ಬ್ರೇಕಿಂಗ್ ನ್ಯೂಸ್
28-11-24 01:25 pm Mangalore Correspondent ಕರಾವಳಿ
ಮಂಗಳೂರು, ನ.28: ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಒಂದೂವರೆ ವರ್ಷದಲ್ಲಿ ಯು.ಟಿ ಖಾದರ್ ಹತ್ತು ದೇಶಗಳನ್ನು ಸುತ್ತಿದ್ದಾರೆ. ಇದೀಗ ರೋಮ್ ದೇಶಕ್ಕೆ ಹೊರಟಿದ್ದು, ಅಲ್ಲಿನ ವ್ಯಾಟಿಕನ್ ಸಿಟಿಯಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲಿಗೆ ತೆರಳುವುದಕ್ಕೂ ಮುನ್ನ ಸುದ್ದಿಗೋಷ್ಟಿ ಕರೆದಿದ್ದ ಅವರಲ್ಲಿ ಪತ್ರಕರ್ತರು ಕುಹಕದ ಪ್ರಶ್ನೆಗಳನ್ನು ಹಾಕಿದರು.
ಈವರೆಗೆ ಹತ್ತು ದೇಶಗಳನ್ನು ಸುತ್ತಿದ್ದೇನೆ, ಇದೀಗ ರೋಮ್ ದೇಶಕ್ಕೆ ಹೊರಟಿದ್ದೇನೆ. ಅಲ್ಲಿನ ವ್ಯಾಟಿಕನ್ ಸಿಟಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಕರೆದಿದ್ದಾರೆ. ನಾನು ಸೇರಿದಂತೆ ಭಾರತದಿಂದ ಆಯ್ದ ಕೆಲವರನ್ನು ಮಾತ್ರ ಆಹ್ವಾನಿಸಿದ್ದಾರೆ. ಅಲ್ಲಿ ಭಾರತದ ಜನಪ್ರತಿನಿಧಿಯಾಗಿ ಮಾತನಾಡಲು ಸಿಗುವುದು ಒಂದು ಅಪೂರ್ವ ಅವಕಾಶ. ಉಳ್ಳಾಲದ ಜನತೆಯ ಪರವಾಗಿ ನಾನು ಅಲ್ಲಿ ಪ್ರತಿನಿಧಿಸುತ್ತೇನೆ ಎಂದು ಹೇಳಿದರು.
ನೀವು ದೇಶ ಸುತ್ತುವುದರಲ್ಲಿ ಮೋದಿಯವರನ್ನು ಹಿಂದಿಕುತ್ತೀರಾ ಎಂಬ ಪ್ರಶ್ನೆಗೆ, ಅವರನ್ನು ಹಿಂದಿಕ್ಕಬೇಕೆಂಬ ಬಯಕೆ ಇದೆ. ಅದಕ್ಕೆ ಉಳ್ಳಾಲದ ಜನತೆಯ ಆಶೀರ್ವಾದ ಸಿಗಬೇಕು. ಜನರ ಪ್ರಾರ್ಥನೆ ಇದ್ದರೆ ಮೋದಿಯನ್ನು ಹಿಂದಿಕ್ಕುವ ಭಾಗ್ಯ ಸಿಗಬಹುದು. ಕೆಲವೊಮ್ಮೆ ಒಂದು ಕಡೆ ಹೋದಾಗ ಮತ್ತೆ ಬರಲು ಆಗಲ್ಲ ಎಂದು ಆಸುಪಾಸಿನ ದೇಶಗಳಿಗೂ ಹೋಗುತ್ತೇನೆ, ಅಲ್ಲಿಯೇ ವಾಹನದಲ್ಲಿ ಮತ್ತೊಂದು ದೇಶಕ್ಕೆ ಹೋಗಲು ಆಗುತ್ತದೆ ಎಂದರು. ನೀವು ಸಚಿವ ಸ್ಥಾನದ ಆಕಾಂಕ್ಷಿಯಾ ಎಂದು ಕೇಳಿದ ಪ್ರಶ್ನೆಗೆ, ನಾನು ಸ್ಪೀಕರ್ ಆದಾಗಲೇ ಹೇಳಿದ್ದೆ. ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಚೆಂಡು ಯಾವ ಕಡೆಯಿಂದ ಬಂದರೂ ಬ್ಯಾಟಿಂಗ್ ಮಾಡುತ್ತೇನೆ. ಹೊಸ ಜವಾಬ್ದಾರಿ ಸಿಕ್ಕಾಗ ಅದನ್ನು ಕಲಿತುಕೊಳ್ಳಬೇಕು ಎಂದರು.
ಸ್ಪೀಕರ್ ಆಗಿ ಸಂತೃಪ್ತಿ ಇದೆಯಾ ಎಂದು ಕೇಳಿದ್ದಕ್ಕೆ, ಸಮ್ಮಿಶ್ರ ಸರಕಾರ ಇದ್ದಾಗ ಮಾತ್ರ ಸ್ಪೀಕರ್ ಸ್ಥಾನಕ್ಕೆ ಹೆಚ್ಚು ಗೌರವ ಇರುತ್ತದೆ. ಇಲ್ಲದಿದ್ದರೆ ನಾವು ಅನುದಾನ ಇನ್ನಿತರ ವಿಚಾರಕ್ಕೆ ಸಚಿವರಿಗೆ ಎರಡು ಮೂರು ಬಾರಿ ಫೋನ್ ಮಾಡಬೇಕಾಗುತ್ತದೆ. ಸ್ಪೀಕರ್ ಅಂದ ಮೇಲೆ ಅವರ ಕ್ಷೇತ್ರಕ್ಕೆ ಇಂತಿಷ್ಟು ಅನುದಾನ ನೀಡಬೇಕು ಎಂದು ಹೇಳಿದರು. ಡಿ.9ರಿಂದ 19ರ ವರೆಗೆ ಬೆಳಗಾವಿ ಅಧಿವೇಶನ ನಡೆಯುತ್ತದೆ. ಯಾವಲ್ಲ ಅಜೆಂಡಾ ಇದೆಯೆಂದು ಇನ್ನೂ ಅಂತಿಮ ಆಗಿಲ್ಲ ಎಂದರು.
ತುಳು ಭಾಷೆಯ ಬಗ್ಗೆ ಜನಪ್ರತಿನಿಧಿಗಳದ್ದೇ ಅಸಡ್ಡೆ
ತುಳು ದ್ವಿತೀಯ ಭಾಷೆಯಾಗಿ ಘೋಷಣೆ ಮಾಡುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲವೇ ಎಂದು ಕೇಳಿದ್ದಕ್ಕೆ, ಆ ಕುರಿತು ಈಗಾಗಲೇ ಟೇಕಾಫ್ ಆಗಿದೆ, ಎಲ್ಲಿ ಲ್ಯಾಂಡ್ ಆಗುತ್ತದೆ ಎಂದು ಹೇಳಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದರು. ನೀವೇ ಸ್ಪೀಕರ್ ಆಗಿ, ತುಳುವರಾಗಿ ಹೀಗೆ ಹೇಳೋದಾ ಎಂದು ಮರು ಪ್ರಶ್ನಿಸಿದಾಗ, ಆ ಕುರಿತು ಪ್ರಯತ್ನ ಮಾಡುತ್ತಿದ್ದೇವೆ, ಎಲ್ಲರ ಸಹಮತ ಸಿಗಬೇಕಲ್ವಾ ಎಂದರು. ನೀವು ಈ ಭಾಗದ ಜನಪ್ರತಿನಿಧಿಗಳ ಸಭೆ ಕರೆದಿಲ್ಲ ತಾನೇ ಎಂದಿದ್ದಕ್ಕೆ ಮಾಡ್ತೀವಿ ಎಂದು ಹೇಳಿದರು. ಕಳೆದ ಬಾರಿಯ ಅಧಿವೇಶನದಲ್ಲಿ ತುಳು ಭಾಷೆಯ ಕುರಿತಾಗಿ ಪುತ್ತೂರು ಶಾಸಕ ಅಶೋಕ್ ರೈ ಪ್ರಸ್ತಾಪಿಸಿ, ದ್ವಿತೀಯ ಭಾಷೆಯಾಗಿ ಘೋಷಿಸುವ ಬಗ್ಗೆ ಒತ್ತಾಯಿಸಿದ್ದರು. ಚರ್ಚೆಯ ಸಂದರ್ಭದಲ್ಲಿ ಸ್ಪೀಕರ್ ಯುಟಿ ಖಾದರ್, ಈ ಬಗ್ಗೆ ಶೀಘ್ರದಲ್ಲೇ ಕರಾವಳಿಯ ಜನಪ್ರತಿನಿಧಿಗಳ ಸಭೆ ಕರೆಯುತ್ತೇನೆ ಎಂದಿದ್ದರು.
Travelled to 10 countries so far says speaker U T Khader in Mangalore. If people bless me I will travel more than Modi he added.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
13-07-26 09:16 pm
HK News Staffer
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
13-07-26 10:57 pm
HK News Staffer
ಈ ನ್ಯಾಯಾಲಯದಲ್ಲಿ ಜೂಜಾಡಬೇಡಿ! ಸೌಜನ್ಯ ಪ್ರಕರಣ ಬಳಸಿ...
13-07-26 09:48 pm
ಮಂಜನಾಡಿ ಭೂಕುಸಿತ ದುರಂತ ; ಅವೈಜ್ಞಾನಿಕ ರಸ್ತೆ ನಿರ್...
13-07-26 08:31 pm
ಬಿಡದಿ ಟೌನ್ಶಿಪ್ ಜಟಾಪಟಿ ; ಸರ್ವೆಗೆ ಬಂದಿದ್ದ ಅಧಿ...
13-07-26 07:39 pm
ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೀತಿ, ಧರ್ಮಸ್ಥಳ...
13-07-26 02:54 pm