ಬ್ರೇಕಿಂಗ್ ನ್ಯೂಸ್
29-11-24 11:09 pm Udupi Correspondent ಕರಾವಳಿ
ಉಡುಪಿ, ನ.29: ಪತಿ- ಪತ್ನಿ ಒಂದೇ ದಿನದ ಅಂತರದಲ್ಲಿ ಸಾವನ್ನಪ್ಪಿದ ದುರಂತ ಘಟನೆ ಉದ್ಯಾವರದಲ್ಲಿ ನಡೆದಿದ್ದು, ಕುಟುಂಬಸ್ಥರು ಶಾಕ್ ಆಗಿದ್ದಾರೆ.
ಉದ್ಯಾವರ ಗ್ರಾಪಂ ಸದಸ್ಯರೂ ಆಗಿರುವ ಲಾರೆನ್ಸ್ ಡೇಸಾ (60) ಮತ್ತು ಅವರ ಪತ್ನಿ ಸರಕಾರಿ ಶಾಲಾ ಶಿಕ್ಷಕಿ ಜೂಲಿಯಾನ ಡೇಸಾ (57) ಮೃತಪಟ್ಟವರು. ಜೂಲಿಯಾನ ಅವರು ನ.28ರ ಗುರುವಾರ ಬೆಳಗ್ಗೆ ಮನೆಯಲ್ಲಿದ್ದಾಗ ಅನಾರೋಗ್ಯಕ್ಕೀಡಾಗಿದ್ದರು. ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಇರಿಸಲಾಗಿತ್ತು. ಆನಂತರ, ಲಾರೆನ್ಸ್ ಡೇಸಾ ಅವರೂ ಅನಾರೋಗ್ಯಕ್ಕೆ ತುತ್ತಾಗಿದ್ದು ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂಲಿಯಾನ ಗುರುವಾರ ಸಂಜೆ ಮೃತಪಟ್ಟರೆ, ಲಾರೆನ್ಸ್ ಶುಕ್ರವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಆಮೂಲಕ ಪತಿ- ಪತ್ನಿ ಇಬ್ಬರೂ ನ.28 ಮತ್ತು 29ರಂದು ಕೆಲವೇ ಗಂಟೆಗಳ ಅಂತರದಲ್ಲಿ ಸಾವು ಕಂಡಿದ್ದಾರೆ. ಉದ್ಯಾವರ ಗ್ರಾಪಂನಲ್ಲಿ ಹಿರಿಯ ಸದಸ್ಯರಾಗಿದ್ದ ಲಾರೆನ್ಸ್ ಡೇಸಾ ಉದ್ಯಾವರ ಚರ್ಚ್ ಕಮಿಟಿಯಲ್ಲಿ ಉಪಾಧ್ಯಕ್ಷರಾಗಿದ್ದರು. ಜೂಲಿಯಾನ ಅವರು ಬೈಲೂರಿನ ಸರ್ಕಾರಿ ಶಾಲೆ, ಉದ್ಯಾವರ ಫ್ರಾನ್ಸಿಸ್ ಕ್ಸೇವಿಯರ್ ಹೈಯರ್ ಸ್ಕೂಲ್ ಸೇರಿದಂತೆ ಕಾರ್ಕಳ ಆಸುಪಾಸಿನ ಶಾಲೆಗಳಲ್ಲಿ ಶಿಕ್ಷಕಿಯಾಗಿದ್ದರು.
ನ.28ರಂದು ಜೂಲಿಯಾನ ಅವರ ಮಗಳು ಬೆಂಗಳೂರಿನಿಂದ ಮನೆಗೆ ಬಂದಿದ್ದರು. ಈ ವೇಳೆ, ತಾಯಿ ಅನಾರೋಗ್ಯಕ್ಕೀಡಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ದಂಪತಿ ಮಗ ಮತ್ತು ಪುತ್ರಿಯನ್ನು ಅಗಲಿದ್ದಾರೆ.
In a tragic incident, a couple from Udyavar passed away within a day's gap. Lawrence D'Sa, vice president of the Udyavar parish pastoral committee, and his wife Juliana D'Sa, a government primary school teacher are the deceased.
03-06-26 10:19 pm
Mangaluru Staffer
ಡಿಕೆ ಯುಗಾರಂಭ ; ಎಲ್ಲಾ ಶಾಲಾ - ಕಾಲೇಜು ವಿದ್ಯಾರ್ಥಿ...
03-06-26 09:19 pm
DK Shivakumar New CM, 2026: ರಾಜ್ಯದಲ್ಲಿ ಡಿಕೆಶಿ...
03-06-26 05:41 pm
29ನೇ ಹರೆಯದಲ್ಲೇ ಸಚಿವ, ಬಂಗಾರಪ್ಪ- ಎಸ್ಸೆಂ ಕೃಷ್ಣ ಗ...
03-06-26 03:51 pm
ಕೆಪಿಸಿಸಿ ಸಾರಥ್ಯ ಬಿಕೆ ಹರಿಪ್ರಸಾದ್ಗೆ ! ಸಚಿವ ಸ್ಥ...
03-06-26 03:38 pm
03-06-26 09:17 pm
HK News Staffer
ನೀಟ್, ಸಿಬಿಎಸ್ಇ ಪರೀಕ್ಷೆ ಅಕ್ರಮ; ಸಚಿವ ಧರ್ಮೇಂದ್ರ...
02-06-26 10:40 am
ನಟ ವಿಜಯ್ ಹಾದಿಯಲ್ಲೇ ಅಣ್ಣಾಮಲೈ ! ಬಿಜೆಪಿ ಬಿಟ್ಟು ದ...
02-06-26 10:01 am
ಪ್ರಧಾನಿ ಮೋದಿ ಕರೆ ಎಫೆಕ್ಟ್ ; ದೇಶಾದ್ಯಂತ ಚಿನ್ನ ಖರ...
31-05-26 09:25 pm
ಸೌದಿ ಜೈಲಿನಲ್ಲಿ ಎರಡು ದಶಕಗಳ ಅಗ್ನಿಪರೀಕ್ಷೆ; 34 ಕೋ...
29-05-26 06:17 pm
02-06-26 04:18 pm
HK News Staffer
Mithun Rai, Dk Shivakumar CM, Mangalore: ಮುಂದ...
02-06-26 01:18 pm
Ut Khader, Mangalore: ಡಿಸಿಎಂ ಆಗೋದು ಮಾಧ್ಯಮದಲ್ಲ...
02-06-26 01:06 pm
Ivan Dsouza, Congress: ಐವಾನ್ ಡಿಸೋಜಗೆ ಸಚಿವ ಸ್ಥ...
01-06-26 07:05 pm
ಬೆಂಗಳೂರು–ಮಂಗಳೂರು ವಂದೇ ಭಾರತ್ ಟ್ರಯಲ್ಗೆ ಬ್ರೇಕ್...
01-06-26 02:22 pm
02-06-26 09:27 pm
HK News Staffer
Mangalore Robbery, Forest Jeep: ಅರಣ್ಯ ಇಲಾಖೆಯ...
02-06-26 02:58 pm
ಶಿರೂರಿನ ಹೊಳೆಯಲ್ಲಿ ಮುಳುಗಿ 16 ವರ್ಷದ ವಿದ್ಯಾರ್ಥಿ...
01-06-26 08:16 pm
ಪಿಲಾತಬೆಟ್ಟು ; ದೈವಕ್ಕೆ ತಂಬಿಲ ಮಾಡ್ತಿದ್ದಾಗಲೇ ಕುಡ...
01-06-26 12:40 pm
ನಾಲ್ಕು ಪುಟಗಳ ಡೆತ್ನೋಟ್ ಬರೆದಿಟ್ಟು ಲಾಡ್ಜ್ನಲ್ಲಿ...
31-05-26 08:25 pm