Mangalore, Puttur heavy rains, house destroyed: ಪುತ್ತೂರು ; ಮನೆಗೆ ಧರೆ ಕುಸಿದು ಇಬ್ಬರು ಮಕ್ಕಳು ಸ್ವಲ್ಪದರಲ್ಲಿ ಪಾರು, ಮನೆಮಂದಿ ಮಲಗಿದ್ದಾಗಲೇ ಕುಸಿದ ಗುಡ್ಡ ! 

27-06-24 11:06 am       Mangalore Correspondent   ಕರಾವಳಿ

ಮನೆ ಮೇಲೆ ಧರೆ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ ಘಟನೆ ನಡೆದಿದ್ದು ಸಕಾಲಿಕ ಪ್ರಯತ್ನದಿಂದ ಮಕ್ಕಳು ಅಪಾಯದಿಂದ ಪಾರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. 

ಪುತ್ತೂರು, ಜೂನ್ 27: ಮನೆ ಮೇಲೆ ಧರೆ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ ಘಟನೆ ನಡೆದಿದ್ದು ಸಕಾಲಿಕ ಪ್ರಯತ್ನದಿಂದ ಮಕ್ಕಳು ಅಪಾಯದಿಂದ ಪಾರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. 

ಪುತ್ತೂರಿನ ಬನ್ನೂರು ಸಮೀಪದ ಜೈನರಗುರಿಯಲ್ಲಿ ಘಟನೆ ನಡೆದಿದೆ. ನಸುಕಿನ ಜಾವ ಮನೆಮಂದಿ ನಿದ್ದೆಯಲ್ಲಿದ್ದಾಗಲೇ ಮನೆ ಮೇಲೆ ಧರೆ ಕುಸಿದು ಬಿದ್ದಿದೆ.‌ ಕೂಡಲೇ ಮನೆಯವರೇ ಸೇರಿ ಇಬ್ಬರು ಮಕ್ಕಳನ್ನ ಪಾರು ಮಾಡಿದ್ದಾರೆ. 

ಮಣ್ಣು ಬಿದ್ದ ಪರಿಣಾಮ ಮನೆಯ ಅರ್ಧ ಭಾಗ ಕುಸಿದು ಹಾನಿಯಾಗಿದೆ. ಮಜೀದ್ ಮತ್ತು ಇಬ್ಬರು ಮಕ್ಕಳು ಮಲಗಿದ್ದ ಕೊಠಡಿ ಮೇಲೆ ಪಕ್ಕದ ಗುಡ್ಡದಿಂದ ಮಣ್ಣು ಕುಸಿದು ಬಿದ್ದಿತ್ತು. ತಕ್ಷಣ ಎಚ್ಚೆತ್ತು ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳನ್ನ ತಂದೆ ಮಜೀದ್ ಪಾರು ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ನಗರಸಭೆ ಅಧಿಕಾರಿಗಳು ಭೇಟಿ ನೀಡಿದ್ದು ಮಣ್ಣು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

Puttur heavy rains, family escape from death after hill collapse, but the house has been completely destroyed. As they were sleeping the incident took place.