ಬ್ರೇಕಿಂಗ್ ನ್ಯೂಸ್
24-06-24 10:44 pm Mangalore Correspondent ಕರಾವಳಿ
ಮಂಗಳೂರು, ಜೂನ್ 24: ಅಡ್ಯಾರ್ ಬಳಿಯ ಪಾವೂರು ಉಳಿಯ ದ್ವೀಪದ ಸುತ್ತಮುತ್ತ ಮರಳುಗಾರಿಕೆ ನಡೆಸುತ್ತಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸೋಮವಾರ ಬೆಳಗ್ಗೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸದಸ್ಯರು ಮತ್ತು ಸಮಾನ ಮನಸ್ಕ ಸಂಘಟನೆಗಳ ಪ್ರಮುಖರು ಭೇಟಿ ನೀಡಿ, ದ್ವೀಪದ ಸುತ್ತ ಮರಳುಗಾರಿಕೆ ನಡೆಸುವುದನ್ನು ತೀವ್ರ ಖಂಡಿಸಿದ್ದಾರೆ.
ಅಡ್ಯಾರ್ ಬಳಿಯ ಹೆದ್ದಾರಿಯಿಂದ ಅರ್ಧ ಕಿಮೀ ಅಂತರದಲ್ಲಿ ಹರಿಯುವ ನೇತ್ರಾವತಿ ಮಧ್ಯದ ನಡುಗಡ್ಡೆಯೇ ಪಾವೂರು ಉಳಿಯ ದ್ವೀಪ. ಅಲ್ಲಿ ನೂರು ವರ್ಷಗಳ ಹಿಂದಿನಿಂದಲೂ 50ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಆಧುನಿಕ ವ್ಯವಸ್ಥೆಗಳು ಬಂದರೂ ದ್ವೀಪದ ಜನರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ದ್ವೀಪದ ಸುತ್ತ ಮರಳು ದಂಧೆಕೋರರ ಕಾಟ ಜೋರಾಗಿದ್ದು, ಅಲ್ಲಿನ ಜನರನ್ನೇ ಬೆದರಿಸಲು ಮುಂದಾಗಿದ್ದಾರೆ. ನಡುಗಡ್ಡೆಯಲ್ಲಿ 150ರಷ್ಟು ಕ್ರಿಸ್ತಿಯನ್ ಸಮುದಾಯದ ಜನರು ವಾಸವಿದ್ದು, ಕ್ರೈಸ್ತರ ನಿಯೋಗ ರಾಯ್ ಕ್ಯಾಸ್ಟಲಿನೋ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿದೆ.
ದ್ವೀಪವನ್ನೇ ಅಗೆಯುತ್ತಿರುವ ದಂಧೆಕೋರರು
ಕಳೆದ ಒಂದು ತಿಂಗಳ ಅವಧಿಯಲ್ಲಿ ದ್ವೀಪದ ಆಸುಪಾಸಿನ ಭಾಗಗಳನ್ನು ನೇರವಾಗಿ ಕಡಿದು ಹಾಕಿದ್ದು, ಮಣ್ಣನ್ನು ಅಗೆದು ಅಡಿಭಾಗದಲ್ಲಿ ಶೇಖರಗೊಂಡ ಮರಳನ್ನು ತೆಗೆಯುತ್ತಿದ್ದಾರೆ. ನೂರಕ್ಕೂ ಹೆಚ್ಚು ಉತ್ತರ ಪ್ರದೇಶ, ಬಿಹಾರ ಮೂಲದ ಕಾರ್ಮಿಕರು ಈ ಕೆಲಸದಲ್ಲಿ ನಿರತರಾಗಿದ್ದು, ಇದೇ ರೀತಿಯಾದರೆ ದ್ವೀಪವೇ ಮಾಯವಾಗುವ ಆತಂಕ ಉಂಟಾಗಿದೆ. ಉತ್ತರ ಭಾರತದ ಕಾರ್ಮಿಕರನ್ನು ಬಳಸಿ ಇಲ್ಲಿ ಯಾವುದೇ ಆಡಳಿತದ ಭಯ ಇಲ್ಲದೆ ಮರಳುಗಾರಿಕೆ ನಡೆಸಲಾಗುತ್ತಿದೆ. ಸಂಜೆ ಆರು ಗಂಟೆಯಾಗುತ್ತಲೇ ಮರಳು ಕಳ್ಳತನ ಶುರುವಾಗುತ್ತಿದ್ದು, ಬೆಳಗ್ಗೆ ಆರು ಗಂಟೆ ವರೆಗೂ ಮುಂದುವರೆಯುತ್ತದೆ. ಅಡ್ಯಾರ್ ಆಸುಪಾಸಿನಲ್ಲಿ ಐದು ಕಡೆ ಮರಳು ದಕ್ಕೆಗಳಿದ್ದು, ಅಲ್ಲಿಂದ ಹಿಟಾಚಿ ಬಳಸಿ ಟಿಪ್ಪರ್ ಗಳಿಗೆ ತುಂಬಿಸಿ ಮರಳನ್ನು ಸಾಗಿಸಲಾಗುತ್ತದೆ. ಈ ಮರಳು ಕಳ್ಳತನದಲ್ಲಿ ಗಣಿ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ನೇರ ಶಾಮೀಲಾತಿ ಹೊಂದಿದ್ದಾರೆ ಎಂದು ಸ್ಥಳಕ್ಕೆ ಬಂದವರಲ್ಲಿ ಸ್ಥಳೀಯರು ದೂರು ಹೇಳಿಕೊಂಡಿದ್ದಾರೆ.
ಪಾವೂರು ಉಳಿಯ ದ್ವೀಪ ನಿವಾಸಿಗಳಾದ ರಾಬರ್ಟ್, ಆಲ್ವಿನ್, ಶಿವಪ್ಪ, ಲಿಯಾನ್ ಮೊಂತೇರೊ ಮಾತನಾಡಿ, ನಾವು ಗಣಿ ಇಲಾಖೆ ಮತ್ತು ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದೇವೆ. ಕಲ್ಲಾಪುವಿನಲ್ಲಿರುವ ಎಸಿಪಿ ಕಚೇರಿಗೂ ತೆರಳಿ ದೂರು ಕೊಟ್ಟಿದ್ದೇವೆ. ರಾತ್ರಿ ವೇಳೆ ಮರಳುಗಾರಿಕೆ ನಡೆಸುತ್ತಿರುವಾಗಲೇ ಪೊಲೀಸರಿಗೂ ಫೋನ್ ಮಾಡಿ ಹೇಳಿದರೂ, ಬರುತ್ತಿಲ್ಲ. ಇವರೆಲ್ಲ ದಂಧೆಕೋರರ ಪರವಾಗಿ ಇದ್ದಾರೆ. ಈಗ ದ್ವೀಪವನ್ನೇ ಅಗೆಯತೊಡಗಿದ್ದು, ನಾವಿನ್ನು ಬದುಕೋದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಇಬ್ರಾಹಿಂ ಡೀಸಿ ಇದ್ದಾಗ ನಿಷೇಧ ಇತ್ತು
ಸಮಾನ ಮನಸ್ಕ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಮುನೀರ್ ಕಾಟಿಪಳ್ಳ, ಹತ್ತು ವರ್ಷಗಳ ಹಿಂದೆ ಎ.ಬಿ. ಇಬ್ರಾಹಿಂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆಗಿದ್ದಾಗ ಪಾವೂರು ಉಳಿಯ ದ್ವೀಪದ ಒಂದು ಕಿಮೀ ವ್ಯಾಪ್ತಿಯಲ್ಲಿ ಮರಳು ಎತ್ತಬಾರದು ಎಂದು ಆದೇಶ ಮಾಡಿದ್ದರು. ಆನಂತರ, ಈ ಆದೇಶವನ್ನು ಇಲ್ಲಿನ ಮಾಫಿಯಾಗಳು ಬದಲಿಸಿದ್ದು, ಈಗ ದ್ವೀಪವನ್ನೇ ಅಗೆಯಲು ಮುಂದಾಗಿದ್ದಾರೆ. ಈ ರೀತಿ ಅಗೆಯುವುದರಿಂದ ಜೈವಿಕ ಪರಿಸರಕ್ಕೂ ಹಾನಿಯಾಗಲಿದೆ. ಮೀನುಗಳು ಮಳೆಗಾಲದಲ್ಲಿ ದ್ವೀಪದ ಬದಿಯಲ್ಲಿ ಮೊಟ್ಟೆಯಿಡುತ್ತಿದ್ದು ಅವನ್ನು ನಾಶಪಡಿಸಿದಂತಾಗುತ್ತದೆ. ಅಲ್ಲದೆ, ದ್ವೀಪವನ್ನು ಅಗೆಯತೊಡಗಿದರೆ ನದಿಯಲ್ಲಿ ನೆರೆ ಬಂದಾಗ, ಅಲ್ಲಿನ ಭಾಗ ಸುಲಭದಲ್ಲಿ ಕೊಚ್ಚಿ ಹೋಗುವ ಅಪಾಯ ಇದೆ. ಇದಕ್ಕೆಲ್ಲ ಕೊಣಾಜೆ ಪೊಲೀಸರು ಮತ್ತು ಗಣಿ ಇಲಾಖೆ ಬೆಂಬಲವಿದ್ದು, ಅಕ್ರಮಕ್ಕೆ ಸಾಥ್ ನೀಡಿದ್ದಾರೆ ಎಂದು ಹೇಳಿದರು. ಮರಳು ದಂಧೆಯಲ್ಲಿ ಬಿಜೆಪಿ, ಕಾಂಗ್ರೆಸ್ ಎನ್ನುವ ಭೇದ ಇಲ್ಲ. ಹಿಂದು, ಮುಸ್ಲಿಂ, ಕ್ರಿಸ್ತಿಯನ್ ಎನ್ನುವ ಭೇದವೂ ಇರುವುದಿಲ್ಲ. ಅಕ್ರಮದ ವಿಚಾರದಲ್ಲಿ ಎಲ್ಲರೂ ಜೊತೆಗಿದ್ದು, ರಾಜಕೀಯ ಬೆಂಬಲದಲ್ಲಿ ದಂಧೆ ನಡೆಸುತ್ತಿದ್ದಾರೆ ಎಂದರು.
ರಾಯ್ ಕ್ಯಾಸ್ಟಲಿನೋ ಮಾತನಾಡಿ, ಇಲ್ಲಿ ಹಗಲು ದರೋಡೆ ನಡೀತಿದೆ ಅನ್ನುವುದಕ್ಕೆ ಸಾಕ್ಷಿಯೇ ಇವರು ರಾತ್ರಿ ಕಾಲದಲ್ಲಿ ಮಾತ್ರ ನಡೆಸುತ್ತಿರುವ ಮರಳು ಕಳ್ಳತನ. ಸಂಜೆಯಿಂದ ಬೆಳಗ್ಗಿನ ವರೆಗೆ ಮಾತ್ರ ಮರಳು ತೆಗೆಯುತ್ತಿದ್ದು ಈಗ ದ್ವೀಪವನ್ನೇ ಅಗೆಯುತ್ತಿದ್ದಾರೆ. ಈ ಬಗ್ಗೆ ನಾವು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ದೂರು ಕೊಡುತ್ತೇವೆ ಎಂದರು.
ಹಲವಾರು ಕ್ರೈಸ್ತ ಮುಖಂಡರು, ಕಮ್ಯುನಿಸ್ಟ್ ಸಂಘಟನೆಯ ಸುನಿಲ್ ಬಜಾಲ್, ಸಂತೋಷ್ ಬಜಾಲ್, ಯಾದವ ಶೆಟ್ಟಿ, ಮಂಜುಳಾ ನಾಯಕ್ ಸೇರಿದಂತೆ ಹಲವರಿದ್ದು, ಪಾವೂರು ಉಳಿಯ ದ್ವೀಪದ ಉಳಿವಿಗಾಗಿ ಜಿಲ್ಲಾಡಳಿತಕ್ಕೆ ದೂರು ಕೊಟ್ಟು ಪರಿಹಾರ ಸಿಗದಿದ್ದರೆ ಮುಂದಿನ ಹೋರಾಟದ ರೂಪುರೇಷೆ ನಡೆಸುವ ಬಗ್ಗೆ ನಿರ್ಧಾರ ಮಾಡಿದ್ದಾರೆ. ಪಾವೂರು ಉಳಿಯ ದ್ವೀಪ ಸ್ಪೀಕರ್ ಯುಟಿ ಖಾದರ್ ಪ್ರತಿನಿಧಿಸುವ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದು, ಚುನಾವಣೆ ಸಂದರ್ಭದಲ್ಲಿ ಮಾತ್ರ ಖಾದರ್ ಇಲ್ಲಿಗೆ ಬರುತ್ತಾರೆ, ಉಳಿದಂತೆ ಮೌನ ವಹಿಸುತ್ತಾರೆ. ಇಲ್ಲೊಂದು ತೂಗು ಸೇತುವೆ ಮಾಡಿಕೊಡುತ್ತೇನೆ ಎಂದಿದ್ದರೂ, ಬಹುಕಾಲದ ಬೇಡಿಕೆಯನ್ನವರು ಪೂರೈಸಿಲ್ಲ ಎಂದು ಸ್ಥಳೀಯರು ನೋವು ಹೇಳಿಕೊಂಡಿದ್ದಾರೆ.
ದಂಧೆಕೋರರ ಜೊತೆಯಲ್ಲೇ ಅಧಿಕಾರಿಗಳ ಚೆಕ್ಕಿಂಗ್
ಸಮಾನ ಮನಸ್ಕ ಸಂಘಟನೆಗಳ ಸದಸ್ಯರು, ಮಾಧ್ಯಮ ತಂಡ ದ್ವೀಪಕ್ಕೆ ಭೇಟಿ ನೀಡಿದ್ದಾಗಲೇ ಗಣಿ ಇಲಾಖೆಯ ಅಧಿಕಾರಿಗಳು ಪಾವೂರು ಉಳಿಯ ದ್ವೀಪದ ಬಳಿ ಮರಳು ದಂಧೆಕೋರರ ದೋಣಿಯಲ್ಲೇ ಪರಿಶೀಲನೆಯ ನಾಟಕ ಮಾಡಿದ್ದಾರೆ. ವಿಶೇಷ ಅಂದ್ರೆ, ದಂಧೆಕೋರರ ಜೊತೆಯಲ್ಲೇ ಇವರು ದ್ವೀಪ ಅಗೆದಿದ್ದನ್ನು ಪರಿಶೀಲನೆ ಮಾಡಿದ್ದಾರೆ. ಇಲಾಖೆಯ ಅಧಿಕಾರಿಗಳಿಗೆ ಕಾಳಜಿ ಇರುತ್ತಿದ್ದರೆ, ದ್ವೀಪದ ನಿವಾಸಿಗಳಲ್ಲಿ ದೂರು ಕೇಳಬಹುದಿತ್ತು. ಅದು ಬಿಟ್ಟು ತಮ್ಮಷ್ಟಕ್ಕೇ ದೋಣಿಯಲ್ಲಿ ಸುತ್ತು ಬಂದಿರುವುದು ಇವರ ಕಾಳಜಿಯನ್ನೇ ಪ್ರಶ್ನೆ ಮಾಡುವಂತಿದೆ.
Mangalore illegal sand mining of island at Pavoor Uliya, Like minded groups visit spot. Leaders from the Catholic Sabha Mangaluru, Mother Teresa Vichara Vedike and District Joint Forum of Like-minded Organizations submitted a memorandum to deputy commissioner Mullai Muhilan MP, IAS, on Monday, June 24.
21-09-25 01:28 pm
Bangalore Correspondent
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
21-09-25 02:30 pm
Bangalore Correspondent
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm