ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿಎಸ್ವೈ ನಾಣ್ಯಗಳ ತುಲಾಭಾರ ; ಜಿಪಂ, ತಾಪಂ ಎಲ್ಲ ಕಡೆಯೂ ಮೈತ್ರಿ ಖಚಿತ ಎಂದ ಮಾಜಿ ಮುಖ್ಯಮಂತ್ರಿ 

24-06-24 11:12 pm       Mangalore Correspondent   ಕರಾವಳಿ

ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಪಾಲಿಕೆ ಚುನಾವಣೆಗಳಲ್ಲಿ ಜೆಡಿಎಸ್ ಜೊತೆ ಸೀಟು ಹೊಂದಾಣಿಕೆ ಇರಲಿದೆ. ಕುಮಾರಸ್ವಾಮಿಯವರು ಕೂಡ ಒಟ್ಟಾಗಿ ಕೆಲಸ ಮಾಡುವ ಅಭಿಪ್ರಾಯ ಹೊಂದಿದ್ದಾರೆ.‌ ನಾವು ಎಲ್ಲ ಸ್ತರದಲ್ಲೂ ಮೈತ್ರಿ ಮಾಡಲಿದ್ದೇವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ‌

ಮಂಗಳೂರು, ಜೂನ್ 24: ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಪಾಲಿಕೆ ಚುನಾವಣೆಗಳಲ್ಲಿ ಜೆಡಿಎಸ್ ಜೊತೆ ಸೀಟು ಹೊಂದಾಣಿಕೆ ಇರಲಿದೆ. ಕುಮಾರಸ್ವಾಮಿಯವರು ಕೂಡ ಒಟ್ಟಾಗಿ ಕೆಲಸ ಮಾಡುವ ಅಭಿಪ್ರಾಯ ಹೊಂದಿದ್ದಾರೆ.‌ ನಾವು ಎಲ್ಲ ಸ್ತರದಲ್ಲೂ ಮೈತ್ರಿ ಮಾಡಲಿದ್ದೇವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ‌

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿಯಿತ್ತು ನಾಣ್ಯಗಳ ತುಲಾಭಾರ ನೆರವೇರಿಸಿದ ಬಳಿಕ ಯಡಿಯೂರಪ್ಪ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.‌ ರಾಜಕೀಯ ಜಂಜಾಟದ ಮಧ್ಯೆ ಧರ್ಮಸ್ಥಳ, ಸುಬ್ರಹ್ಮಣ್ಯ ಬಾರದೇ ತುಂಬಾ ದಿವಸ ಆಗಿತ್ತು. ದೇವರ ದರ್ಶನದ ಬಳಿಕ ನೆಮ್ಮದಿ, ಸಮಾಧಾನ ಮತ್ತು ತೃಪ್ತಿ ಇದೆ. ಈಗಿನ ಸರ್ಕಾರ ಜನಹಿತವನ್ನ ಮರೆತು ಅಭಿವೃದ್ಧಿ ಕಾರ್ಯವೆಲ್ಲ ಸ್ಥಗಿತ ಆಗಿದೆ. ಯಾವುದೋ ಗ್ಯಾರಂಟಿ ಯೋಜನೆ ಅಂತ ಹೇಳಿ ಅಭಿವೃದ್ಧಿ ಕೆಲಸ ಸ್ಥಗಿತ ಮಾಡಿದ್ದಾರೆ.‌ ಇದರ ವಿರುದ್ದ ಮಾತನಾಡಲು ಯಾರೂ ಸಿದ್ದರಿಲ್ಲದ ವಿಚಿತ್ರವಾದ ಪರಿಸ್ಥಿತಿ ರಾಜ್ಯದಲ್ಲಿ ಇದೆ. 

ಈ ಬಗ್ಗೆ ಅಧಿವೇಶನದಲ್ಲಿ ಅಂಕಿ ಅಂಶಗಳ ಮೂಲಕ ಬಿಜೆಪಿ ಸರ್ಕಾರದ ಗಮನಕ್ಕೆ ತರಲಿದೆ. ಆ ಬಳಿಕವಾದ್ರೂ ಚೇತರಿಸಿಕೊಂಡು ಅಭಿವೃದ್ಧಿ ಮಾಡಲಿ ಅಂತ ಒತ್ತಾಯಿಸ್ತೇವೆ. ಒತ್ತಾಯಕ್ಕೆ ಮಣಿಯದೇ ಇದ್ದರೆ ಮುಂದಿನ ಹೋರಾಟದ ರೂಪುರೇಷೆ ಮಾಡ್ತೇವೆ. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಮುಂದಿನ ಹೋರಾಟದ ರೂಪುರೇಷೆ ನಿರ್ಧಾರ ಮಾಡ್ತಾರೆ.‌

ಎಂಎಲ್ ಸಿ ಚುನಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ, ಇದರಲ್ಲಿ ಗೊಂದಲ ಏನೂ ಇಲ್ಲ, ದೆಹಲಿಯಲ್ಲಿ ಇವೆಲ್ಲ ಫೈನಲ್ ಆಗಿರೋದು ಎಂದರು. ಸರ್ಕಾರ ಬೀಳುತ್ತಾ ಅನ್ನೋ ಪ್ರಶ್ನೆಗೆ, ಆ ಬಗ್ಗೆ ನಾನು ಏನೂ ಹೇಳಿಕೆ ಕೊಡಲು ಇಷ್ಟಪಡಲ್ಲ. ನಾನು ವಿರೋಧ ಪಕ್ಷದ ನಾಯಕನಲ್ಲ ಎಂದರು.‌

Former Chief Minister B.S. Yediyurappa on Sunday visited the Dharmasthala temple. During his visit, he met Dharmadhikari Dr. D. Veerendra Heggade and engaged in discussions.