ಬ್ರೇಕಿಂಗ್ ನ್ಯೂಸ್
17-11-24 04:58 pm Mangalore Correspondent ಕರಾವಳಿ
ಮಂಗಳೂರು, ನ.17: ಆನ್ಲೈನಲ್ಲೇ ರೂಂ ಬುಕ್ ಮಾಡಿ ತಮ್ಮಷ್ಟಕ್ಕೇ ಮಜಾ ಮಾಡಲು ಬಂದಿದ್ದ ಮೈಸೂರು ಮೂಲದ ಮೂವರು ಸ್ನೇಹಿತೆಯರು ಸೋಮೇಶ್ವರ ಬೀಚ್ ಬಳಿಯ ಖಾಸಗಿ ರೆಸಾರ್ಟಿನ ಈಜು ಕೊಳಕ್ಕಿಳಿದು ವಿಲ ವಿಲ ಒದ್ದಾಡಿ ಪ್ರಾಣ ಕಳಕೊಂಡಿದ್ದಾರೆ. ಇಷ್ಟಕ್ಕೂ ಈ ಬೀಚ್ ರೆಸಾರ್ಟ್ ನಲ್ಲಿ ಯುವತಿಯರು ಪ್ರಾಣ ಕಳೆದುಕೊಂಡಿದ್ದಕ್ಕೆ ಅಲ್ಲಿನ ಭದ್ರತಾ ವೈಫಲ್ಯವೇ ಕಾರಣ ಎನ್ನುವ ಶಂಕೆ ಮೂಡಿದೆ.
ಈಜುಕೊಳದಲ್ಲಿ ದುರಂತ ಸಂಭವಿಸಿದ್ದನ್ನು ತಿಳಿದು ಸ್ಥಳಕ್ಕಾಗಮಿಸಿದ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಖಾಸಗಿ ರೆಸಾರ್ಟಿನ ವೈಫಲ್ಯವನ್ನೇ ಬೊಟ್ಟು ಮಾಡಿದ್ದಾರೆ. ಬೆಳಗ್ಗೆ ಹತ್ತು ಗಂಟೆಗೆ ಮೂವರು ಈಜು ಕೊಳಕ್ಕೆ ಇಳಿದಿದ್ದಾರೆ, ಒಬ್ಬಳು ಯುವತಿ ಆಳ ಇರುವಲ್ಲಿ ಹೋಗಿ ಸಿಲುಕಿಕೊಂಡಿದ್ದಳು. ಇನ್ನಿಬ್ಬರು ಯುವತಿಯರು ಆಕೆಯ ರಕ್ಷಣೆಗೆ ಧಾವಿಸಿದ್ದು, ಮೂವರೂ ಮುಳುಗಿದ್ದಾರೆ. ಮೂವರಿಗೂ ಈಜು ಬರುತ್ತಿರಲಿಲ್ಲ. ಹೀಗಾಗಿ ಸಾವು ಸಂಭವಿಸಿದೆ ಎಂದಿದ್ದಾರೆ.
ಮೂವರು ಯುವತಿಯರು ಕೂಡ ಮೈಸೂರಿನಲ್ಲಿ ಒಂದೇ ಕಾಲೇಜಿನಲ್ಲಿ ಅಂತಿಮ ಪದವಿ ಓದುತ್ತಿದ್ದರು. ಸ್ನೇಹಿತೆಯರಾಗಿದ್ದು, ಪ್ರವಾಸ ಬಂದಿದ್ದರು. ಬೊಬ್ಬೆ ಹೊಡೆದು ಕೂಗಾಡಿದರೂ ಯಾರೂ ರಕ್ಷಣೆಗೆ ಬರಲಿಲ್ಲ ಎನ್ನುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ರೆಸಾರ್ಟಿನಲ್ಲಿ ಲೈಫ್ ಗಾರ್ಡ್ ಇರಲಿಲ್ಲ. ಆಳ ಎಷ್ಟಿದೆಯಂಬ ಬಗ್ಗೆಯೂ ಮಾಹಿತಿ ಫಲಕ ಅಳವಡಿಸಿಲ್ಲ. ಮನೆಯವರಿಗೆ ಮಾಹಿತಿ ನೀಡಿದ್ದೇವೆ. ರೆಸಾರ್ಟಿನಲ್ಲಿ ಪಾಲಿಸಬೇಕಾದ ನಿಯಮಗಳನ್ನು ಪಾಲನೆ ಮಾಡಿಲ್ಲ. ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಕಮಿಷನರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪೊಲೀಸರು ಆಂಬುಲೆನ್ಸ್ ಗಳನ್ನು ತರಿಸಿ ಮೂವರು ಯುವತಿಯರ ಶವಗಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಯ್ದಿದ್ದಾರೆ. ಮೈಸೂರಿನ ವಿಜಯನಗರ 2ನೇ ಅಡ್ಡರಸ್ತೆಯ ನಿವಾಸಿ ಕೀರ್ತನಾ ಎನ್.