ಬ್ರೇಕಿಂಗ್ ನ್ಯೂಸ್
20-11-24 06:37 pm Udupi Correspondent ಕರಾವಳಿ
ಉಡುಪಿ, ನ.20: ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ಬಲಿಯಾದ ನಕ್ಸಲ್ ನಾಯಕ ವಿಕ್ರಂ ಗೌಡ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮಾಡಲಾಗಿದ್ದು, ಆಬಳಿಕ ಮೃತದೇಹವನ್ನು ಆತನ ಕುಟುಂಬಕ್ಕೆ ಬಿಟ್ಟುಕೊಡಲಾಯಿತು. ಆತನ ಹುಟ್ಟೂರು ಕಬ್ಬಿನಾಲೆಯ ಕೂಡ್ಲು ಎಂಬಲ್ಲಿ ಹೆಬ್ರಿ ಪೊಲೀಸರ ಸಮ್ಮುಖದಲ್ಲಿ ಕುಟುಂಬಸ್ಥರು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ನ.18ರ ಮಧ್ಯರಾತ್ರಿ ನಾಡ್ಪಾಲು ಗ್ರಾಮದ ಪೀತ್ ಬೈಲ್ ಎಂಬಲ್ಲಿ ಎಎನ್ಎಫ್ ಪಡೆಯ ಗುಂಡಿಗೆ ನಕ್ಸಲ್ ವಿಕ್ರಂ ಗೌಡ ಹತನಾಗಿದ್ದ. ಆನಂತರ, ಮರುದಿನ ಸಂಜೆಯ ವರೆಗೂ ಆತನ ಶವ ಕಾಡಿನಲ್ಲಿಯೇ ಇತ್ತು. ಮಂಗಳವಾರ ಸಂಜೆಯ ವೇಳೆಗೆ ಫಾರೆನ್ಸಿಕ್ ತಜ್ಞರು ಮತ್ತು ಶ್ವಾನದಳ ತಪಾಸಣೆಯ ಬಳಿಕ ಶವವನ್ನು ಎತ್ತಿ ಮರಣೋತ್ತರ ಪರೀಕ್ಷೆಗೆ ಒಯ್ಯಲಾಗಿತ್ತು.
ಮಣಿಪಾಲ ಆಸ್ಪತ್ರೆಯಲ್ಲಿ ಬುದವಾರ ನಸುಕಿನಲ್ಲಿ ತಾಲೂಕು ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬುಧವಾರ ಬೆಳಗ್ಗೆ ಶವ ನೋಡುವುದಕ್ಕೆ ವಿಕ್ರಂ ಗೌಡನ ತಂಗಿ ಸುಗುಣ ಮತ್ತು ತಮ್ಮ ಸುರೇಶ್ ಗೌಡ ಆಗಮಿಸಿದ್ದಾರೆ. ಈ ವೇಳೆ, ತಂಗಿ ಸುಗುಣ, ಹುಟ್ಟೂರಿನಲ್ಲಿ ಅಣ್ಣ ವಿಕ್ರಂ ಗೌಡನಿಗೆ ಸೇರಿದ ಒಂದು ಎಕರೆ ಜಾಗ ಇದೆ. ಅಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ಪೊಲೀಸರು ಅದಕ್ಕೆ ಒಪ್ಪಿದ್ದು ಕಳೇಬರವನ್ನು ಕುಟುಂಬಸ್ಥರ ವಶಕ್ಕೊಪ್ಪಿಸಿದ್ದಾರೆ. ಶವವನ್ನು ಆಂಬುಲೆನ್ಸ್ ನಲ್ಲಿಯೇ ಕಬ್ಬಿನಾಲೆಗೆ ಒಯ್ಯಲಾಗಿದ್ದು, ವಾಹನ ವೇಗದಲ್ಲಿ ಸಾಗುತ್ತಿದ್ದಾಗ ದನ ರಸ್ತೆಗೆ ಅಡ್ಡ ಬಂದಿದ್ದರಿಂದ ಚಾಲಕ ನಿಯಂತ್ರಣ ತಪ್ಪಿ ರಸ್ತೆಯಿಂದ ಹೊರಕ್ಕೆ ಇಳಿಸಿದ ಘಟನೆಯೂ ನಡೆಯಿತು. ಆನಂತರ, ಜೊತೆಗಿದ್ದ ಪೊಲೀಸರು ಮತ್ತು ಸ್ಥಳೀಯರು ಸೇರಿ ವಾಹನವನ್ನು ತಳ್ಳಿ ರಸ್ತೆಗೆ ತಂದಿದ್ದು, ಬಳಿಕ ಕಬ್ಬಿನಾಲೆಗೆ ತಲುಪಿತ್ತು.
ಕಬ್ಬಿನಾಲೆ ಗ್ರಾಮದ ಕೂಡ್ಲುವಿನಲ್ಲಿ ಕುಟುಂಬಸ್ಥರು ವಿಧಿ ವಿಧಾನ ಪೂರೈಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ವಿಕ್ರಂ ಗೌಡ 24 ವರ್ಷದ ಯುವಕನಿದ್ದಾಗ ಮನೆ ಬಿಟ್ಟು ಕಾಡು ಸೇರಿದ್ದು, ನಕ್ಸಲರ ಪಡೆಯನ್ನು ಕಟ್ಟಿಕೊಂಡಿದ್ದ. ಕೊಲೆ, ಪೊಲೀಸರ ವಾಹನಕ್ಕೆ ಬೆಂಕಿ ಹಾಕಿದ ಪ್ರಕರಣ ಸೇರಿ ಕೇರಳ, ಕರ್ನಾಟಕದಲ್ಲಿ ನೂರಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದಾನೆ.
Udupi Naxal leader Vikram gowda final rites performed by family members at home town Udupi. After postmortem at manipal Kmc the police have handed over his body to the family members after which the final rites were performed.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm