Mangalore Singapore flight: ಜ.21ರಿಂದ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ; ಗಲ್ಫ್ ರಾಷ್ಟ್ರಕ್ಕೆ ಸೀಮಿತವಾಗಿದ್ದ ಕರಾವಳಿಗೆ ಹೊಸ ಹಾದಿ

12-12-24 08:40 pm       Mangalore Correspondent   ಕರಾವಳಿ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಂಗಾಪುರಕ್ಕೆ ನೇರ ವಿಮಾನ ಸೇವೆ ಆರಂಭಗೊಂಡಿದೆ. 2025ರ ಜನವರಿ 21ರಿಂದ ಏರ್ ಇಂಡಿಯಾ ಈ ಹೊಸ ಸೇವೆಯನ್ನು ಆರಂಭಿಸಲಿದ್ದು, ಆಮೂಲಕ ಸೌದಿ, ಗಲ್ಫ್ ರಾಷ್ಟ್ರಕ್ಕೆ ಬಿಟ್ಟರೆ ಸೌತ್ ಏಷ್ಯಾದ ಮತ್ತೊಂದು ರಾಷ್ಟ್ರಕ್ಕೆ ಮಂಗಳೂರಿನಿಂದ ನೇರ ವಿಮಾನ ಆರಂಭಗೊಂಡಂತಾಗಿದೆ.

ಮಂಗಳೂರು, ಡಿ.12: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಂಗಾಪುರಕ್ಕೆ ನೇರ ವಿಮಾನ ಸೇವೆ ಆರಂಭಗೊಂಡಿದೆ. 2025ರ ಜನವರಿ 21ರಿಂದ ಏರ್ ಇಂಡಿಯಾ ಈ ಹೊಸ ಸೇವೆಯನ್ನು ಆರಂಭಿಸಲಿದ್ದು, ಆಮೂಲಕ ಸೌದಿ, ಗಲ್ಫ್ ರಾಷ್ಟ್ರಕ್ಕೆ ಬಿಟ್ಟರೆ ಸೌತ್ ಏಷ್ಯಾದ ಮತ್ತೊಂದು ರಾಷ್ಟ್ರಕ್ಕೆ ಮಂಗಳೂರಿನಿಂದ ನೇರ ವಿಮಾನ ಆರಂಭಗೊಂಡಂತಾಗಿದೆ.

ಇದೇ ವೇಳೆ, ರಾಜಧಾನಿ ದೆಹಲಿ ಮತ್ತು ಮಹಾರಾಷ್ಟ್ರದ ಪುಣೆಗೂ ಮಂಗಳೂರಿನಿಂದ ಮತ್ತೆರಡು ವಿಮಾನ ಸೇವೆ ಆರಂಭಿಸಲಾಗಿದೆ. ಜನವರಿ 2ರಿಂದ ಪುಣೆಗೆ ಇಂಡಿಗೋ ವಿಮಾನ ಹಾರಾಡಲಿದ್ದು, ವಾರದಲ್ಲಿ ಮೂರು ಬಾರಿ ಸೇವೆ ಇರಲಿದೆ. ಇದಲ್ಲದೆ, ದೆಹಲಿಗೆ ಮತ್ತೊಂದು ಇಂಡಿಗೋ ವಿಮಾನ ಡೈಲಿ ಸೇವೆಗೆ ಮುಂದಾಗಿದೆ. ಈಗಾಗಲೇ ಪ್ರತಿದಿನ ಸಂಜೆ ದೆಹಲಿಗೆ ಇಂಡಿಗೋ ವಿಮಾನವಿದ್ದು, ಫೆ.1ರಿಂದ ಮತ್ತೊಂದು ವಿಮಾನ ಹಾರಲಿದೆ.

ಸಿಂಗಾಪುರಕ್ಕೆ ತೆರಳುವ ಏರ್ ಇಂಡಿಯಾ ವಿಮಾನವು ವಯಾ ದೆಹಲಿ ಮೂಲಕ ತೆರಳಲಿದ್ದು, ಆಮೂಲಕ ಬೆಳಗ್ಗೆ ಮತ್ತು ಸಂಜೆ ದೆಹಲಿಗೆ ಮಂಗಳೂರಿನಿಂದ ನೇರ ವಿಮಾನ ಸೇವೆ ಸಿಕ್ಕಂತಾಗಿದೆ. ಇದರಿಂದ ವ್ಯವಹಾರ ನಿಮಿತ್ತ ದೆಹಲಿ, ಸಿಂಗಾಪುರಕ್ಕೆ ಪ್ರಯಾಣಿಸುವವರಿಗೆ ಉತ್ತಮ ಸೇವೆ ಸಿಗಲಿದೆ. ಮಂಗಳೂರಿನಿಂದ ಸಿಂಗಾಪುರಕ್ಕೆ ಬೆಳಗ್ಗೆ 5.55ಕ್ಕೆ ವಿಮಾನ ಹೊರಡಲಿದ್ದು, ಮಧ್ಯಾಹ್ನ 1.25ಕ್ಕೆ(ಅಲ್ಲಿನ ಸಮಯ) ಸಿಂಗಾಪುರ ತಲುಪಲಿದೆ. ಸಿಂಗಾಪುರದಿಂದ ಮಧ್ಯಾಹ್ನ 2.25ಕ್ಕೆ ಹೊರಟು ಸಂಜೆ 4.55ಕ್ಕೆ ಮಂಗಳೂರು ತಲುಪಲಿದೆ ಎಂದು ಮಂಗಳೂರು ಏರ್ಪೋರ್ಟ್ ಪ್ರಕಟಣೆ ತಿಳಿಸಿದೆ.

ವಿದೇಶಿ ವಿಮಾನಗಳು ಮಂಗಳೂರಿಗೆ ಬರಲ್ಲ

ಮಂಗಳೂರು ವಿಮಾನ ನಿಲ್ದಾಣವು ಟೇಬಲ್ ಟಾಪ್ ಅಂದರೆ, ಎತ್ತರದ ಗುಡ್ಡ ಪ್ರದೇಶದಲ್ಲಿರುವುದರಿಂದ ದೊಡ್ಡ ಗಾತ್ರದ ವಿದೇಶಿ ವಿಮಾನಗಳು ಬರುವುದಿಲ್ಲ. ಇಲ್ಲಿ ಲ್ಯಾಂಡ್ ಆಗುವುದು ಕಷ್ಟವಾಗಿದ್ದರಿಂದ ಪರಿಣತ ಪೈಲಟ್ಗಳು ಮಾತ್ರ ಮಂಗಳೂರಿನಲ್ಲಿ ವಿಮಾನ ಇಳಿಸುತ್ತಾರೆ. ಬೋಯಿಂಗ್ ಮಾದರಿಯ ದೊಡ್ಡ ವಿಮಾನಗಳು ಮಂಗಳೂರಿಗೆ ಬರುವುದಕ್ಕೆ ನಿರಾಕರಿಸುತ್ತವೆ. ಹೀಗಾಗಿ ವಿದೇಶಕ್ಕೆ ನೇರ ವಿಮಾನ ಯಾನ ಸವಾಲಾಗಿದ್ದು, ಕೇವಲ ಭಾರತದ ಇಂಡಿಗೋ ಮತ್ತು ಏರ್ ಇಂಡಿಯಾ ಮಾತ್ರ ಮಂಗಳೂರಿನಿಂದ ಬೇರೆ ಕಡೆಗಳಿಗೆ ವಿಮಾನ ಸೇವೆ ನೀಡುತ್ತಿದೆ. ಬಜ್ಪೆ ಬದಲು ಕೊಣಾಜೆ ಇನ್ನಿತರ ಭಾಗದಲ್ಲಿ ಏರ್ಪೋರ್ಟ್ ಇರುತ್ತಿದ್ದರೆ, ಈಗಾಗಲೇ ವಿದೇಶಿ ವಿಮಾನಗಳು ಬರುತ್ತಿದ್ದವು. ಬೆಂಗಳೂರು ಮಾದರಿಯಲ್ಲಿ ಏರ್ಪೋರ್ಟ್ ಹೆಚ್ಚು ಅಭಿವೃದ್ಧಿಯೂ ಆಗುತ್ತಿತ್ತು ಎನ್ನುವುದು ಪ್ರಯಾಣಿಕರ ಅಭಿಮತ.

In a major boost to international air connectivity, Mangaluru International Airport is set to connect to its first-ever Southeast Asian destination with direct flights to Singapore starting January 21, 2025. Operated by Air India Express.