(21), ಮೈಸೂರು ಕುರುಬರಹಳ್ಳಿ ನಿವಾಸಿ ನಿಶಿತಾ ಎಂ.ಡಿ.(21), ರಾಮಾನುಜ ರಸ್ತೆಯ 11ನೇ ಕ್ರಾಸ್ ನಿವಾಸಿ ಪಾರ್ವತಿ ಎಸ್ (20) ಮೃತಪಟ್ಟವರಾಗಿದ್ದು, ಅವರ ಕುಟುಂಬಸ್ಥರು ಸಂಜೆಯ ವೇಳೆಗೆ ಮಂಗಳೂರು ತಲುಪಲಿದ್ದಾರೆ. ರೆಸಾರ್ಟ್ ಸೋಮೇಶ್ವರದ ಮನೋಹರ ಪುತ್ರನ್ ಎಂಬವರಿಗೆ ಸೇರಿದ್ದಾಗಿದ್ದು, ಉಳ್ಳಾಲ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಕ್ರಮ ರೆಸಾರ್ಟ್, ಅಧಿಕಾರಿಗಳ ಆಟಾಟೋಪ !
ಮನೋಹರ್ ಪುತ್ರನ್ ಎಂಬವರಿಗೆ ಸೇರಿದ ಈ ವಾಝ್ಕೊ ರೆಸಾರ್ಟ್ ಅಕ್ರಮವಾಗಿ ಕಾರ್ಯಾಚರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೊಟೇಲ್ ಪರವಾನಿಗೆಯನ್ನೇ ಮುಂದಿಟ್ಟು ಇವರು ರೆಸಾರ್ಟ್ ನಡೆಸುತ್ತಿದ್ದರು ಎನ್ನಲಾಗಿದೆ. ರೆಸಾರ್ಟಿನ ಈಜುಕೊಳ ಮತ್ತು ಕಾರ್ ಪಾರ್ಕಿಂಗ್ ಏರಿಯಾ ಸರಕಾರಿ ಜಾಗವನ್ನು ಅತಿಕ್ರಮಿಸಿ ನಿರ್ಮಿಸಲಾಗಿತ್ತು ಎಂಬ ಆರೋಪಗಳೂ ಇವೆ. ರೆಸಾರ್ಟ್ ನಲ್ಲಿ ಅಕ್ರಮವಾಗಿ ಮದ್ಯವನ್ನೂ ಪೂರೈಸಲಾಗುತ್ತಿತ್ತು ಎಂಬ ಮಾಹಿತಿಯೂ ಇದೆ. ಪ್ರವಾಸೋದ್ಯಮ ಇಲಾಖೆ ಮತ್ತು ಸ್ಥಳೀಯಾಡಳಿತದ ಅಧಿಕಾರಿಗಳ ಜಾಣ ಕುರಡು ಮತ್ತು ಕೊಡು ಕೊಳ್ಳುವಿಕೆಯ ಒಪ್ಪಂದದಿಂದಾಗಿ ಸೋಮೇಶ್ವರ ಉಚ್ಚಿಲ ಪ್ರದೇಶಗಳಲ್ಲಿ ಇದೇ ಮಾದರಿಯ ಅನೇಕ ಅಕ್ರಮ ರೆಸಾರ್ಟ್ ಗಳು ಕಾರ್ಯಾಚರಿಸುತ್ತಿದ್ದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
Mysuru three girls dronwed in Mangalore resort pool, police commissioner states of negligence of Sairam Vazco staffs, onwner of the resort has been taken to custody by police. Three women from Mysuru drown and die at the swimming pool of Vazco Beach Resort under Ullal police station limits on the outskirts of Mangaluru on November 17 morning.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm