ಬ್ರೇಕಿಂಗ್ ನ್ಯೂಸ್
17-01-25 10:58 pm Mangalore Correspondent ಕರಾವಳಿ
ಮಂಗಳೂರು, ಜ 17: ಬಾಲಕಿಯ ಅತ್ಯಾಚಾರಗೈದು, ವಿಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡಿದ ಪ್ರಕರಣದಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್ಸಿ-2 ಫೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿಯ ಅಶ್ವಥ್ (22) ಶಿಕ್ಷೆಗೊಳಗಾದ ಅಪರಾಧಿ.
ಈ ಪ್ರಕರಣದ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಆರೋಪಿ ಅಶ್ವಥ್ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯಿಸಿಕೊಂಡು ಸ್ನೇಹ ಬೆಳೆಸಿದ್ದ. ಈತ ಬಾಲಕಿಯನ್ನು ಪುಸಲಾಯಿಸಿ 2023 ಮಾರ್ಚ್ 15 ರಂದು ಬೆಳಿಗ್ಗೆ 10 ಗಂಟೆಗೆ ಮುಲ್ಕಿ ಬಸ್ ನಿಲ್ದಾಣದಿಂದ ಬೈಕ್ನಲ್ಲಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿದ್ದಾನೆ.
ಬಳಿಕ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಸಾಯಿ ಸಾಗರ್ ಬೋರ್ಡಿಂಗ್ ಮತ್ತು ಲಾಡ್ಜ್ಗೆ ಕರೆದುಕೊಂಡು ಹೋಗಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಆರೋಪಿಯು ಬಾಲಕಿಯ ಮೇಲೆ ಅತ್ಯಾಚಾರ ಮಾಡುವ ವೇಳೆ ಆಕೆಯ ಮೊಬೈಲ್ ಫೋನ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಬಳಿಕ ವಿಡಿಯೋ ರೆಕಾರ್ಡ್ ಅನ್ನು ತನ್ನ ಮೊಬೈಲ್‌ಗೆ ವರ್ಗಾಯಿಸಿ ಇದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇತರರಿಗೆ ಶೇರ್ ಮಾಡಿದ್ದಾನೆ.
ನಂತರ ಈ ವಿಡಿಯೋ ಬಾಲಕಿಯ ತಂದೆಗೂ ಸಹ ಸಿಕ್ಕಿದ್ದು, ಈ ಬಗ್ಗೆ ಬಾಲಕಿಯ ತಂದೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮುಲ್ಕಿ ಪೊಲೀಸ್ ನಿರೀಕ್ಷಕರಾದ ವಿದ್ಯಾಧರ್ ಡಿ ಬಾಯ್ಕೆರಿಕರ್ ಅವರು ತನಿಖೆ ಪೂರ್ಣಗೊಳಿಸಿ ಆರೋಪಿಯ ವಿರುದ್ಧ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣವು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್ಸಿ-2 ಫೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 24 ಸಾಕ್ಷಿದಾರರನ್ನು ವಿಚಾರಿಸಲಾಗಿತ್ತು ಮತ್ತು 49 ದಾಖಲೆಗಳನ್ನು ಗುರುತಿಸಲಾಗಿತ್ತು. ಈ ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿಯ ವಿರುದ್ಧ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್ಸಿ-2 ಫೋಕ್ಸೋ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಮಾನು ಕೆ. ಎಸ್. ಅವರು ಆರೋಪಿ ಅಶ್ವಥ್ಗೆ ಅತ್ಯಾಚಾರ ಮಾಡಿದ ಅಪರಾಧಕ್ಕೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಫೋಕ್ಸೋ ಕಾಯ್ದೆಯಂತೆ ಎರಡು ವರ್ಷಗಳ ಕಾಲ ಸಾದಾ ಶಿಕ್ಷೆ ಮತ್ತು ಐದು ಸಾವಿರ ರೂ ದಂಡ, ಭಾರತೀಯ ದಂಡ ಸಂಹಿತೆಯ ಕಲಂ 363 ರಡಿ 3 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು ಐದು ಸಾವಿರ ರೂ ದಂಡ ಮತ್ತು ಕಲಂ 67(ಬಿ) ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ 3 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 40 ಸಾವಿರ ರೂ ದಂಡ ಹಾಗೂ ದಂಡದ ಹಣವಾದ 1 ಲಕ್ಷ ರೂ ಹಣವನ್ನು ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯವು ಆದೇಶಿಸಿದೆ. ಅಲ್ಲದೆ ಸಂತ್ರಸ್ತರ ಪರಿಹಾರ ಯೋಜನೆ ಅಡಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 4 ಲಕ್ಷ ರೂ ಪರಿಹಾರವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಲಾಗಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಆದ ಕೆ. ಬದರಿನಾಥ ನಾಯರಿ ವಾದ ಮಂಡಿಸಿದ್ದರು.
Rape accused sentenced to 20 year of jail imprisonment by Mangalore court for raping minor girl in lodge after both met on Instagram.
16-01-25 05:30 pm
HK News Desk
Sp Belagavi, Minister Laxmi Hebbalkar car acc...
15-01-25 09:17 pm
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
16-01-25 09:01 pm
HK News Desk
Actor Saif Ali Khan attack stabbed: ಬಾಲಿವುಡ್...
16-01-25 04:24 pm
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
ಮಹಾ ಕುಂಭ ಮೇಳಕ್ಕೆ ಗೂಗಲ್ ಪುಷ್ಪ ವೃಷ್ಟಿ ! ಮೊಬೈಲ್...
14-01-25 07:18 pm
17-01-25 11:10 pm
Mangalore Correspondent
Mangalore court, Rape, Crime: ಇನ್ಸ್ಟಾಗ್ರಾಮ್ ನ...
17-01-25 10:58 pm
Ullal News, Mangalore: ಸೋಮೇಶ್ವರ ; ಬಾಡಿಗೆ ಮನೆಯ...
17-01-25 10:50 pm
Mangalore Koteker Bank Robbery, MP Brijesh Ch...
17-01-25 10:36 pm
CM Siddaramaiah, RGUHS Mangalore; ರಾಜೀವ ಗಾಂಧಿ...
17-01-25 07:42 pm
17-01-25 07:58 pm
Mangaluru Correspondent
Kotekar Bank Robbery, Mangalore Crime; ಬೀದರ್...
17-01-25 03:02 pm
Bidar SBI Bank Robbery Update, Hyderabad Firi...
17-01-25 02:48 pm
Bidar SBI Bank Robbery; ಬೀದರ್; ATM ಹಣಹಾಕಲು ಬಂ...
16-01-25 03:10 pm
Fake Stock Market scam, Mangalore, Police: ನಕ...
15-01-25 11:06 pm