ಬ್ರೇಕಿಂಗ್ ನ್ಯೂಸ್
13-10-24 02:52 pm Mangalore Correspondent ಕರಾವಳಿ
ಮಂಗಳೂರು, ಅ.13: ತಲಪಾಡಿಯ ಲಾಟರಿ ಏಜೆನ್ಸಿಯಿಂದ ಪಡೆದ ಟಿಕೇಟಿಗೆ ಕೇರಳ ರಾಜ್ಯ ಸರ್ಕಾರದ ಓಣಂ ಬಂಪರ್ ಡ್ರಾ ಯೋಜನೆಯ ಎರಡನೇ ಬಹುಮಾನ ರೂ. ಒಂದು ಕೋಟಿ ಬಹುಮಾನ ಒಲಿದಿದೆ. ಒಂಟಿ ಮಹಿಳೆಗೆ ಲಾಟರಿ ಒಲಿದಿರುವುದರಿಂದ ಹೆಸರು ಮತ್ತು ಊರು ಹೇಳಲು ಅವರು ನಿರಾಕರಿಸಿದ್ದಾರೆ ಎಂದು ಲಾಟರಿ ಅಂಗಡಿ ಮಾಲೀಕ ಕನಕದಾಸ್ ತಿಳಿಸಿದ್ದಾರೆ.
ಕಳೆದ 30 ವರ್ಷಗಳಲ್ಲಿ ಕನಕದಾಸ್ ಅವರ ಅಂಗಡಿಯಿಂದ ಟಿಕೇಟ್ ಪಡೆದ 6 ಮಂದಿ ಲಾಟರಿ ಗೆಲುವು ಸಾಧಿಸಿದ್ದು, ನಾಲ್ಕು ಮಂದಿಗೆ ರೂ.1 ಕೋಟಿ ಒಲಿದಿದ್ದರೆ, ಮತ್ತಿಬ್ಬರಿಗೆ 75 ಲಕ್ಷ ರೂ. ಮತ್ತು 80 ಲಕ್ಷ ರೂ. ಸಿಕ್ಕಿದೆ. ಈ ಬಾರಿಯ ಓಣಂ ಬಂಪರ್ ಲಾಟರಿಯಲ್ಲಿ ಮಹಿಳೆಯೊಬ್ಬರು ಇದೇ ಅಂಗಡಿಯಿಂದ ಟಿಕೆಟ್ ಪಡೆದು ಒಂದು ಕೋಟಿ ಗೆದ್ದಿದ್ದಾರೆ.
ಲಾಟರಿ ವಿಜೇತ ಪ್ರತಿಯೊಬ್ಬರಿಗೂ ಮಂಜೇಶ್ವರ ಸರ್ವಿಸ್ ಕೋಪರೇಟಿವ್ ಬ್ಯಾಂಕ್ ಮೂಲಕ ಹಣ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಹಿಂದೆ ಬೇರೆ ರಾಜ್ಯದವರಿಗೆ ಲಾಟರಿ ಖರೀದಿಗೆ ಅವಕಾಶ ಇರಲಿಲ್ಲ. ಉಮ್ಮನ್ ಚಾಂಡಿ ಮುಖ್ಯಮಂತ್ರಿಯಾಗಿದ್ದಾಗ, ಲಾಟರಿ ಏಜೆಂಟರ ಸಭೆಗಳಲ್ಲಿ ಧ್ವನಿ ಎತ್ತಿದ ಪರಿಣಾಮವಾಗಿ ಇತರ ರಾಜ್ಯದ ಜನರಿಗೂ ಲಾಟರಿ ಸಿಗುವಂತೆ ಆಗಿದೆ. ಸರಕಾರದ ಕಾನೂನುಗಳನ್ನು ಪಾಲಿಸಿಕೊಂಡು, ಪಾಲಕ್ಕಾಡ್ ಡಿವಿಷನ್ನಿನ ಲಾಟರಿಗಳನ್ನಷ್ಟೇ ಮಾರಾಟ ಮಾಡುತ್ತಿದ್ದೇನೆ ಅನ್ನುತ್ತಾರೆ ಅಂಗಡಿ ಮಾಲೀಕ ಕನಕದಾಸ್.
ಅವರಲ್ಲಿ ಇರುವುದು ಪಾಲಕ್ಕಾಡ್ ವಿಭಾಗದ ಟಿಕೇಟ್ ಮಾತ್ರ. ಹೆಚ್ಚಾಗಿ ಪಾಲ್ಘಾಟ್ ಟಿಕೇಟುಗಳಿಗೆ ಲಾಟರಿ ಒಲಿಯುತ್ತಿರುವುದರಿಂದ ಕನಕದಾಸ್ ಅವರ ಗ್ರಾಹಕರಿಗೂ ಬಹುಮಾನ ಲಭಿಸಿದೆ. ತನಗೂ ಸಣ್ಣ ಮೊತ್ತದ ಬಹುಮಾನ ಬಂದಿದೆ. ಮುಂದೊಂದು ದಿನ ಅವರ ಟಿಕೇಟ್ ಪಡೆದು ಕೋಟಿ ಗಳಿಸುವ ಕನಸು ಇದೆ ಎಂದು ಸ್ಥಳೀಯ ಅಂಗಡಿ ಮಾಲೀಕ ಕುಂಞ್ಞಾಲಿ ಕುಟ್ಟಿ ಹೇಳಿದ್ದಾರೆ.
ಈ ಬಾರಿ ಓಣಂ ಬಂಪರ್ ಲಾಟರಿಯಲ್ಲಿ 25 ಕೋಟಿ ಮೊದಲ ಬಹುಮಾನ ಮಂಡ್ಯ ಜಿಲ್ಲೆಯ ಪಾಂಡವಪುರ ಮೂಲದ ವ್ಯಕ್ತಿಗೆ ಒಲಿದಿತ್ತು. ಎರಡನೇ ಬಹುಮಾನ 20 ಮಂದಿಗೆ ತಲಾ ಒಂದು ಕೋಟಿ ಇತ್ತು. ತಲಪಾಡಿ ಆಸುಪಾಸಿನ ಬಡ ಮಹಿಳೆಗೆ ಈ ಬಹುಮಾನ ಬಂದಿದ್ದು ವಿಶೇಷ.
The second prize of this year’s Onam bumper lottery of Rs 1 crore has been won by a woman who purchased her ticket from the Stree Shakti lottery agency in Talapady, owned by K R Kanakdas.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
27-07-25 07:13 pm
HK News Desk
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm