ಬ್ರೇಕಿಂಗ್ ನ್ಯೂಸ್
06-11-24 06:21 pm Mangalore Correspondent ಕರಾವಳಿ
ಮಂಗಳೂರು, ನ.6: ನಗರದಲ್ಲಿ ಓಡಾಟ ನಡೆಸುವ ಸಿಟಿ ಬಸ್‌ಗಳನ್ನು ಹೊರತುಪಡಿಸಿ ಎಕ್ಸ್‌ಪ್ರೆಸ್, ಕಾಂಟ್ರಾಕ್ಟ್ ಕ್ಯಾರೇಜ್, ಸರ್ವಿಸ್ ಬಸ್‌ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಗಡುವು ವಿಧಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈಗಾಗಲೇ ಸ್ವಯಂಚಾಲಿತ ಬಾಗಿಲನ್ನು ಹೊಂದಿರುವ ಬಸ್‌ಗಳು ಕಡ್ಡಾಯವಾಗಿ ಇಂದಿನಿಂದಲೇ ಈ ಆದೇಶವನ್ನು ಪಾಲಿಸ ಬೇಕು. ಬಾಗಿಲನ್ನು ತೆಗೆದು ಹಾಕಿರುವ ಮತ್ತು ಬಾಗಿಲು ಇಲ್ಲದ ಬಸ್‌ಗಳಿಗೆ ತಕ್ಷಣ ಬಾಗಿಲು ಅಳವಡಿಸಬೇಕು. ಡಿ.10ರೊಳಗೆ ಕಡ್ಡಾಯವಾಗಿ ಈ ಆದೇಶವನ್ನು ಬಸ್ ಮಾಲೀಕರು ಅನುಷ್ಠಾನಗೊಳಿಸಬೇಕು. ತಪ್ಪಿದಲ್ಲಿ ಸಾರಿಗೆ ನಿಯಮದ ಉಲ್ಲಂಘನೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಚ್ಚರಿಸಿದರು.
ಸಂಚಾರದ ವೇಳೆ ಎಲ್ಲ ಬಸ್‌ಗಳಲ್ಲೂ ಪ್ರಯಾಣಿಕರ ಸುರಕ್ಷತೆ ದೃಷ್ಠಿಯಿಂದ ಬಾಗಿಲು ಹಾಕಿಕೊಳ್ಳುವುದು ಕಡ್ಡಾಯ. ಇದರ ಬಗ್ಗೆ ಹಲವು ಬಾರಿ ಸೂಚನೆ ನೀಡಿದರೂ ಪಾಲನೆಯಾಗುತ್ತಿಲ್ಲ. ಹೀಗಾಗಿ ತಕ್ಷಣದಿಂದಲೇ ಬಾಗಿಲು ಅಳವಡಿಸಲು ಎಲ್ಲ ಖಾಸಗಿ ಬಸ್‌ಗಳು ಕ್ರಮ ಕೈಗೊಳ್ಳಬೇಕು. ನಗರ ಸಾರಿಗೆ ಬಸ್‌ಗಳಿಗೆ ಬಾಗಿಲು ಅಳವಡಿಕೆ ಕುರಿತಂತೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಮಂಗಳೂರು- ಕಾರ್ಕಳ, ಬಜಪೆ, ತಲಪಾಡಿ ಸೇರಿದಂತೆ ಎಂಟು ಹೊಸ ರೂಟ್‌ಗಳಲ್ಲಿ ಪರವಾನಿಗೆ ನೀಡುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಇದೇ ವೇಳೆ ಮನವಿ ಮಾಡಿದರು. ಇದಕ್ಕೆ ಖಾಸಗಿ ಬಸ್ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಖಾಸಗಿ ಬಸ್ ಮಾಲೀಕರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಬಳಿ 15 ದಿನಗಳ ಕಾಲಾವಕಾಶ ನೀಡುವಂತೆ ವಿನಂತಿಸಿದರು.
ಬಸ್ ಅಳವಡಿಸಲು ಸಾರ್ವಜನಿಕರ ಕಡೆಯಿಂದ ಬೇಡಿಕೆ ಇದೆ. ಸರ್ಕಾರದ ಶಕ್ತಿ ಯೋಜನೆಯನ್ನು ಈ ರೂಟ್‌ಗಳಲ್ಲೂ ಅನುಷ್ಠಾನಗೊಳಿಸಲು ಅವಕಾಶ ನೀಡಿ. ಮಾಧ್ಯಮಗಳಲ್ಲೂ ಸಾರ್ವಜನಿಕರು ಬಸ್‌ಗಾಗಿ ಮಾನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ವಿವಿಧ ಮಾರ್ಗಗಳಲ್ಲಿ ಈ ಹಿಂದೆ 56 ಸಿಂಗಲ್ ಟ್ರಿಪ್‌ಗಳಿಗೆ ಪರವಾನಿಗೆ ಕೇಳಲಾಗಿತ್ತು.
ನ್ಯಾಯಾಲಯದ ತಡೆಯಾಜ್ಞೆ ಕಾರಣ ಪರವಾನಿಗೆ ಸಿಕ್ಕಿಲ್ಲ. ಇದೀಗ 8 ಟ್ರಿಪ್‌ಗಳ ಬೇಡಿಕೆಯಲ್ಲಿ ಕೇವಲ 3 ಟ್ರಿಪ್‌ಗೆ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ಏರಿಯಾ ಸ್ಕೀಂ ನಿಯಮದ ಪ್ರಕಾರ ಹಾಗೂ ಚಾಪ್ಟರ್ 5 ರಂತೆ ಹೊಸ ರೂಟ್ ಪರವಾನಿಗೆ ನೀಡಲು ಸಾರಿಗೆ ಪ್ರಾಧಿಕಾರಕ್ಕೆ ಅಧಿಕಾರ ಇದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ತಿಳಿಸಿದರು.
All express buses contract carriages except city buses should have compulsory doors for safety of passengers by December 10th says dc Mangalore.
06-11-24 10:51 pm
HK News Desk
BMTC bus conductor heart attack, video viral:...
06-11-24 09:31 pm
Pramod Muthalik, Zameer Ahmed,Waqf Row: ನಾಲ್ಕ...
06-11-24 06:31 pm
Cm Siddaramaiah, Mysuru lokayukta: ಲೋಕಾಯುಕ್ತ...
06-11-24 03:11 pm
Waqf row, Zameer Ahmed Khan, KPCC: ಭುಗಿಲೆದ್ದ...
06-11-24 02:34 pm
06-11-24 03:35 pm
HK News Desk
ತಮಿಳುನಾಡಿನಲ್ಲಿ ಇಡೀ ಗ್ರಾಮವನ್ನೇ ತನ್ನದೆಂದ ವಕ್ಫ್...
05-11-24 03:30 pm
Edneer Math Swamiji, Attack, Kasaragod: ಎಡನೀರ...
05-11-24 11:41 am
ಹೊಟ್ಟೆ ನೋವೆಂದು ಬಂದಿದ್ದ 15 ವರ್ಷದ ಬಾಲಕನ ಹೊಟ್ಟೆಯ...
04-11-24 03:28 pm
ನೀಲೇಶ್ವರ ಕಳಿಯಾಟ ಉತ್ಸವದಲ್ಲಿ ಸುಡುಮದ್ದು ಸ್ಫೋಟ ;...
04-11-24 12:55 pm
06-11-24 08:23 pm
Mangalore Correspondent
Mangalore DC, bus door: ಮಂಗಳೂರು ; ಸಿಟಿ ಬಸ್ ಹೊ...
06-11-24 06:21 pm
Mangalore thumbe accident; ತುಂಬೆ ಹೆದ್ದಾರಿಯಲ್ಲ...
05-11-24 11:12 pm
Nanthoor Surathkal Highway, Mangalore Road; ಹ...
05-11-24 10:40 pm
Kambala Festival, Gold Finch City, Brijesh Ch...
05-11-24 10:35 pm
06-11-24 09:11 pm
HK News Desk
Bangalore crime, Jayadeva Hospital: ಪ್ರತಿಷ್ಠಿ...
06-11-24 11:50 am
Lakshmi Hebbalkar, Somu, Belagavi Suicide; ಸಚ...
05-11-24 10:22 pm
Hassan Murder, police constable: ಹಾಸನ ; ಹಸೆಮಣ...
05-11-24 05:05 pm
Bantwal temple robbery, Mangalore crime; ಬಂಟ್...
05-11-24 12:50 pm