ಬ್ರೇಕಿಂಗ್ ನ್ಯೂಸ್
27-11-24 12:31 pm Mangalore Correspondent ಕರಾವಳಿ
ಮಂಗಳೂರು, ನ.27: ನಕ್ಸಲ್ ನಾಯಕ ವಿಕ್ರಂ ಗೌಡನದ್ದು ಎನ್ಕೌಂಟರ್ ಅಲ್ಲ, ಪೊಲೀಸರು ಮಾಡಿರುವ ಹತ್ಯೆ. ಎಲ್ಲಿಯೋ ಬೇರೆ ಕಡೆ ಬಂಧಿಸಿ ತಂದು ಕಬ್ಬಿನಾಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಜನಪರ ಚಳುವಳಿಯ ನಾಯಕ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಎನ್ಕೌಂಟರ್ ನಡೆದಿರುವ ಜಾಗಕ್ಕೆ ತೆರಳಿ ಪರಿಶೀಲನೆ ಮಾಡಿದ್ದೇವೆ. ಅಲ್ಲಿ ಯಾವುದೇ ಗುಂಡಿನ ಚಕಮಕಿ ನಡೆದಿರುವ ಸಾಕ್ಷ್ಯ ಇಲ್ಲ. ಪೊಲೀಸರು ಹೇಳುವ ಪ್ರಕಾರ, ಚಕಮಕಿ ನಡೆದಿದ್ದರೆ ಮನೆಗಳಿಗೆ ಗುಂಡಿನೇಟಿನಿಂದ ಹಾನಿಯಾಗಬೇಕಿತ್ತು. ಅಲ್ಲಿ ಯಾವುದೇ ಗುಂಡಿನೇಟು ಬಿದ್ದ ಗುರುತು ಇಲ್ಲ. ಜಯಂತ್ ಗೌಡರ ಮನೆ ಎದುರಲ್ಲೇ ಬಾಳೆಗಿಡಗಳು, ತೋಟ ಇದ್ದು, ಅಲ್ಲಿ ಯಾವುದೇ ಗುಂಡಿನ ಗುರುತುಗಳಿಲ್ಲ.
ಹೀಗಾಗಿ ಇದೊಂದು ಪೂರ್ವಯೋಜಿತ ಹತ್ಯೆ ಎನ್ನುವುದಕ್ಕೆ ತಜ್ಞರು ಬೇಕಿಲ್ಲ. ನಕ್ಸಲರ ಶರಣಾಗತಿ ಪ್ರಕ್ರಿಯೆ ಆಗುತ್ತಿರುವ ಸಂದರ್ಭದಲ್ಲಿ ಹತ್ಯೆ ಮಾಡಿರುವುದು ಮಾನವ ಹಕ್ಕು ಉಲ್ಲಂಘನೆ. ಆತನಲ್ಲಿ ಮೆಷಿನ್ ಗನ್ ಇತ್ತೆಂದು ಹೇಳುತ್ತಿದ್ದಾರೆ. ಮೆಷಿನ್ ಗನ್ ಇರುತ್ತಿದ್ದರೆ ಪೊಲೀಸರ ಕಡೆಯಲ್ಲಿ ಸಾವಲ್ಲದಿದ್ದರೂ ಗಾಯಗಳಾದರೂ ಆಗಬೇಕಿತ್ತು. ನಕ್ಸಲರು ಕಡೆಯಿಂದಲೂ ದಾಳಿ ಆಗಿರಬೇಕಿತ್ತು. ಪೊಲೀಸರು ಹತ್ಯೆಗೈದು ಕಟ್ಟುಕತೆ ಸೃಷ್ಟಿಸುತ್ತಿದ್ದಾರೆ.
ಮಲೆನಾಡಿನಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ಧ್ವನಿ ಏಳಬಾರದು. ನಕ್ಸಲರಿಗೆ ಬೆಂಬಲ ನೀಡಬಾರದೆಂದು ಭಯ ಮೂಡಿಸಲು ಇಂತಹ ಕೃತ್ಯ ಮಾಡಿದ್ದಾರೆ. ಒಂದು ತಿಂಗಳ ಹಿಂದೆ ಧರ್ಮಸ್ಥಳ ಆಸುಪಾಸಿನಲ್ಲಿ ಕೆಲವು ನಕ್ಸಲರ ಬಂಧನ ಆಗಿತ್ತು ಎಂದು ಹೇಳಲಾಗಿತ್ತು. ಆದರೆ ಅವರು ಎಲ್ಲಿದ್ದಾರೆ, ಯಾರು ಬಂಧನ ಆಗಿದ್ದಾರೆಂದು ಮಾಹಿತಿ ನೀಡಿಲ್ಲ. ಅಲ್ಲಿ ಬಂಧನ ಆಗಿದ್ದವರಲ್ಲಿ ವಿಕ್ರಂ ಗೌಡನೂ ಇದ್ದನೇ ಎಂಬ ಸಂಶಯ ಇದೆ. ಈಗಲೂ ಪೊಲೀಸರ ಬಳಿ ಕೆಲವು ನಕ್ಸಲರು ಕಸ್ಟಡಿಯಲ್ಲಿದ್ದಾರೆಯೇ ಎನ್ನುವ ಬಗ್ಗೆ ಮಾಹಿತಿಯಿಲ್ಲ. ಅಥವಾ ಅವರನ್ನು ಕೂಡ ಇದೇ ರೀತಿ ಎಲ್ಲಾದರೂ ಹತ್ಯೆ ಮಾಡಬಹುದೇ ಎನ್ನುವ ಗುಮಾನಿ ಇದೆ. ನಾವೇನೂ ನಕ್ಸಲರ ಪರ ಇಲ್ಲ. ಹಾಗಂತ, ಒಬ್ಬನನ್ನು ಬಂಧಿಸಿ ಹತ್ಯೆ ಮಾಡುವುದು ಮನುಷ್ಯತ್ವ ವಿರೋಧಿ ನಡೆ. ನಾವಿದನ್ನು ಖಂಡಿಸುತ್ತೇವೆ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಈಗಿನ ಹೊತ್ತಿನಲ್ಲಿ ನಕ್ಸಲರ ಶಕ್ತಿಯೇ ಉಡುಗಿಹೋಗಿದೆ. ಕಾಡಿನಲ್ಲಿ ಊಟಕ್ಕೂ ತತ್ವಾರ ಪಡುತ್ತಿದ್ದಾರೆ ಎನ್ನುವ ಮಾಹಿತಿಯಿದೆ. ಯಾವುದೋ ಕಾರಣಕ್ಕೆ ನಕ್ಸಲ್ ಚಳವಳಿ ಹಿಡಿದವರನ್ನು ಮತ್ತೆ ಮುಖ್ಯ ವಾಹಿನಿಗೆ ತರಬೇಕೆಂದು ಪ್ರಯತ್ನಗಳಾಗುತ್ತಿವೆ. ಆದರೆ ಪೊಲೀಸರು ಗುಂಡು ಹಾರಿಸಿ ಹತ್ಯೆ ಮಾಡಿದರೆ ಅವರು ಸಮಾಜದ ಎದುರು ಬರುವುದು ಹೇಗೆ. ಎನ್ಕೌಂಟರ್ ನಕಲಿ ಎನ್ನುವುದರಲ್ಲಿ ಸಂಶಯ ಇಲ್ಲ. ಇದರ ಬಗ್ಗೆ ಸತ್ಯಶೋಧನಾ ಸಮಿತಿ ಮಾಡಬೇಕು. ಜೊತೆಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಸರಕಾರವನ್ನು ಒತ್ತಾಯ ಮಾಡುತ್ತೇನೆ ಎಂದಿದ್ದಾರೆ. ಎರಡು ದಿನಗಳ ಹಿಂದೆ ನಕ್ಸಲರ ಶರಣಾಗತಿಗೆಂದು ಸರಕಾರದಿಂದ ನೇಮಕ ಮಾಡಿರುವ ಸಮಿತಿ ಸದಸ್ಯರ ಜೊತೆಗೆ ಮುನೀರ್ ಕಾಟಿಪಳ್ಳ ವಿಕ್ರಂ ಗೌಡ ಎನ್ಕೌಂಟರ್ ನಡೆದಿದ್ದ ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮಕ್ಕೆ ಭೇಟಿ ನೀಡಿದ್ದರು.
Naxal leader Vikram Gowda Encounter is fake, it's a pre plan murder by police slams DFYI leader Muneer Katipalla in Mangalore. They have taken him to some interior spot and shot him there he added.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am