ಫೆಂಗಲ್ ಚಂಡಮಾರುತಕ್ಕೆ ಕರಾವಳಿ ತತ್ತರ, ಎಂಟು ಜಿಲ್ಲೆಗಳಲ್ಲಿ ರಜೆ ಘೋಷಣೆ, ಕೇರಳದಲ್ಲಿ ರೆಡ್ ಅಲರ್ಟ್, ಬಂಗಾಳ ಕೊಲ್ಲಿಯಿಂದ ಅರಬ್ಬಿ ಸಮುದ್ರದತ್ತ ಮಾರುತ ! 

03-12-24 12:06 pm       Mangalore Correspondent   ಕರಾವಳಿ

ಫೆಂಗಲ್ ಚಂಡಮಾರುತದ ಪ್ರಭಾವ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ತಟ್ಟಿದ್ದು ನಿನ್ನೆ ಸಂಜೆಯಿಂದ ರಾತ್ರಿಯಿಡೀ ಭಾರೀ ಮಳೆಯಾಗಿದೆ. ರಾಜ್ಯದಲ್ಲಿ ಎಂಟು ಜಿಲ್ಲೆಗಳಲ್ಲಿ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಸನ, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಿಡಿಲು ಸಹಿತ ಭಾರೀ ಮಳೆ ಸುರಿದಿದೆ. 

ಮಂಗಳೂರು, ಡಿ.3: ಫೆಂಗಲ್ ಚಂಡಮಾರುತದ ಪ್ರಭಾವ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ತಟ್ಟಿದ್ದು ನಿನ್ನೆ ಸಂಜೆಯಿಂದ ರಾತ್ರಿಯಿಡೀ ಭಾರೀ ಮಳೆಯಾಗಿದೆ. ರಾಜ್ಯದಲ್ಲಿ ಎಂಟು ಜಿಲ್ಲೆಗಳಲ್ಲಿ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಸನ, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಿಡಿಲು ಸಹಿತ ಭಾರೀ ಮಳೆ ಸುರಿದಿದೆ. 

ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರಾತ್ರಿಯಿಡೀ ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ, ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮಂಗಳವಾರ ಇಡೀ ದಿನ ಸಾಧಾರಣ ಮಳೆಯಾಗಲಿದ್ದು ಬುಧವಾರ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ. 

Cyclone Fengal: Puducherry sees record rain, schools shut; Weakened storm  heads to K'taka, Kerala | Key points | Latest News India - Hindustan Times

Cyclone Fengal threatens to re-emerge over the Arabian Sea; Kerala and  Karnataka brace for intense

Cyclone Fengal Disrupts Life in Karnataka, Holidays Declared for Schools  and Colleges in Multiple Districts | The Hindustan Gazette

Cyclone Fengal: Flooded roads, traffic bottleneck, treefalls in Bengaluru -  The Hindu

ಮಂಗಳೂರು ಹೊರವಲಯದ ಏರ್ಪೋರ್ಟ್ ಬಳಿಯ ಅದ್ಯಪಾಡಿಯಲ್ಲಿ ರನ್ ವೇಯಿಂದ ಮಳೆ ನೀರು ಹರಿದು ಕೆಳಭಾಗದ ಉಮಾನಾಥ ಸಾಲ್ಯಾನ್ ಎಂಬವರ ಮನೆಗೆ ನೀರು ನುಗ್ಗಿದೆ. ಮನೆಯ ಅಂಗಳದಲ್ಲಿ ಪೂರ್ತಿಯಾಗಿ ಮಣ್ಣು ಬಿದ್ದಿದೆ. ಬಜ್ಪೆ - ಅದ್ಯಪಾಡಿ ಸಂಪರ್ಕ ರಸ್ತೆಯ ಮೇಲೂ ಕೆಸರು ಮಣ್ಣು ಬಿದ್ದು ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ಮಂಗಳೂರಿನ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು ಜನರು ಬೆಳ್ಳಂಬೆಳಗ್ಗೆ ಕಷ್ಟ ಅನುಭವಿಸಿದ್ದಾರೆ. 

ಉಡುಪಿಯಲ್ಲಿ ಬೈಂದೂರು, ಕುಂದಾಪುರ, ಹಾಲಾಡಿ, ಹೆಬ್ರಿ, ಕಾರ್ಕಳ, ಕೋಟ, ಸಾಲಿಗ್ರಾಮ, ಉಪ್ಪೂರು, ಬ್ರಹ್ಮಾವರ, ಹಿರಿಯಡ್ಕ, ಕಾಪು, ಕಟಪಾಡಿ, ಪಡುಬಿದ್ರಿ ಭಾಗದಲ್ಲಿ ಭಾರೀ ಮಳೆಯಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಮಲ್ಪೆ ಬಂದರಿನಲ್ಲಿ ಬೋಟ್ಗಳು ಲಂಗರು ಹಾಕಿವೆ. ಮಂಗಳೂರು, ಉಡುಪಿ ಭಾಗದಲ್ಲಿ 20 ಸೆ.ಮೀ. ಹೆಚ್ಚು ಮಳೆಯಾಗಿದೆ. ಮಂಗಳೂರು 22, ಕಾರ್ಕಳ 26, ಕಾಪು ಹೆಜ್ಮಾಡಿಯಲ್ಲಿ 23 ಸೆ.ಮೀ ಮಳೆಯಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. 

ತಮಿಳುನಾಡು ಕಡೆಯಿಂದ ದಕ್ಷಿಣ ಕರ್ನಾಟಕ, ಉತ್ತರ ಕೇರಳದ ಮೂಲಕ ಅರಬ್ಬಿ ಸಮುದ್ರದತ್ತ ಚಂಡಮಾರುತ ಹಾದು ಹೋಗಿರುವ ಚಿತ್ರಣವನ್ನು ಹವಾಮಾನ ಇಲಾಖೆ ನೀಡಿದೆ. ಇದರ ಪರಿಣಾಮವಾಗಿ ಕರಾವಳಿ ಪ್ರದೇಶದಲ್ಲಿ ಮಳೆಯಾಗುತ್ತಿದೆ‌. ಉತ್ತರ ಕೇರಳದ ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಮಂಗಳೂರು ದಕ್ಕೆಯಲ್ಲಿ ನಿಲ್ಲಿಸಿದ್ದ ಪರ್ಶಿನ್ ಬೋಟ್ ಗಳಿಗೂ ಹಾನಿಯಾಗಿದೆ. ಚಂಡಮಾರುತದ ಅಬ್ಬರಕ್ಕೆ 10ಕ್ಕೂ ಹೆಚ್ಚು ಬೋಟ್ ನೀರುಪಾಲಾಗಿದೆ.‌

Cyclone Fengal, Torrential rains put Kerala Karnataka on edge, 
Five districts of Karnataka locks down its schools. Cyclone Fengal, now weakened into a low-pressure area, continues to wreak havoc with heavy rainfall and disruptions across south India. The India Meteorological Department (IMD) has warned of intensified rainfall in Kerala as the system shifts toward the Arabian Sea near the Kerala and Karnataka coasts by December 3.