ಬ್ರೇಕಿಂಗ್ ನ್ಯೂಸ್
10-11-24 04:44 pm Mangalore Correspondent ಕರಾವಳಿ
ಮಂಗಳೂರು, ನ.10: ನೋಡ ನೋಡುತ್ತಲೇ ನಗರದ ನಾರಾಯಣ ಗುರು ವೃತ್ತದ (ಲೇಡಿಹಿಲ್ ವೃತ್ತ) ಬಳಿ ಮಾರುತಿ 800 ಕಾರು ಬೆಂಕಿ ಹತ್ತಿಕೊಂಡು ಧಗಧಗನೆ ಉರಿದು ಬಿಟ್ಟಿದೆ. ಮಧ್ಯಾಹ್ನ 3.30ರ ಸುಮಾರಿಗೆ ಲೇಡಿಹಿಲ್ ಪೆಟ್ರೋಲ್ ಪಂಪ್ ಗೆ ಕಾರು ಬಂದಿದ್ದು, ಪಂಪ್ ಬಳಿ ನಿಲ್ಲುತ್ತಲೇ ಬೆಂಕಿ ಹತ್ತಿಕೊಂಡಿದೆ.
ಬಜ್ಪೆ ಕಡೆಯಿಂದ ಬಂದಿರುವ ಕಾರು ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಖರ ಬಿಸಿಲಿಗೆ ಶಾರ್ಟ್ ಸರ್ಕಿಟ್ ಆಗಿಯೋ ಏನೋ ಬೆಂಕಿ ಹೊತ್ತಿದ್ದು, ಬೆಂಕಿಯ ಜ್ವಾಲೆ ಪೆಟ್ರೋಲ್ ಪಂಪನ್ನು ಆವರಿಸಿದೆ. ಕೂಡಲೇ ಪಂಪ್ ಸಿಬಂದಿ, ಬಕೆಟ್ ಗಳಲ್ಲಿ ನೀರು ಸುರಿದು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಪಂಪ್ ಬಳಿಯಲ್ಲೇ ಘಟನೆ ನಡೆದಿದ್ದರಿಂದ ಆತಂಕ ವ್ಯಕ್ತವಾಗಿತ್ತು. ಪಂಪ್ ಅಡಿಭಾಗದಲ್ಲಿರುವ ಪೆಟ್ರೋಲ್ ಟ್ಯಾಂಕಿಗೆ ಬೆಂಕಿ ಹತ್ತಿಕೊಳ್ಳುತ್ತಿದ್ದರೆ ದುರಂತವೇ ಆಗಿರುತ್ತಿತ್ತು.
ಲೇಡಿಹಿಲ್ ಪೆಟ್ರೋಲ್ ಪಂಪ್ ನಲ್ಲಿ ವೈಟ್ ಪೆಟ್ರೋಲ್ ಕೂಡ ಇದೆ. ಮಂಗಳೂರು ನಗರದಲ್ಲಿ ಈ ಪಂಪ್ ನಲ್ಲಿ ಮಾತ್ರ ಹೈಎಂಡ್ ಕಾರು, ಬೈಕ್ ಗಳಿಗೆ ಬಳಸುವಂಥ ಪೆಟ್ರೋಲ್ ಸಿಗುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಅತಿ ಹೆಚ್ಚು ಜ್ವಲಿಸುವಂತಹ ಪೆಟ್ರೋಲ್ ಶೇಖರಣೆ ಇದ್ದುದರಿಂದ ಪಂಪ್ ಸಿಬಂದಿಗೆ ಭಯ ಆವರಿಸಿತ್ತು. ಸಕಾಲದಲ್ಲಿ ನೀರು ಹಾಕಿ, ಆನಂತರ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಲೇ ಅದರಲ್ಲಿದ್ದವರು ಹೊರಗಿಳಿದಿದ್ದು ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಬೆಂಕಿ ಹತ್ತಿಕೊಂಡಿತ್ತು.
A Maruti 800 #car caught #fire at the #Ladyhill #petrolpump in Mangalore. Fortunately, no casualties have been reported. The petrol pump staff immediately used a fire extinguisher. A video of the incident has gone viral on social media. #carfiremangalore #mangalore #BreakingNews pic.twitter.com/dBKMrnuVJQ
— Headline Karnataka (@hknewsonline) November 10, 2024
Maruti 800 car catches fire at ladyhill petrol pump in Mangalore. No casualties have been reported. Petrol pump staffs immediately used the fire extinguisher. Video of this has gone viral on social media.
21-04-25 07:10 pm
Bangalore Correspondent
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
21-04-25 07:08 pm
Mangalore Correspondent
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm