ಬ್ರೇಕಿಂಗ್ ನ್ಯೂಸ್
19-10-24 12:47 pm Mangalore Correspondent ಕರಾವಳಿ
ಉಳ್ಳಾಲ, ಅ.18: "ಭೀಮ" ಚಿತ್ರದ ಅದ್ದೂರಿ ಯಶಸ್ಸಿನ ನಂತರ ಸ್ಯಾಂಡಲ್ ವುಡ್ ಖ್ಯಾತ ನಟ ದುನಿಯಾ ವಿಜಯ್ ಅವರು ಕಾಟೇರ ಚಿತ್ರ ಖ್ಯಾತಿಯ ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಹೆಸರಿಡದ ಹೊಸ ಚಿತ್ರವೊಂದರ ಶೂಟಿಂಗ್ ಗಾಗಿ ಮಂಗಳೂರಿಗೆ ಬಂದಿದ್ದು, ಶುಕ್ರವಾರ ಸಂಜೆ ಮಂಗಳೂರು ಹೊರವಲಯದ ಕಲ್ಲಾಪು ಬುರ್ದುಗೋಳಿಯ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿ ಚಿತ್ರದ ಯಶಸ್ಸಿಗಾಗಿ ಶಿರಬಾಗಿ ಪ್ರಾರ್ಥನೆ ಸಲ್ಲಿಸಿದರು.
ಕ್ಷೇತ್ರ ಭೇಟಿಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇಪ್ಪತ್ತೊಂಬತ್ತನೇ ಸಿನೆಮಾದಲ್ಲಿ ನಟಿಸುವ ಸಲುವಾಗಿ ಮಂಗಳೂರಿಗೆ ಬಂದಿದ್ದೇನೆ. ಮಂಗಳೂರಿಗೆ ಈ ಮೊದಲು ಭೇಟಿ ನೀಡಿದ್ದರೂ ಮೊದಲ ಬಾರಿ ಕೊರಗಜ್ಜನ ಕ್ಷೇತ್ರಕ್ಕೆ ಬಂದಿದ್ದೇನೆ. ಕ್ಷೇತ್ರದಲ್ಲಿ ತುಂಬಾನೇ ಧನಾತ್ಮಕ ಸೆಳೆತ ಇದೆ. ಕೊರಗಜ್ಜನಲ್ಲಿ ಹರಕೆಯೊಂದನ್ನ ಹೇಳಿದ್ದೇನೆ. ಅದು ಖಂಡಿತ ಈಡೇರುತ್ತೆ, ಬಳಿಕ ಇಲ್ಲಿಗೆ ಬಂದು ಅದರ ಬಗ್ಗೆ ನಿಮ್ಮಲ್ಲೇ ಹೇಳುತ್ತೇನೆ. ದೈವದ ಆಜ್ಞೆಯಿಂದಲೇ ನನ್ನನ್ನ ಇಲ್ಲಿ ಕರೆಸ್ಕೊಳ್ಳಲಾಗಿದೆ. ಭೀಮ ಚಿತ್ರವನ್ನು ರಾಜ್ಯದ ಜನರಲ್ಲದೆ ಮಂಗಳೂರಿಗರು ಅತ್ಯಂತ ಪ್ರೀತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಿದ್ದರಿಂದಲೇ ಉತ್ತಮ ಕಲೆಕ್ಷನ್ ಬಂದಿದೆ. ಮಂಗಳೂರಿಗರನ್ನ ನಾನು ತುಂಬಾ ಪ್ರೀತಿಸುತ್ತೇನೆ. ಮುಂದೆ ಮಗಳಿಗಾಗಿ "ಸಿಟಿ ಲೈಪ್ಸ್" ಹೆಸರಲ್ಲಿ ನನ್ನ ನಿರ್ದೇಶನದಲ್ಲೇ ಚಿತ್ರ ಮಾಡುತ್ತಿದ್ದೇನೆ ಎಂದರು.





ಬುರ್ದುಗೋಳಿ ಕ್ಷೇತ್ರದ ಪರವಾಗಿ ದುನಿಯಾ ವಿಜಯ್ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು. ಕದ್ರಿ ಈವೆಂಟ್ಸ್ ಸಂಚಾಲಕರಾದ ಜಗದೀಶ್ ಕದ್ರಿ, ದುನಿಯಾ ವಿಜಯ್ ಜತೆಯಲ್ಲಿದ್ದರು. ಬುರ್ದುಗೋಳಿ ಕ್ಷೇತ್ರದ ಆಡಳಿತ ಸಮಿತಿಯ ಪುರುಷೋತ್ತಮ ಮೇಲಾಂಟ, ನವೀನ್ ಕಾಯಂಗಲ, ಪ್ರಶಾಂತ್ ಕಾಯಂಗಲ, ಪುರುಷೋತ್ತಮ ಕಲ್ಲಾಪು , ಸಂಜಯ್,ಯೋಗಿಶ್, ಜಯಶ್ರೀ ಕೊಟ್ಟಾರಿ, ದೀಕ್ಷಾ ಕುತ್ತಾರು,ವನಿತ ಗಿರೀಶ್ ,ಗುರು ಪ್ರಸಾದ್ ಕೊಟ್ಟಾರಿ, ಪ್ರವೀಣ್ ಕೊಲ್ಯ,ಸದಾನಂದ ,ರೇಣುಕ ಮೊದಲಾದವರು ಉಪಸ್ಥಿತರಿದ್ದರು.
Sandalwood actor Duniya Vijay, currently shooting in Mangaluru, visited the Kallapu Burdugoli Guliga Koragajja Udbhava Shile Adisthala on Friday. Speaking to the media, he said, “I’ve heard a lot about Korgajja and wanted to visit this special place while I’m here in Mangaluru. I am producing a movie for my doctor, titled City Life, where I’m also the director.”
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
12-09-26 10:53 am
HK News Staffer
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
ದೈವದ ಚಿನ್ನ ಕಳ್ಳರ ಬಂಧನ ; ಕಲ್ಲಾಪು ಮಹಾಲಕ್ಷ್ಮಿ ಕ್...
11-09-26 03:51 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm