ಬ್ರೇಕಿಂಗ್ ನ್ಯೂಸ್
11-11-24 04:46 pm Mangalore Correspondent ಕರಾವಳಿ
ಮಂಗಳೂರು, ನ.11: ಖಾಸಗಿ ಬಸ್ಸೊಂದು ಕಾಲೇಜು ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಆಟೋ ರಿಕ್ಷಾ ಮತ್ತು ಸ್ಕೂಟರಿಗೆ ಡಿಕ್ಕಿಯಾಗಿದ್ದು, ಮಹಿಳೆ ಮತ್ತು ವಿದ್ಯಾರ್ಥಿನಿಯೊಬ್ಬಳು ಗಂಭೀರ ಗಾಯಗೊಂಡ ಘಟನೆ ಮೂಡುಬಿದ್ರೆ ಬಳಿಯ ತೋಡಾರಿನಲ್ಲಿ ನಡೆದಿದೆ. ಆಕ್ರೋಶಗೊಂಡ ವಿದ್ಯಾರ್ಥಿಗಳು ಬಸ್ಸಿಗೆ ಕಲ್ಲೆಸೆದು ಗಾಜು ಪುಡಿಗಟ್ಟಿದ್ದಾರೆ.
ತೋಡಾರಿನ ಮೈಟ್ ಕಾಲೇಜಿನ ಮುಂಭಾಗದ ಫ್ಲೈ ಓವರ್ ಬಳಿಯಲ್ಲೇ ಘಟನೆ ನಡೆದಿದೆ. ಬೆಳಗ್ಗೆ ಕಾಲೇಜಿಗೆ ಬರುತ್ತಿದ್ದ ಮೈಟ್ ಕಾಲೇಜಿನ ಬಸ್ಸನ್ನು ಹಿಂದಿಕ್ಕುವ ಯತ್ನದಲ್ಲಿದ್ದ ಮಂಗಳೂರಿನಿಂದ ಮೂಡುಬಿದ್ರೆಗೆ ತೆರಳುತ್ತಿದ್ದ ಖಾಸಗಿ ಬಸ್ ಎದುರಿನಿಂದ ಬರುತ್ತಿದ್ದ ಸ್ಕೂಟರ್ ಮತ್ತು ಆಟೋಗೆ ಡಿಕ್ಕಿಯಾಗಿ ನಿಂತಿದೆ. ಸ್ಕೂಟರ್ ಸವಾರಿ ಮಾಡುತ್ತಿದ್ದ ವಿನುತಾ ಮತ್ತು ಆಕೆಯ ಜೊತೆಗಿದ್ದ ತನ್ನ ಗಂಡನ ಅಕ್ಕನ ಮಗಳು, ಕಾಲೇಜು ವಿದ್ಯಾರ್ಥಿನಿ ಸಾನ್ವಿ ಗಂಭೀರ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಖಾಸಗಿ ಬಸ್ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಘಟನೆ ನಡೆದಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಬಸ್ಸಿಗೆ ಕಲ್ಲು ತೂರಿದ್ದು, ಗಾಜು ಪುಡಿ ಮಾಡಿದ್ದಾರೆ. ವಿನುತಾ ನೀಡಿರುವ ದೂರಿನಂತೆ ಮೂಡುಬಿದ್ರೆ ಠಾಣೆಯಲ್ಲಿ ಬಸ್ಸಿನ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯಿಂದಾಗಿ ತೋಡಾರಿನಲ್ಲಿ ಕೆಲಹೊತ್ತು ಉದ್ವಿಗ್ನ ವಾತಾವರಣ ಉಂಟಾಗಿತ್ತು.
Accident, Students pelt stones on private bus after bus meets with accident with college bus at moodbidri in Mangalore. Mahesh bus which was in the urge of overtaking rammed auto and two wheeler.
25-07-25 04:07 pm
Bangalore Correspondent
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
ಕಾಲ್ತುಳಿತ ಪ್ರಕರಣ ; ಆರ್ ಸಿಬಿ, ಡಿಎನ್ಎ, ಕೆಎಸ್ ಸಿ...
24-07-25 08:01 pm
25-07-25 04:40 pm
HK News Desk
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
ಕುಡುಬಿ ಸಮುದಾಯ ಎಸ್ಸಿ ಪಟ್ಟಿಗೆ ಸೇರಿಸಲು ರಾಜ್ಯದಿಂದ...
22-07-25 07:21 pm
25-07-25 08:25 pm
Mangalore Correspondent
DIG Anucheth Mangalore, SIT Dharmasthala: ಎಸ್...
25-07-25 06:05 pm
Udupi: ಸೊಸೈಟಿಗೆ ಅಡಿಟ್ ಮಾಡಿಕೊಡಲು ಲಂಚ ಬೇಡಿಕೆ ;...
25-07-25 02:25 pm
Terrorist Yasin Bhatkal, Mangalore: 2008ರ ಉಳ್...
24-07-25 10:26 pm
Dharmasthala Case, Investigation, Advocate,...
24-07-25 05:27 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am