ಬ್ರೇಕಿಂಗ್ ನ್ಯೂಸ್
07-07-24 04:56 pm Mangalore Correspondent ಕರಾವಳಿ
ಮಂಗಳೂರು, ಜುಲೈ 7: ನಗರದ ಕೋಡಿಕಲ್ ನಲ್ಲಿ ನಿನ್ನೆ ರಾತ್ರಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿ ಕಳ್ಳರು ಮನೆಗೆ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ. ಈ ಕೃತ್ಯವನ್ನು ಹೊರ ರಾಜ್ಯದ ಚಡ್ಡಿ ಗ್ಯಾಂಗ್ ನಡೆಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಳ್ಳರು ಮನೆಯ ಕಿಟಕಿ ಕತ್ತರಿಸುವುದಕ್ಕೂ ಮುನ್ನ ಕೋಡಿಕಲ್ ಪರಿಸರದಲ್ಲಿ ಅಡ್ಡಾಡುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಐವರಿದ್ದ ಕಳ್ಳರ ತಂಡ ಮೆಲ್ಲನೆ ಹೆಜ್ಜೆ ಇಡುತ್ತಾ ಕೈಯಲ್ಲಿ ಟಾರ್ಚ್ ಬೆಳಕು ಹರಿಸಿ ಕಳವಿಗೆ ಮನೆ ಹುಡುಕುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಡ್ಡಿ ಹಾಕಿದ್ದ ಕಳ್ಳರ ಗ್ಯಾಂಗ್ ಸದಸ್ಯರು ಬರುತ್ತಿದ್ದಾಗಲೇ ನಾಯಿಗಳು ಜೋರಾಗಿ ಬೊಗಳಿದ್ದು ಅವುಗಳತ್ತ ಕಳ್ಳರು ಕಲ್ಲೆಸೆದು ಓಡಿಸಿದ್ದಾರೆ.
ಕಿಟಕಿ ಕತ್ತರಿಸಿ ಒಂದು ಮನೆಯ ಒಳಗೆ ನುಗ್ಗಿದ್ದ ಕಳ್ಳರು ಬೆಲೆಬಾಳುವ ವಸ್ತುಗಳಿಗಾಗಿ ಜಾಲಾಡಿದ್ದಾರೆ. ಆದರೆ ಅವರಿಗೆ ಚಿಲ್ಲರೆ ನಗದು ಬಿಟ್ಟರೆ ಯಾವುದೇ ವಸ್ತುಗಳು ಸಿಕ್ಕಿಲ್ಲ. ವಿಶೇಷ ಅಂದ್ರೆ, ಮನೆಮಂದಿ ಮಲಗಿದ್ದಾಗಲೇ ಕಳ್ಳರು ನುಗ್ಗಿ ಹುಡುಕಾಟ ಮುಗಿಸಿ ಸದ್ದಿಲ್ಲದೆ ಹೊರಕ್ಕೆ ತೆರಳಿದ್ದಾರೆ. ಮನೆಯವರಿಗೆ ಬೆಳಗಾದಾಗಲೇ ಕಳವು ಕೃತ್ಯ ತಿಳಿದುಬಂದಿತ್ತು.
ಚಡ್ಡಿ ಗ್ಯಾಂಗ್ ಎಂದರೇನು ?
ಚಡ್ಡಿ ಗ್ಯಾಂಗ್ ಅಂದ್ರೆ, ಇವರು ಚಡ್ಡಿ, ಬನಿಯಾನ್ ಹಾಕ್ಕೊಂಡೇ ಬರುತ್ತಾರೆ. ಸೊಂಟದಲ್ಲಿ ಹತ್ಯಾರುಗಳನ್ನು ಇಟ್ಟುಕೊಂಡಿರುತ್ತಾರೆ. ಇವರು ಮಧ್ಯಪ್ರದೇಶ, ಹೈದರಾಬಾದ್ ಮೂಲದವರಾಗಿದ್ದು ಕಳ್ಳತನವನ್ನೇ ಕಸುಬು ಮಾಡಿಕೊಂಡವರು. ಮಂಗಳೂರು, ಉಡುಪಿ ಭಾಗಕ್ಕೆ ಬಂದು ಕೆಲವು ದಿನ ಉಳಿದುಕೊಂಡು ಮನೆ ಕಳ್ಳತನ ಮಾಡಿ ಹಿಂತಿರುಗುತ್ತಾರೆ. ಈ ಹಿಂದೆಯೂ ಇವರು ಮಂಗಳೂರಿನಲ್ಲಿ ಕಳ್ಳತನ ಮಾಡಿದ್ದು ಪತ್ತೆಯಾಗಿತ್ತು. ಇದೇ ತಂಡ ಕೋಡಿಕಲ್ ಪ್ರದೇಶಕ್ಕೆ ಬಂದಿರುವುದನ್ನು ಉರ್ವಾ ಪೊಲೀಸ್ ಇನ್ಸ್ ಪೆಕ್ಟರ್ ಭಾರತಿ ದೃಢಪಡಿಸಿದ್ದಾರೆ.
ಕೋಡಿಕಲ್ ನಲ್ಲಿ ಒಂದು ಮನೆಗೆ ಕಳ್ಳರು ಹೊಕ್ಕಿರುವುದು ಈಗ ಪತ್ತೆಯಾಗಿದ್ದು ಮಂಗಳೂರಿನಲ್ಲಿ ಬೇರೆ ಎಲ್ಲೆಲ್ಲಿ ಕಳವಾಗಿದೆ ಎನ್ನುವುದು ಗೊತ್ತಾಗಿಲ್ಲ. ಹಗಲಲ್ಲಿ ಬಾಗಿಲು ಹಾಕಿರುವ ಮನೆಗಳನ್ನು ಇವರು ಟಾರ್ಗೆಟ್ ಮಾಡುತ್ತಾರೆ. ಮಳೆಗಾಲದಲ್ಲಿ ಜೋರು ಮಳೆಗೆ ಮನೆಮಂದಿ ಗಡದ್ದು ನಿದ್ದೆಗೆ ಜಾರುವುದರಿಂದ ಇದೇ ಸಮಯದಲ್ಲಿ ಈ ಕಳ್ಳರು ಮನೆಗೆ ನುಗ್ಗುತ್ತಾರೆ. ಹೀಗಾಗಿ ಸಾರ್ವಜನಿಕರು ಜಾಗ್ರತೆ ವಹಿಸಬೇಕು ಮತ್ತು ರಸ್ತೆ, ಮನೆಯ ಪ್ರವೇಶ ದಾರಿ ಕಾಣುವಂತೆ ಸಿಸಿಟಿವಿ ಅಳವಡಿಸಬೇಕು. ರಾತ್ರಿಯ ದೃಶ್ಯ ಸರಿಯಾಗಿ ಕಾಣುವ ಹಾಗೆ ಸಿಸಿಟಿವಿಗಳನ್ನು ಹಾಕಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
#ChaddiBaniyan #gang basically from madhyapradesh and Hyderabad enter #mangalore, attempt theft at #kodikal, Police urge for public vigilance. Residents are requested to inform the police control room at 9480802321 or call 112 @AnupamAgrawal16 pic.twitter.com/KeuRBtB4Za
— Headline Karnataka (@hknewsonline) July 7, 2024
Chaddi Baniyan gang basically from madhyapradesh and Hyderabad enter mangalore for theft, attempt theft at kodikal, police urge public to be careful as CCTV video goes viral. Police are now investigating the case. If any suspicious individuals are seen in the area or nearby, residents are requested to inform the police control room at 9480802321 or call 112.
04-02-25 11:32 pm
HK News Desk
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
Two-wheeler rider fined, Bangalore Traffic: ಎ...
04-02-25 03:09 pm
Cow theft, Mankal Vaidya: ಇನ್ಮುಂದೆ ಗೋಹತ್ಯೆ ನಡ...
04-02-25 12:59 pm
Mandya Car Canal Accident, Hassan Drowning: ಮ...
03-02-25 10:38 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
04-02-25 07:47 pm
Mangalore Correspondent
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
Kotekar Bank Robbery, Shashi Tevar, update: ಬ...
02-02-25 05:02 pm
Air India Express, Mangalore Delhi flight: ಮಂ...
01-02-25 07:47 pm
03-02-25 05:46 pm
Mangalore Correspondent
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am