ಬ್ರೇಕಿಂಗ್ ನ್ಯೂಸ್
18-10-24 02:12 pm Mangalore Correspondent ಕರಾವಳಿ
ಉಳ್ಳಾಲ, ಅ.18: ತಿಂಗಳ ಹಿಂದಷ್ಟೆ ಖರೀದಿಸಿದ್ದ ಹೊಸ ಟಿವಿಎಸ್ ಎಂಟಾರ್ಕ್ ಸ್ಕೂಟರ್ ಒಂದು ತನ್ನಷ್ಟಕ್ಕೆ ಬೆಂಕಿ ಹತ್ತಿ ಹೊತ್ತಿ ಉರಿದ ಘಟನೆ ಕುಂಪಲ ವಿದ್ಯಾನಗರದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಕುಂಪಲ ವಿದ್ಯಾನಗರ ನಿವಾಸಿ ಐಟಿಐ ಕಲಿಯುತ್ತಿರುವ ರಾಕೇಶ್ ಎಂಬ ವಿದ್ಯಾರ್ಥಿ ತಿಂಗಳ ಹಿಂದೆ ಖರೀದಿಸಿದ್ದ ಟಿವಿಎಸ್ ಕಂಪನಿಯ ಎಂಟಾರ್ಕ್ ಸ್ಕೂಟರ್ ಹೊತ್ತಿ ಉರಿದಿದ್ದು ಸಂಪೂರ್ಣ ಸುಟ್ಟು ಕರಕಲಾಗಿದೆ. ಮನೆಯಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ನಿನ್ನೆ ಮಧ್ಯರಾತ್ರಿ 12.30ರ ವೇಳೆಗೆ ತನ್ನಷ್ಟಕ್ಕೆ ಬೆಂಕಿ ಹತ್ತಿದ್ದು ಧಗಧಗನೆ ಉರಿದು ಸುಟ್ಟು ಕರಕಲಾಗಿದೆ. ಘಟನೆಯಿಂದ ಮನೆಯ ಗೋಡೆ, ಕಿಟಕಿಗಳ ಗಾಜುಗಳು, ಒಣಗಲು ಹಾಕಲಾದ ಬಟ್ಟೆಗಳು ಸುಟ್ಟು ಕರಕಲಾಗಿ ಅಪಾರ ನಷ್ಟ ಉಂಟಾಗಿದೆ. ಮನೆಗೂ ಬೆಂಕಿ ವ್ಯಾಪಿಸಲಿದ್ದು ನಿದ್ದೆಯಿಂದ ಎಚ್ಚೆತ್ತ ಮನೆ ಮಂದಿ ಬೆಂಕಿಯನ್ನ ನಂದಿಸಿದ್ದಾರೆ. ಮನೆಯೊಳಗೆ ರಾಕೇಶ್ ಸೇರಿದಂತೆ ಅವರ ತಂದೆ, ತಾಯಿ, ಅಕ್ಕ ಮಲಗಿದ್ದು ಸ್ಕೂಟರ್ ಗೆ ಬೆಂಕಿ ತಗುಲಿದ ವೇಳೆ ನಿದ್ದೆಯಿಂದ ಎಚ್ಚೆತ್ತು ಬೆಂಕಿಯನ್ನ ನಂದಿಸಿದ ಪರಿಣಾಮ ಸಂಭವನೀಯ ಅನಾಹುತ ತಪ್ಪಿದಂತಾಗಿದೆ.



ಬಡ ಕುಟುಂಬದ ರಾಕೇಶ್ ಅವರು ಓದಿನೊಂದಿಗೆ ಪಾರ್ಟ್ ಟೈಮ್ ಕೆಲಸ ಮಾಡಿ ತಿಂಗಳ ಹಿಂದಷ್ಟೆ ತೊಕ್ಕೊಟ್ಟಿನ "ಸೋನಾ ಟಿವಿಎಸ್ " ಶೋರೂಂನಲ್ಲಿ ಸ್ಕೂಟರ್ ಖರೀದಿಸಿದ್ದರು. ಎರಡು ದಿನಗಳ ಹಿಂದಷ್ಟೆ ಸ್ಕೂಟರಿನ ಮೊದಲ ಇಎಮ್ ಐ ಕಂತನ್ನು ಕಟ್ಟಿದ್ದರು. ಸ್ಕೂಟರ್ ಬ್ಯಾಟರಿ ಸಿಡಿದು ಬೆಂಕಿ ಹತ್ತಿರುವುದಾಗಿ ಶಂಕಿಸಲಾಗಿದೆ. ರಾಕೇಶ್ ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
New Tvs scooty cathes fire at kumapla in mangalore. Rakesh had brought tvs ntorq recently but midnight it has caught sudden fire. Even his house furniture and doors have been damaged.
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
12-09-26 10:53 am
HK News Staffer
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
ದೈವದ ಚಿನ್ನ ಕಳ್ಳರ ಬಂಧನ ; ಕಲ್ಲಾಪು ಮಹಾಲಕ್ಷ್ಮಿ ಕ್...
11-09-26 03:51 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm