ಬ್ರೇಕಿಂಗ್ ನ್ಯೂಸ್
21-11-24 04:35 pm Mangalore Correspondent ಕರಾವಳಿ
ಮಂಗಳೂರು, ನ.21: ಅನರ್ಹ ಪಡಿತರ ಕಾರ್ಡುಗಳನ್ನು ರದ್ದು ಪಡಿಸಲಾಗಿದೆ. ಆದಾಯ ತೆರಿಗೆ ಕಟ್ಟುವವರು, ಸರ್ಕಾರಿ ನೌಕರರು ಸೇರಿದಂತೆ ಇತರ ಮಾನದಂಡ ಆಧರಿಸಿ ಪಡಿತರ ರದ್ದು ಪಡಿಸಲಾಗಿದೆ ಅಂತ ಸಿಎಂ ಸ್ಪಷ್ಟಪಡಿಸಿದ್ದಾರೆ. ಆಹಾರ ಸಚಿವರೂ ಅದನ್ನೇ ಹೇಳಿದ್ದಾರೆ. ಏನೋ ತಪ್ಪು ಆಗಿದ್ದನ್ನು ಸರಿಸಡಿಸುತ್ತೇವೆ. ತಪ್ಪಾಗಿರೋದನ್ನು ಸರಿಪಡಿಸಬಾರದು ಅನ್ನೋದು ಯಾವ ಲಾಜಿಕ್ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಲವು ಕಡೆ ಬಡತನ ರೇಖೆಗಿಂತ ಕಡಿಮೆ ಇರುವ 80/90 ಪರ್ಸೆಂಟ್ ರದ್ದಾಗಿರುವ ಬಗ್ಗೆ ಆರೋಪ ಮಾಡಲಾಗುತ್ತಿದೆ. ಆದರೆ ವೈಜ್ಞಾನಿಕವಾಗಿ ನೋಡಿದಾಗ ಹಾಗಾಗಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ದೇಶದಲ್ಲಿ 5.80 ಕೋಟಿ ಪಡಿತರ ಚೀಟಿ ರದ್ದಾಗಿರುವ ಬಗ್ಗೆ ಮಾಹಿತಿ ನೀಡಿದೆ. ಈ ವಿಚಾರವನ್ನು ಯಾಕೆ ಬಿಜೆಪಿಯವರು ಮಾತಾಡುತ್ತಿಲ್ಲ?ಸರ್ಕಾರದ ಹಣ ಅರ್ಹ ಫಲಾನುಭವಿಗಳಿಗೆ ಮುಟ್ಟಬೇಕು. ಮಾಧ್ಯಮವರು ಕೂಡ ಇದನ್ನು ತಿಳಿದು ಹೇಳಬೇಕು ಎಂದರು.
ಗೃಹಲಕ್ಷ್ಮಿ ಯೋಜನೆಗೂ ಪಡಿತರಕ್ಕೂ ಯಾವುದೇ ಸಂಬಂಧ ಇಲ್ಲ. ಕೆಲವು ಪಡಿತರ ಚೀಟಿ ರದ್ದು ವಿಚಾರದಲ್ಲಿ ಸಣ್ಣ ಪುಟ್ಟ ಸಮಸ್ಯೆ ಆಗಿದೆ, ಅದನ್ನು ಸರ್ಕಾರ ಸರಿ ಮಾಡುತ್ತೆ. ವ್ಯವಸ್ಥೆ ಸುಧಾರಣೆ ಮಾಡುವಾಗ ಸ್ಪಲ್ಪ ಸಮಸ್ಯೆ ಬರುತ್ತೆ, ಅದನ್ನು ಸರಿ ಪಡಿಸುತ್ತೇವೆ ಎಂದರು.
ಉಪ ಚುನಾವಣೆ ಫಲಿತಾಂಶ ಬಗ್ಗೆ ಕೇಳಿದಾಗ, ಎಗ್ಸಿಟ್ ಪೋಲ್ ಫಲಿತಾಂಶವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ರಾಜ್ಯದ ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.
ಮೂಡಾ ಹಗರಣದಲ್ಲಿ ಸಿಎಂ ಗೆ ಇಡಿ ನೋಟಿಸ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಇಡಿ, ಸಿಬಿಐಯನ್ನು ದಾಳವಾಗಿ ಬಳಸುತ್ತಿದ್ದಾರೆ. ಇಡಿ ಬಿಜೆಪಿಯ ಅಂಗ ಸಂಸ್ಥೆಯಾಗಿದೆ. ಯಾವುದರಲ್ಲೂ ನೈತಿಕತೆ ಉಳಿದುಕೊಂಡಿಲ್ಲ, ಇದು ದುರ್ದೈವ. ಇಡಿ ನೋಟಿಸ್ ಕೊಡೋದು, ಅಪಪ್ರಚಾರ ಮಾಡಿಸೋದು. ವಿರೋಧ ಪಕ್ಷವನ್ನು ಸೋಲಿಸಲು, ಭ್ರಷ್ಟರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಇಡಿಯನ್ನು ಬಳಸುತ್ತಿದೆ ಎಂದರು.
ನಬಾರ್ಡ್ ಅನುದಾನದಲ್ಲಿ 2500 ಕೋಟಿ ಕಡಿತವಾಗಿದೆ. ಇದು ಅತ್ಯಂತ ಪ್ರಮುಖ ವಿಚಾರ. ಪ್ರಹ್ಲಾದ್ ಜೋಶಿ ಇದರ ಬಗ್ಗೆ ಮಾತಾಡಲಿ. ಕೇಂದ್ರ ಸಚಿವರ ಜೊತೆ ಮಾತಾಡುತ್ತೇನೆ ಅಂತ ಹೇಳಲು ಅವರಿಗೆ ಬಾಯಿ ಬರೋದಿಲ್ಲ. ಕೇಂದ್ರಕ್ಕೆ ಬಿಜೆಪಿಯವರು ಗುಲಾಮರಾಗುತ್ತಿದ್ದಾರೆ. ನಾವು ಗುಲಾಮರಲ್ಲ, ನಾವು ಹೋರಾಟ ಮಾಡುತ್ತೇವೆ ಎಂದು ಟಾಂಗ್ ಇಟ್ಟರು. ಆಸ್ಪತ್ರೆಯಲ್ಲಿ 20 ಶೇಕಡಾ ಶುಲ್ಕ ಹೆಚ್ಚಳ ವಿಚಾರ ಕುರಿತು, ಸೇವಾ ಶುಲ್ಕ ಆಸ್ಪತ್ರೆಗೆ ಹೋಗುತ್ತದೆ. 10 ಇದ್ದುದನ್ನು 15 ರಿಂದ 20 ಶೇಕಡಾ ಹೆಚ್ಚಿಸಿದ್ದಾರೆ. ಸಣ್ಣ ಪರಿಷ್ಕರಣೆ ಮಾಡಿದ್ದಾರೆ ಅಷ್ಟೇ. ಅದು ಸರ್ಕಾರಕ್ಕೆ ಹೋಗಲ್ಲ, ಅದು ಗ್ಯಾರಂಟಿಗೂ ಹೋಗಲ್ಲ. ಗ್ಯಾರಂಟಿ ಯೋಜನೆಗೂ ಶುಲ್ಕ ಪರಿಷ್ಕರಣೆಗು ಲಿಂಕ್ ಇಲ್ಲ. ಬಡವರಿಗೆ ತೊಂದರೆ ಆಗುವ ರೀತಿಯಲ್ಲಿ ಏನು ಆಗೋದಿಲ್ಲ. ಅಲ್ಪ ಪ್ರಮಾಣದಲ್ಲಿ ಮಾಡಿದ್ದಾರೆ ಅಷ್ಟೇ. ಅಸ್ಪತ್ರೆಯ ಹಣ ಆಸ್ಪತ್ರೆಯಲ್ಲೇ ಇರುತ್ತೆ, ಆಸ್ಪತ್ರೆಯ ಅಭಿವೃದ್ದಿಗೆ ಬಳಕೆ ಆಗುತ್ತೆ ಎಂದರು.
ಕರಾವಳಿಯಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚುತ್ತಿರುವ ಕುರಿತ ಪ್ರಶ್ನೆಗೆ, ನಕ್ಸಲ್ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್ ಆಗಿದ್ದಾನೆ. ಇದರ ಬಗ್ಗೆ ತಿಳಿದು ಮಾತಾಡುತ್ತೇನೆ, ಇದೊಂದು ಗಂಭೀರ ವಿಚಾರ. ನಕ್ಸಲರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ನಡೆದಿದೆ. ತೀವ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ. ನಮಗೆ ಯಾರನ್ನೂ ಕೊಂದು ಹಾಕುವ ಉದ್ದೇಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
Health and Family Welfare minister Dinesh Gundu Rao on Thursday justified the hike in the service charges in the government hospitals of the state by terming the hike as 'minimal, practical and logical' and said that it will help improvement in the services.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm