ಬ್ರೇಕಿಂಗ್ ನ್ಯೂಸ್
07-11-24 10:30 pm Mangalore Correspondent ಕರಾವಳಿ
ಮಂಗಳೂರು, ನ.7: ಅಡ್ಯಾರ್- ಪಡೀಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಗುಂಡಿ ಬಿದ್ದು ಸಂಚಾರಕ್ಕೆ ತೀವ್ರ ತೊಡಕಾಗಿತ್ತು. ಪಡೀಲಿನಲ್ಲಿ ರಸ್ತೆ ಹೊಂಡ ಬಿದ್ದಿರುವ ಬಗ್ಗೆ ಹೆಡ್ ಲೈನ್ ಕರ್ನಾಟಕ ಸುದ್ದಿ ಬಿತ್ತರಿಸಿತ್ತು. ಅದರ ಬೆನ್ನಲ್ಲೇ ಹೊಂಡ ಮುಚ್ಚುವ ಕಾಮಗಾರಿ ನಡೆದಿತ್ತು. ವಾಹನ ಸವಾರರು ಹೆದ್ದಾರಿಗೊಂದು ಒಳ್ಳೆಯ ಟಾರು ಹಾಕಲಿ, ಇಲ್ಲಿ ಟಾರು ಕಾಣದೆ ಎಷ್ಟೋ ವರ್ಷ ಆಯ್ತು ಎಂದು ನಿರೀಕ್ಷೆ ಮಾಡಿದ್ದರು. ಇದೀಗ ಅಡ್ಯಾರು- ಪಡೀಲ್ ಹೆದ್ದಾರಿಯಲ್ಲಿ ಕಡೆಗೂ ಟಾರು ಹಾಕಿದ್ದು, ಫಳಫಳನೆ ಹೊಳೆಯುವ ಹೊಸ ರಸ್ತೆ ಸಂಚಾರಕ್ಕೆ ತೆರೆದುಕೊಂಡಿದೆ.
ಸುರತ್ಕಲ್ - ಬಿಸಿ ರೋಡ್ ಮಧ್ಯೆ 15 ವರ್ಷಗಳ ಹಿಂದೆ ಹೆದ್ದಾರಿ ನಿರ್ಮಾಣವಾಗಿತ್ತು. ಇರ್ಕಾನ್ ಸಂಸ್ಥೆಯವರು ಈ ರಸ್ತೆಯನ್ನು ನಿರ್ಮಿಸಿ ನಿರ್ವಹಣೆಗೆ ಎನ್ಎಂಪಿಟಿ ಬಂದರಿಗೆ ನೀಡಿದ್ದರು. ಕರಾವಳಿಯಲ್ಲಿ ಮೊದಲ ಬಾರಿಗೆ ಈ ರಸ್ತೆ ಚತುಷ್ಪಥಕ್ಕೆ ತೆರೆದುಕೊಂಡಿದ್ದರೂ, ಕಾಮಗಾರಿ ಸಮರ್ಪಕವಾಗದೆ ಹೆದ್ದಾರಿಯಲ್ಲಿ ಅಪಘಾತಗಳೇ ಹೆಚ್ಚಿದ್ದವು. ಮಂಗಳೂರು- ಬಿಸಿ ರೋಡ್ ಮಧ್ಯೆ ತಿರುವಿನ ರಸ್ತೆಗಳನ್ನು ನೇರವಾಗಿಸದೆ ಇದ್ದಂತೆಯೇ ತಿರುವು ಮುರುವು ರಸ್ತೆಗಳನ್ನು ನಿರ್ಮಿಸಲಾಗಿತ್ತು.
15 ವರ್ಷಗಳಲ್ಲಿ ಕೆಲವು ಬಾರಿ ಗುಂಡಿ ಬಿದ್ದ ಜಾಗಕ್ಕೆ ತೇಪೆ ಹಚ್ಚಿದ್ದು ಬಿಟ್ಟರೆ ಪೂರ್ತಿಯಾಗಿ ಡಾಮರು ಹಾಕಿದ್ದು ಇಲ್ಲ. ಈಗ ಪಡೀಲಿನಲ್ಲಿ ರಸ್ತೆಗೆ ಪೂರ್ತಿಯಾಗಿ ಡಾಮರು ಹಾಕಲಾಗುತ್ತಿದ್ದು ಕಪ್ಪಗಿನ ರಸ್ತೆ ಹೊಳೆಯುತ್ತಿದೆ. ಆದರೆ, ಆಧುನಿಕ ಮಾದರಿಯ ರಬ್ಬರ್ ಡಾಮರು ಹಾಕಿದರಷ್ಟೇ ಈಗ ಬಾಳಿಕೆ. ಅದಿಲ್ಲದಿದ್ದರೆ, ಮುಂದಿನ ವರ್ಷದ ಮಳೆಗಾಲಕ್ಕೆ ಡಾಮರು ಎದ್ದು ಹೋಗುತ್ತದೆ. ಕೇರಳದಲ್ಲಿ ಹೊಸತಾಗಿ ರಬ್ಬರ್ ಡಾಮರ್ ಹಾಕಿದರೂ, 5 ವರ್ಷ ಕಾಲ ಗ್ಯಾರಂಟಿ ಕೊಡಬೇಕು. ಅದರಲ್ಲಿ ಸಮಸ್ಯೆಯಾದರೆ, ಡಾಮರು ಹಾಕಿದವರೇ ಹೊಣೆ ಹೊರಬೇಕು. ಇಂಥ ಕಾನೂನು ಎಲ್ಲ ಕಡೆ ಇದ್ದರೂ ಅದನ್ನು ಮಂಗಳೂರಿನಲ್ಲಿ ಲಾಗಾಯ್ತಿ ಮಾಡ್ತಾ ಇಲ್ಲ. ಇದರಿಂದಾಗಿ ಹೆದ್ದಾರಿ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ರಸ್ತೆ ಮಾಡೋದು, ತಿರುವು ಮುರುವಿನಲ್ಲಿ ಅಪಘಾತ ಆದರೂ ನಿರ್ಲಕ್ಷ್ಯ ಮಾಡೋದು, ಉತ್ತಮ ಗುಣಮಟ್ಟದ ಡಾಮರು ಹಾಕದಿರುವುದನ್ನು ಮಾಡುತ್ತ ಇದ್ದಾರೆ.
Mangalore Padil road filled with huge pot holes finally gets new tar after report by headline karnataka. Report was made expressing the pain of two wheelers who had to cross padil road.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm