ಬ್ರೇಕಿಂಗ್ ನ್ಯೂಸ್
18-11-24 09:51 pm Mangalore Correspondent ಕರಾವಳಿ
ಉಳ್ಳಾಲ, ನ.18: ದೇವರು ನಮ್ಮ ಕಣ್ಣಿಗೆ ನೇರವಾಗಿ ಕಾಣಲ್ಲ. ಆದರೆ ನಮ್ಮ ಸಂಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುವವರೇ ನಮಗೆ ದೇವರ ಸ್ವರೂಪಿಗಳಾಗುತ್ತಾರೆ ಎಂದು ಮುಳುಗು ತಜ್ಞ, ಜೀವರಕ್ಷಕ ಈಶ್ವರ್ ಮಲ್ಪೆ ಅಭಿಪ್ರಾಯಪಟ್ಟರು.
ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ವತಿಯಿಂದ ಭಾನುವಾರ ತೊಕ್ಕೊಟ್ಟು, ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ನಡೆದ 200 ಅರ್ಹ ಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಯಂದಿರು ತಮ್ಮ ಮಕ್ಕಳಿಗೆ ಸಣ್ಣ ಪ್ರಾಯದಲ್ಲಿ ಮೊಬೈಲ್ ಕೊಡಬೇಡಿ. ಮಕ್ಕಳು ಮೊಬೈಲ್ ಗೀಳಿಗೆ ದಾಸರಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಪೋಷಕರು ತಮ್ಮ ಮಕ್ಕಳಲ್ಲಿ ಹೊಸತನ ಬೆಳೆಸಲು ಈಜು ಕಲಿಸಿ. ಈಜು ಆತ್ಮ ರಕ್ಷಣೆಗೂ ಸಹಕಾರಿಯಾಗುವುದಲ್ಲದೆ ಮಕ್ಕಳ ದೈಹಿಕ, ಮಾನಸಿಕ ಕ್ಷಮತೆಗೆ ಅತ್ಯುತ್ತಮವಾದ ವ್ಯಾಯಾಮವಾಗಿದೆ ಎಂದರು.
ಸಮಾಜಕ್ಕೆ ನಾನು ಮಾಡಿದ ಸಣ್ಣ ಸೇವೆಯ ಪುಣ್ಯದ ಫಲವಾಗಿ ನನ್ನ ಮೂರು ವಿಶೇಷ ಚೇತನ ಮಕ್ಕಳಲ್ಲಿ ಇಬ್ಬರು ಗುಣಮುಖರಾಗಿದ್ದಾರೆ. ಕೇರಳದ ದಾನಿಗಳ ಸಹಕಾರದಿಂದ ಇಪ್ಪತ್ತಮೂರು ವರುಷದಿಂದ ಮಲಗಿದ್ದಲ್ಲೇ ಇದ್ದ ಮಗು ವೀಲ್ ಚೆಯರಲ್ಲಿ ಹೋಗುವಂತಾಗಿದೆ. ಏಳು ವರುಷಗಳಿಂದ ನಡೆದಾಡದ ಮತ್ತೊಬ್ಬಳು ಈಗ ನಡೆದಾಡುತ್ತಿದ್ದಾಳೆ ಎಂದು ಈಶ್ವರ್ ಮಲ್ಪೆ ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮಾರುತಿ ಯುವಕ ಮಂಡಲದ ಗೌರವಾಧ್ಯಕ್ಷ ವರದರಾಜ್ ಬಂಗೇರ ಮಾತನಾಡಿ, ಸಾಯಿ ಪರಿವಾರ್ ಟ್ರಸ್ಟ್ ಅತ್ಯಂತ ಕಡಿಮೆ ಅವಧಿಯಲ್ಲಿ ದೊಡ್ಡ ಸಾಧನೆ ಮಾಡಿದ ಸಂಸ್ಥೆಯಾಗಿದೆ. ಸಂಸ್ಥೆಗೆ ಆದಷ್ಟು ಶೀಘ್ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಲಿ ಎಂದು ಹಾರೈಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ಞೇಶ್ವರ್ ಶೆಟ್ಟಿ ಬರ್ಕೆ, ಅಸ್ತೃ ಗ್ರೂಪ್ ಸಿಇಒ ಲಾಂಚುಲಾಲ್ ಕೆ.ಎಸ್ ಮೂಕಾಂಬಿಕ ಕನ್ಸ್ಟ್ರಕ್ಷನ್ಸ್ ಮಾಲಕರಾದ ಚಂದ್ರಹಾಸ್ ಪಂಡಿತ್ ಹೌಸ್, ರಂಗಭೂಮಿ ಮತ್ತು ಚಲನಚಿತ್ರ ನಟ ಸ್ವರಾಜ್ ಶೆಟ್ಟಿ, ಅನ್ವಿತ್ ಇಲೆಕ್ಟ್ರಾನಿಕ್ಸ್ ಮಾಲಕರಾದ ಪ್ರಕಾಶ್, ಕದ್ರಿ ಈವೆಂಟ್ಸ್ ಜಗದೀಶ್ ಕದ್ರಿ ವಿಶೇಷ ಅತಿಥಿಗಳಾಗಿದ್ದರು.
Mangalore Eshwar maple encourages parents to send their children to swimming class after Drowning incident at resort.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm