Anwar Sadat talking at the press club in Ullal.
21-09-25 01:28 pm
Bangalore Correspondent
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
21-09-25 02:30 pm
Bangalore Correspondent
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm