ಬ್ರೇಕಿಂಗ್ ನ್ಯೂಸ್
26-10-24 10:54 pm Mangalore Correspondent ಕರಾವಳಿ
ಉಳ್ಳಾಲ, ಅ.26: ಆವರಣ ಗೋಡೆಯಿಲ್ಲದೆ ಪಾಳು ಬಿದ್ದಿರುವ ಸರಕಾರಿ ಬಾವಿಯೊಂದಕ್ಕೆ ಬೀಡಾಡಿ ಹೋರಿಯೊಂದು ಬಿದ್ದು ನೀರಲ್ಲಿ ಒದ್ದಾಡಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹೋರಿಯನ್ನ ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಪಲ್ಲ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.
ಪಿಲಾರು ಪಲ್ಲದಲ್ಲಿರುವ ಸರಕಾರಿ ತೆರೆದ ಬಾವಿಯು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳು ಬಿದ್ದಿದೆ. ಶನಿವಾರ ಸಂಜೆ ಬಾವಿಯ ಬಳಿಯಲ್ಲಿ ಬೀಡಾಡಿ ಹೋರಿಗಳೆರಡು ಗುದ್ದಾಡಿಕೊಂಡಿದ್ದು ಪರಿಣಾಮ ಒಂದು ಹೋರಿ ಬಾವಿಯೊಳಗೆ ಬಿದ್ದಿದೆ.
ಸ್ಥಳೀಯ ಸಮಾಜ ಸೇವಕರಾದ ಉದಯಗಟ್ಟಿ ಪಿಲಾರು ಅವರು ಬಾವಿಯ ನೀರಲ್ಲಿ ಬಿದ್ದು ಹೋರಿ ಒದ್ದಾಡುತ್ತಿದ್ದುದನ್ನ ಕಂಡು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹೋರಿಯನ್ನ ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ತೆರೆದ ಪಾಳುಬಿದ್ದ ಬಾವಿಯನ್ನ ನಿರ್ಲಕ್ಷಿಸಿ ಜೀವ ಬಲಿಗಾಗಿ ಕಾಯುತ್ತಿರುವ ಪುರಸಭಾ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾವಿಯನ್ನ ಕಡೆಗಣಿಸಿರುವ ಪುರಸಭೆ ಅಧಿಕಾರಿಗಳು
ಪಿಲಾರು ಪಲ್ಲದಲ್ಲಿನ ಪ್ರಾಚೀನ ಬಾವಿಯಲ್ಲಿ ಯಥೇಚ್ಛ ನೀರಿದ್ದರೂ ಸೋಮೇಶ್ವರ ಪುರಸಭಾ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಈ ಬಾವಿ ಕಳೆದ ಅನೇಕ ವರ್ಷಗಳಿಂದ ಪಾಳು ಬಿದ್ದು ಗಿಡ ಗಂಟಿಗಳಿಂದ ಆವೃತವಾಗಿದೆ. ಕಳೆದ ತಿಂಗಳಲ್ಲಿ ನಡೆದಿದ್ದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಥಳೀಯ ಪುರಸಭಾ ಸದಸ್ಯರಾದ ಮನೋಜ್ ಕಟ್ಟೆಮನೆ ಅವರು ಪಲ್ಲದ ಬಾವಿಯ ಅಭಿವೃದ್ಧಿ ಕಾಮಗಾರಿಯನ್ನ ಶೀಘ್ರವೇ ನಡೆಸುವಂತೆ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿಯವರಲ್ಲಿ ಆಗ್ರಹಿಸಿದ್ದರು. ಅಧಿಕಾರಿಗಳು ಇನ್ನೂ ಅಭಿವೃದ್ಧಿ ಕಾರ್ಯವನ್ನು ಮಾಡದೆ, ತೆರೆದ ಬಾವಿಗೊಂದು ರಕ್ಷಣೆಗಾಗಿ ಕನಿಷ್ಟ ಆವರಣ ಗೋಡೆಯನ್ನೂ ನಿರ್ಮಿಸಿಲ್ಲ.
Mangalore Pillar cow falls into well, residents slam officials over negligence. Later cow was rescued by the public with the help of fire service personals.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm