ಬ್ರೇಕಿಂಗ್ ನ್ಯೂಸ್
10-10-24 01:52 pm Mangalore Correspondent ಕರಾವಳಿ
ಮಂಗಳೂರು, ಅ.10: ಮಂಗಳೂರಿನ ಹೆಸರಾಂತ ಲೋಟಸ್ ಪ್ರಾಪರ್ಟೀಸ್ ಬಿಲ್ಡರ್ಸ್ ಸಂಸ್ಥೆಯ ಪಾಲುದಾರ, ಬಿಲ್ಡರ್ ಜಿತೇಂದ್ರ ಕೊಟ್ಟಾರಿ ಅವರ ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದ್ದು ಇಬ್ಬರು ಯುವಕರನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರ ಅಣ್ಣನ ಮಗ, ಮಂಗಳೂರಿನಲ್ಲಿ ಎನ್ಎಸ್ ಯುಐ ಕಾರ್ಯಕರ್ತನಾಗಿರುವ ಅನುಷ್ ಶೆಟ್ಟಿ ಮತ್ತು ಕದ್ರಿ ನಿವಾಸಿ ಅಂಕಿತ್ ಶೆಟ್ಟಿ ಬಂಧಿತರು. ಅನುಷ್ ಶೆಟ್ಟಿ ಕಳೆದ ಚುನಾವಣೆ ಸಂದರ್ಭದಲ್ಲಿ ನೋಟಾ ಪರವಾಗಿ ಅಭಿಯಾನ ನಡೆಸಿದ್ದ.
ಜಿತೇಂದ್ರ ಕೊಟ್ಟಾರಿ ಬುಧವಾರ ಸಂಜೆ ಏರ್ಪೋರ್ಟ್ ಕಡೆಯಿಂದ ತನ್ನ ಆಡಿ ಕಾರಿನಲ್ಲಿ ಬಂದಿದ್ದು ಈ ವೇಳೆ ಯುವಕರಿದ್ದ ಕಾರನ್ನು ಓವರ್ ಟೇಕ್ ಮಾಡಿಕೊಂಡು ಬಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಹಿಂಬಾಲಿಸಿಕೊಂಡು ಬಂದಿದ್ದ ಯುವಕರು, ಜಿತೇಂದ್ರ ಕೊಟ್ಟಾರಿ ಅವರು ತನ್ನ ಕೊಡಿಯಾಲಬೈಲಿನ ಮನೆಗೆ ತಲುಪಿದಾಗ, ಅವಾಚ್ಯವಾಗಿ ನಿಂದಿಸಿ ಮನೆಯ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಅಲ್ಲದೆ, ಕಾರನ್ನು ಕಾಂಪೌಂಡ್ ಒಳಗಡೆ ತಂದು ಜಿತೇಂದ್ರ ಕೊಟ್ಟಾರಿ ಮತ್ತು ಅವರ ಪತ್ನಿಯ ಮೇಲೆ ಕೈಮಾಡಲು ಯತ್ನಿಸಿದ್ದಾರೆ. ಕೂಡಲೇ ಕೊಟ್ಟಾರಿ ಬರ್ಕೆ ಠಾಣೆಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಸ್ಥಳದಿಂದಲೇ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangalore Jitendra Kottary builder of Lotus Properties attacked and assaulted, two arrested. The fight erupted after kottary overtook youth youth while on his way home from airport. Barke police have registered a case.
22-04-25 01:00 pm
Bangalore Correspondent
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm