ಬ್ರೇಕಿಂಗ್ ನ್ಯೂಸ್
01-11-24 11:10 pm Mangalore Correspondent ಕರಾವಳಿ
ಮಂಗಳೂರು, ನ.1: ಈ ಸಲ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿಗಳನ್ನು ಕೊಡಲಾಯಿತಾದರೂ, ಕೊನೆಯ ವರೆಗೂ ಪ್ರಶಸ್ತಿ ಪಟ್ಟಿ ಗೊಂದಲದ ಗೂಡಾಗಿತ್ತು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಒಬ್ಬರ ಹೆಸರನ್ನು ಮಾತ್ರ ತೋರಿಸಿ ಜಿಲ್ಲಾಡಳಿತ ಬಿಡುಗಡೆಗೊಳಿಸಿದ್ದ ಪಟ್ಟಿಯಲ್ಲಿ ಗೊಂದಲ ಮೂಡಿಸಲಾಗಿತ್ತು. ಕೊನೆ ಕ್ಷಣದಲ್ಲಿ ಮಾಧ್ಯಮ ಕ್ಷೇತ್ರದ ನಾಲ್ವರಿಗೆ ಪ್ರಶಸ್ತಿಯ ಗೌರವ ನೀಡಿ ಅಧಿಕಾರಿಗಳು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.
ಇದಲ್ಲದೆ, ಶಿಕ್ಷಣ ಮತ್ತು ಸಮಾಜಸೇವೆ ಕ್ಷೇತ್ರದಲ್ಲಿ ಮತ್ತೆ ಮೂವರ ಹೆಸರನ್ನು ನ.1ರ ಬೆಳಗ್ಗೆ ಸೇರ್ಪಡೆ ಮಾಡಲಾಗಿತ್ತು. ಶುಕ್ರವಾರ ಬೆಳಗ್ಗೆ ವಾರ್ತಾ ಇಲಾಖೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸೀತಾರಾಮ ಶೆಟ್ಟಿ, ಕೃಷಿಯಲ್ಲಿ ಸರೋಜಿನಿ ಶೆಟ್ಟಿ, ಸಾಹಿತ್ಯದಲ್ಲಿ ಪ್ರೊ.ವಿ.ಬಿ. ಅರ್ತಿಕಜೆ, ಕಂಬಳಕ್ಕೆ ನವೀನಚಂದ್ರ ಆಳ್ವ, ಸಮಾಜಸೇವೆಗೆ ಗೋಕುಲದಾಸ್ ಸುಳ್ಯ ಅವರನ್ನು ಪ್ರಶಸ್ತಿ ಪಟ್ಟಿಗೆ ಸೇರ್ಪಡೆ ಮಾಡಲಾಗಿತ್ತು.


ಹೀಗಾಗಿ ಪ್ರಶಸ್ತಿ ವಿಜೇತರ ಸಂಖ್ಯೆ 59ಕ್ಕೇರಿದ್ದು, ಉಸ್ತುವಾರಿ ಸಚಿವರು ಒಬ್ಬೊಬ್ಬರಿಗೆ ಸನ್ಮಾನ ಮಾಡುತ್ತ ಬಂದಿದ್ದರಿಂದ ನೆಹರು ಮೈದಾನದಲ್ಲಿ ನಡೆದ ಗೌರವ ಸನ್ಮಾನದ ಕಾರ್ಯಕ್ರಮ ಬೆಳಗ್ಗೆ 9ರಿಂದ 11.30ರ ವರೆಗೂ ದೀರ್ಘ ಕಾಲ ನಡೆಯಿತು. ಒಟ್ಟು 59 ಮಂದಿಗೆ ಗೌರವ ಪ್ರಶಸ್ತಿ ನೀಡಿದರೆ, ಸಂಘ- ಸಂಸ್ಥೆಗಳ ವಿಭಾಗದಲ್ಲಿಯೂ ಪ್ರಶಸ್ತಿ ಆಯ್ಕೆ ಗೊಂದಲಕ್ಕೆ ಕಾರಣವಾಗಿತ್ತು. ಜಿಲ್ಲಾಡಳಿತದ ಪಟ್ಟಿಯಲ್ಲಿ ಮೊದಲಿಗೆ 20 ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿತ್ತು. ರಾತ್ರಿಯೇ ಮತ್ತೆ ನಾಲ್ಕು ಸಂಸ್ಥೆಗಳನ್ನು ಸೇರಿಸಿ 24 ಮಾಡಲಾಗಿತ್ತು.
ಆದರೆ, ಪ್ರಶಸ್ತಿ ನೀಡುವ ಸಮಾರಂಭ ಸ್ಥಳದಲ್ಲಿ ಕೆಲವರು ಕಾಂಗ್ರೆಸ್ ಮುಖಂಡರನ್ನು ಪ್ರಶ್ನೆ ಮಾಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಉಳ್ಳಾಲದ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸಂಸ್ಥೆಯ ಮಂಗಳೂರಿನ ರಾವ್ ಅಂಡ್ ರಾವ್ ಘಟಕದ ಸದಸ್ಯರು ಮೈದಾನದಲ್ಲಿಯೇ ಆಕ್ಷೇಪಿಸಿ ಬಿರುಸಿನ ವಾಗ್ವಾದ ನಡೆಸಿದರು. ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಹೆಸರು ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಕೊಡಲಾಗಿತ್ತು. ಬೆಳಗ್ಗೆ ಸಮಾರಂಭದಲ್ಲಿ ಇವರ ಹೆಸರನ್ನು ನಿರೂಪಕರು ಹೇಳಿದರೂ, ಅವರಿಗೆ ಪ್ರಶಸ್ತಿ ನೀಡದಂತೆ ಯಾರೋ ತಡೆದಿದ್ದಾರೆ ಎನ್ನುವುದು ಅವರ ಆಕ್ಷೇಪವಾಗಿತ್ತು. ಹೀಗಾಗಿ ಸ್ಟೇಜ್ ಹತ್ತಲು ಅವರಿಗೆ ಬಿಟ್ಟಿರಲಿಲ್ಲ.
ಇದರಿಂದಾಗಿ ಈ ಸಂಸ್ಥೆಯ ಕೆಲವು ಸದಸ್ಯರು ನಮ್ಮನ್ನು ಬರಲು ಹೇಳಿ ಅವಮಾನಿಸಿದ್ದಾರೆಂದು ಕಾಂಗ್ರೆಸ್ ಮುಖಂಡ ಪ್ರವೀಣ್ ಚಂದ್ರ ಆಳ್ವ, ಪ್ರತಿಭಾ ಕುಳಾಯಿ ಅವರಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಬಂಟ್ವಾಳ ಎನ್ನುವ ಸಂಸ್ಥೆಯ ಸದಸ್ಯರೂ ಮೈದಾನಕ್ಕೆ ಆಗಮಿಸಿದ್ದರು. ನಮ್ಮನ್ನು ಅಧಿಕಾರಿಗಳು ಬರಲು ಹೇಳಿದ್ದಾರೆ, ಇಲ್ಲಿ ನಮಗೆ ಪ್ರಶಸ್ತಿ ನೀಡಿಲ್ಲ ಎಂದು ಆಕ್ಷೇಪಿಸಿದರು. ಅವರ ಸಂಸ್ಥೆಯ ಹೆಸರು ಪ್ರಶಸ್ತಿ ಪಟ್ಟಿಯಲ್ಲಿ ಇರಲಿಲ್ಲ. ಜಿಲ್ಲಾ ಪ್ರಶಸ್ತಿಗಳನ್ನು ಕಳೆದ 25 ವರ್ಷಗಳಲ್ಲಿ ನೀಡುತ್ತ ಬಂದಿದ್ದರೂ, ಅದಕ್ಕೊಂದು ಮಾನದಂಡ, ಆಯ್ಕೆ ಸಮಿತಿ ಇಲ್ಲದಿರುವುದು ಇಂಥ ಎಡವಟ್ಟಿಗೆ ಕಾರಣ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಈ ಬಾರಿಯ ಪ್ರಶಸ್ತಿ ಪಡೆದವರಲ್ಲಿ ಇದ್ದಾರೆ.
ಇತ್ತೀಚೆಗೆ ನೀರುಮಾರ್ಗದಲ್ಲಿ ದರೋಡೆ ನಡೆದ ಮನೆಯ ಯಜಮಾನ, ಕಲ್ಲು ಕೋರೆಯ ಮಾಲಕ ಪದ್ಮನಾಭ ಕೋಟ್ಯಾನ್ ಅವರನ್ನು ಉತ್ತಮ ಕೃಷಿಕ ಎನ್ನುವ ಹೆಸರಲ್ಲಿ ಪ್ರಶಸ್ತಿ ನೀಡಲಾಗಿದೆ. ಮುರಕಲ್ಲಿನಲ್ಲಿ ತೋಟ ಮಾಡಿರುವುದು ಇವರ ಹೆಗ್ಗಳಿಕೆ ಎಂದು ತೋರಿಸಲಾಗಿದೆ. ಇದನ್ನೇ ಮಾನದಂಡ ಮಾಡಿದರೆ, ಇದಕ್ಕಿಂತ ಉತ್ತಮ ಕೃಷಿ ಮಾಡಿದ ನೂರಾರು ಜನ ಸಿಕ್ಕರೂ ಸಿಗಬಹುದು.
The Karnataka Rajyotsava Award ceremony 2024 held in Mangalore faced significant criticism this year, as several prominent nominees were notably absent from the recipients' list. Many attendees expressed their disappointment during the event, lamenting the exclusion of deserving individuals who had been nominated for the prestigious award.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
07-12-25 12:31 pm
HK News Desk
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
06-12-25 06:12 pm
Mangalore Correspondent
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm