ಬ್ರೇಕಿಂಗ್ ನ್ಯೂಸ್
08-11-24 08:19 pm Mangalore Correspondent ಕರಾವಳಿ
ಉಳ್ಳಾಲ, ನ.8: ಉಳ್ಳಾಲ ನಗರಸಭೆ ಆವರಣದಲ್ಲಿ ಗ್ರಂಥಾಲಯಕ್ಕಾಗಿ ನಗರೋತ್ಥಾನ ಯೋಜನೆಯಡಿ ನೂತನ ಕಟ್ಟಡ ನಿರ್ಮಾಣವಾಗಲಿದ್ದು ಆ ಪ್ರಯುಕ್ತ ಹಳೆಯ ಶಿಥಿಲ ಕಟ್ಟಡವನ್ನ ನೆಲಸಮ ನಡೆಸಲಾಗುತ್ತಿದೆ. ಕಟ್ಟಡ ನೆಲಸಮ ಕಾಮಗಾರಿಯ ನೆಪದಲ್ಲಿ ನಗರಸಭೆ ಆವರಣಕ್ಕೆ ದ್ವಿಚಕ್ರ ವಾಹನ ಪಾರ್ಕಿಂಗ್ ಗಾಗಿ ಎರಡು ವರ್ಷದ ಹಿಂದಷ್ಟೆ ಅಳವಡಿಸಲಾಗಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಿಲಿಕಾನ್ ಸಿಲಿಂಗ್ ಶೀಟ್ ಗಳನ್ನ ಯಾವುದೇ ಟೆಂಡರ್ ಹರಾಜು ಪ್ರಕ್ರಿಯೆ ನಡೆಸದೆ ಕಳಚಿ ಕೊಂಡೊಯ್ಯಲಾಗಿದೆ.
ನಗರೋತ್ಥಾನ ಯೋಜನೆಯಡಿ ನಗರಸಭೆ ಆವರಣದಲ್ಲಿ ಗ್ರಂಥಾಲಯಕ್ಕಾಗಿ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಆ ಹಿನ್ನೆಲೆಯಲ್ಲಿ ನಗರಸಭೆ ಆವರಣದೊಳಗಿನ ಹಳೆಯ ಗ್ರಂಥಾಲಯದ ಶಿಥಿಲ ಕಟ್ಟಡವನ್ನ ನೆಲಸಮ ನಡೆಸಲಾಗುತ್ತಿದೆ. ಆದರೆ ಗ್ರಂಥಾಲಯಕ್ಕೆ ಸಂಬಂಧವೇ ಇಲ್ಲದ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಉದ್ದೇಶಕ್ಕೆ ಹಾಕಲಾಗಿದ್ದ ಸೀಲಿಂಗ್ ಶೀಟ್ ಗಳ ಟೆಂಟನ್ನೇ ಕಳಚಿ ಕೊಂಡೊಯ್ಯಲಾಗಿದೆ. ಎರಡು ವರ್ಷಗಳ ಹಿಂದಷ್ಟೆ ನಗರಸಭೆ ಅನುದಾನದಲ್ಲಿ ಸುಮಾರು ಆರು ಲಕ್ಷ ವ್ಯಯಿಸಿ ಸಿಲಿಕಾನ್ ಸೀಲಿಂಗ್ ಶೀಟ್ ನ ಟೆಂಟ್ ನಿರ್ಮಿಸಲಾಗಿತ್ತು. ನಗರಸಭೆ ಆಸ್ತಿಯನ್ನ ತೆರವು ಮಾಡಬೇಕಾದರೆ ಕಾನೂನಿನ ಪ್ರಕಾರ ಟೆಂಡರ್ ಕರೆಯಬೇಕು. ತೆರವುಗೊಳಿಸಿದ ಸೊತ್ತುಗಳನ್ನ ಮಾರಬೇಕಾದರೆ ಹರಾಜು ಪ್ರಕ್ರಿಯೆ ನಡೆಸಬೇಕು. ಆದರೆ ಇದ್ಯಾವುದನ್ನೂ ಮಾಡದೆ ಮೂರನೇ ವ್ಯಕ್ತಿಯೋರ್ವ ಹಳೆ ಕಟ್ಟಡ ನೆಲಸಮ ನೆಪದಲ್ಲಿ ಶೀಟ್ ಗಳನ್ನ ತೆಗೆದು ಮಾರಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಈ ಬಗ್ಗೆ ನಗರಸಭೆಯ ಕಿರಿಯ ಅಭಿಯಂತರ ತುಳಸಿ ಅವರಲ್ಲಿ ವಿಚಾರಿಸಿದಾಗ ನಗರೋತ್ಥಾನ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಕ್ಕಾಗಿ ಸಿಲಿಂಗ್ ಶೀಟ್ ಗಳನ್ನ ತೆರವುಗೊಳಿಸಲಾಗಿದೆ ಎಂದು ಬೇಜವಾಬ್ದಾರಿಯಾಗಿ ಪ್ರತಿಕ್ರಿಯಿಸಿದ್ದಾರೆ. ನಗರೋತ್ಥಾನ ಯೋಜನೆಯ ಗುತ್ತಿಗೆದಾರರೇ ಹಳೆಯ ಕಟ್ಟಡ ನೆಲಸಮಗೊಳಿಸುವ ಕಾಮಗಾರಿ ನಡೆಸುತ್ತಿದ್ದು ಅವರೇ ಸೀಲಿಂಗ್ ಶೀಟ್ ಗಳನ್ನ ತೆಗೆದು ಕೊಂಡೊಯ್ದಿದ್ದಾರೆ. ಆ ರೀತಿ ಶೀಟ್ ಗಳನ್ನ ಕೊಂಡೊಯ್ಯಲು ಅವಕಾಶ ಇಲ್ಲ. ಗುತ್ತಿಗೆದಾರರಲ್ಲಿ ಶೀಟ್ ಗಳನ್ನ ವಾಪಸ್ ತರಲು ಹೇಳಿರೋದಾಗಿ ನಗರಸಭೆಯ ಪ್ರಭಾರ ಪೌರಾಯುಕ್ತ ಮತ್ತಡಿ ಹೇಳಿದ್ದಾರೆ. ಗುತ್ತಿಗೆದಾರರು ಯಾರೆಂದು ಕೇಳಿದಾಗ ಅದು ನಮಗೆ ಗೊತ್ತಿಲ್ಲವೆಂದು ಹೇಳಿದ್ದಾರೆ.
ದ್ವಿಚಕ್ರ ವಾಹನಗಳ ನಿಲುಗಡೆಗಾಗಿ ಹಾಕಲಾಗಿದ್ದ ಸಿಲಿಕಾನ್ ಶೀಟ್ ಗಳ ಟೆಂಟ್ ಗೂ ನೂತನ ಗ್ರಂಥಾಲಯ ಕಟ್ಟಡಕ್ಕೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಶೀಟ್ ಗಳನ್ನ ತೆಗೆಯೋದಾದರೂ ನಗರಸಭೆ ಟೆಂಡರ್ ಕರೆಯಬೇಕು. ನಗರಸಭೆ ಆಡಳಿತದ ಪ್ರಭಾವಿ ಮಹಿಳಾ ರಾಜಕಾರಣಿಯ ಆಪ್ತನೋರ್ವ ಸಿಲಿಕಾನ್ ಶೀಟ್ ಗಳನ್ನ ಎಗರಿಸಿ ಕೊಂಡೊಯ್ದಿದ್ದಾನೆ. ಯಾರು ಶೀಟ್ ಗಳನ್ನ ಕೊಂಡೊಯ್ದಿದ್ದಾರೆಂದು ನಗರಸಭೆ ಕಚೇರಿಯ ಸಿಸಿಟಿವಿ ಫೂಟೇಜ್ ದಾಖಲೆಯಲ್ಲಿ ಕಂಡುಹಿಡಿಯಲು ಅಧಿಕಾರಿಗಳಿಗೆ ಕಷ್ಟದ ಕೆಲಸವೇ ಎಂದು ನಗರಸಭಾ ಸದಸ್ಯ ರವಿಚಂದ್ರ ಗಟ್ಟಿ ಪ್ರಶ್ನಿಸಿದ್ದಾರೆ.
Mangalore Old building constructed at Ullal to build library. Lord of items like sheet have been stolen and still ullal Panchayat has been silent.
13-01-25 10:30 pm
HK News Desk
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
Minister Parameshwara, Yatnal: 'ನೀವು ಸಾಬರಿಗೆ...
11-01-25 10:53 pm
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
13-01-25 10:49 pm
HK News Desk
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
13-01-25 09:08 pm
Mangalore Correspondent
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
Historian Vikram Sampath, Lit Fest Mangalore...
12-01-25 11:03 pm
PLD bank election, MLA Ashok Rai, Puttur: ಪಿಎ...
12-01-25 10:06 pm
13-01-25 03:30 pm
Mangaluru Correspondent
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am