ಬ್ರೇಕಿಂಗ್ ನ್ಯೂಸ್
03-10-24 10:17 pm Mangalore Correspondent ಕರಾವಳಿ
ಮಂಗಳೂರು, ಅ.3: ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿಮಿಟೆಡ್ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿದ್ದು, ಆರಂಭಗೊಂಡ ಎರಡೇ ವರ್ಷದಲ್ಲಿ ಅಗಾಧ ಮಟ್ಟಿಗೆ ಬೆಳೆದು ನಿಂತಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮೂಡುಬಿದ್ರೆ ಸೇರಿದಂತೆ ಎಂಟು ಕಡೆ ಕಚೇರಿಗಳನ್ನು ಹೊಂದಿದ್ದು, ಇದೀಗ ಒಂದೇ ದಿನ ಮತ್ತೆರಡು ಕಚೇರಿಗಳನ್ನು ಆರಂಭಿಸುತ್ತಿದೆ.
ಸುರತ್ಕಲ್ ಮತ್ತು ಬಂಟ್ವಾಳ ತಾಲೂಕಿನ ಮೆಲ್ಕಾರಿನಲ್ಲಿ ಅ.5ರಂದು ಒಂದೇ ದಿನ ಬೆಳಗ್ಗೆ ಮತ್ತು ಸಂಜೆ ಎರಡು ಕಚೇರಿಗಳ ಉದ್ಘಾಟನೆ ನಡೆಯಲಿದೆ. ಸುರತ್ಕಲ್ ನಲ್ಲಿ ಮಾರ್ಕೆಟ್ ರಸ್ತೆಯಲ್ಲಿರುವ ಆರೋಗ್ಯ ಕೇಂದ್ರದ ಬಳಿಯ ಕಟ್ಟಡದಲ್ಲಿ ಮತ್ತು ಮೆಲ್ಕಾರಿನ ಪ್ರತಿಷ್ಠಿತ ಬಿರ್ವ ಸೆಂಟರ್ ಕಟ್ಟಡದಲ್ಲಿ ನಿಧಿ ಸಂಸ್ಥೆಯ ಕಚೇರಿ ಆರಂಭಗೊಳ್ಳಲಿದೆ. ಎರಡೂ ಕೇಂದ್ರದಲ್ಲಿ ಪ್ರತ್ಯೇಕವಾಗಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಳಗ್ಗೆ 10.30ಕ್ಕೆ ಸುರತ್ಕಲ್ ಶಾಖೆ ಮತ್ತು ಸಂಜೆ 5.30ಕ್ಕೆ ಮೆಲ್ಕಾರ್ ಶಾಖೆ ಉದ್ಘಾಟನೆಯಾಗಲಿದೆ.
ಎರಡೂ ಶಾಖೆಗಳನ್ನು ದಕ್ಷಿಣ ಕನ್ನಡ ಮ್ಯೂಚ್ವಲ್ ಬೆನಿಫಿಟ್ ನಿಧಿ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಲ್ವಿನ್ ಜೋಯಲ್ ನೊರೊನ್ಹಾ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಮೂರ್ತೆದಾರರ ಮಹಾಮಂಡಲ ಅಧ್ಯಕ್ಷ ಕುಚ್ಚಿಗುಡ್ಡೆ ಸಂಜೀವ ಪೂಜಾರಿ, ಸದಾಶಿವ ಪೂಜಾರಿ ಬೊಂಡಾಲ, ನೇಹ ಇಲೆಕ್ಟ್ರಿಕಲ್ಸ್ ಮಾಲಕ ಸತೀಶ್, ಸಿಟಿ ಪರ್ಲ್ ಕಾಂಪ್ಲೆಕ್ಸ್ ಮಾಲಕ ಐಬರ್ಟ್ ಜೆರಾಲ್ಡ್ ಡಿಸೋಜ, ಉದ್ಯಮಿ ರಮಾನಾಥ ಶೆಟ್ಟಿ, ಕೇಶವ ಪೂಜಾರಿ, ನಿಧಿ ಲಿಮಿಟೆಡ್ ಸಂಸ್ಥೆಯ ಕಡಬ ಶಾಖೆಯ ಅಧ್ಯಕ್ಷ ಎಸ್. ಸತೀಶ್ ನಾಯಕ್, ಸುಳ್ಯ ಶಾಖೆಯ ಅಧ್ಯಕ್ಷ ವೆಂಕಟರಮಣ, ಮಂಗಳೂರಿನ ಪಿವಿಎಸ್ ಶಾಖೆ ಜನರಲ್ ಮ್ಯಾನೇಜರ್ ಹರ್ಷಿತ್ ಸಾಲ್ಯಾನ್, ಕಾರ್ಕಳ ಶಾಖಾಧ್ಯಕ್ಷ ಕಿರಣ್ ಬಂಗೇರ ಉಪಸ್ಥಿತಿ ಇರಲಿದ್ದಾರೆ.
ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿಮಿಟೆಡ್ ಬ್ಯಾಂಕ್ ಮಾದರಿಯಲ್ಲೇ ಹಣಕಾಸು ನಿರ್ವಹಣೆ ಮಾಡುತ್ತಿರುವ ಸಂಸ್ಥೆಯಾಗಿದ್ದು, ಆರಂಭಗೊಂಡ ನಾಲ್ಕೇ ವರ್ಷದಲ್ಲಿ ಹತ್ತು ಶಾಖೆಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಮಾಡಿದೆ. ಮೂಡುಬಿದ್ರೆಯಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಮಂಗಳೂರಿನ ಪಿವಿಎಸ್ ವೃತ್ತದಲ್ಲಿ ಎರಡನೇ ಶಾಖೆ, ಆನಂತರ ಹಂಪನಕಟ್ಟೆ, ಅಸೈಗೋಳಿ, ಕಡಬ, ಕಾರ್ಕಳ, ಗುತ್ತಿಗಾರು, ಪುತ್ತೂರಿನಲ್ಲಿ ಶಾಖೆಗಳನ್ನು ಆರಂಭಿಸಿದೆ. ಇದೀಗ ಮತ್ತೆರಡು ಕಚೇರಿಗಳನ್ನು ಸುರತ್ಕಲ್ ಮತ್ತು ಮೆಲ್ಕಾರಿನಲ್ಲಿ ಆರಂಭಿಸುತ್ತಿದ್ದು, ಜಿಲ್ಲೆಯಾದ್ಯಂತ ಜನಸಾಮಾನ್ಯರ ಬಳಿಗೆ ತಲುಪುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Mangalore Dakshina Kannada Mutual benefit Nidhi Company to inaugurate 10th branch at surathkal and Melkar in just span of 4 years. DKMBNL is a one of India's leading Mutual Nidhi Company. DKMBNL describes itself as a one-stop financial service provider.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm