ಬ್ರೇಕಿಂಗ್ ನ್ಯೂಸ್
30-01-25 12:32 pm Giridhar Shetty, Mangaluru ಕರಾವಳಿ
ಮಂಗಳೂರು, ಜ.30: ಜನಪ್ರತಿನಿಧಿಗಳು, ಅಧಿಕಾರಿಗಳು ಜೊತೆಗೂಡಿ ಸುಲಿಗೆ ಮಾಡಲು ನಿಂತರೆ ಬೇರೇನು ಆಗತ್ತೆ ಹೇಳಿ. ಮಂಗಳೂರು- ಮೂಡುಬಿದ್ರೆ ಹೆದ್ದಾರಿ ಕಾಮಗಾರಿಯ ಕತೆ, ಅಧ್ವಾನವೇ ಆಗಿಬಿಟ್ಟಿದೆ. ಒಂದ್ಕಡೆ ತಿರುವು ಮುರುವು ರಸ್ತೆ, ಮತ್ತೊಂದ್ಕಡೆ ಗುತ್ತಿಗೆದಾರನ ದರ್ಪ, ಸೋಗಲಾಡಿತನಕ್ಕೆ ಜನರು ಹೈರಾಣಾಗಿದ್ದಾರೆ. ಅಧ್ವಾನ ಎಷ್ಟರ ಮಟ್ಟಿಗೆ ಅಂದ್ರೆ, ಹೆದ್ದಾರಿ ನಡುವಲ್ಲೇ ಅಕ್ರಮ ಕಲ್ಲುಕೋರೆಯನ್ನೇ ನಡೆಸುತ್ತಿದ್ದಾರೆ. ಹಗಲು ದರೋಡೆ ಎನ್ನುವುದು ಇಲ್ಲಿ ಖುಲ್ಲಂ ಖುಲ್ಲಾ..!
ಗಂಜಿಮಠದಿಂದ ಎಡಪದವು ಇಳಿಜಾರು ಇಳಿಯುವ ಮೊದಲೇ ಹೆದ್ದಾರಿ ನಡುವಲ್ಲೇ ಕೆಂಪು ಕಲ್ಲು ಕಡಿಯುತ್ತಿದ್ದಾರೆ. ಅಂದಾಜು ಎರಡು ಎಕರೆ ಜಾಗದಲ್ಲಿ ನಡುರಸ್ತೆಯಲ್ಲೇ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಇದನ್ನು ಪ್ರಶ್ನಿಸಿದ ಸ್ಥಳೀಯರಿಗೆ ಗುತ್ತಿಗೆ ಕಂಪನಿ ಅಧಿಕಾರಿಗಳು ಆವಾಜ್ ಹಾಕುತ್ತಿದ್ದಾರೆ. ನಾವು ಬೆಂಗಳೂರಿಗೆ ಗಣಿ ಇಲಾಖೆ ಅಧಿಕಾರಿಗೆ ತಿಂಗಳಿಗೆ 20 ಸಾವಿರ ರಾಯಲ್ಟಿ ಕಟ್ಟುತ್ತಿದ್ದೇವೆ, ಬೇಕಿದ್ದರೆ ಕೇಳಿ ನೋಡಿ ಎಂದು ಕನ್ನಡ ತಿಳಿಯದ ಇಂಜಿನಿಯರೊಬ್ಬ ದರ್ಪ ತೋರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಸ್ಥಳೀಯರ ಪ್ರಕಾರ, ಅಲ್ಲಿಂದ ದಿನವೂ 10-15 ಲಾರಿಗಳಲ್ಲಿ ಕೆಂಪು ಕಲ್ಲುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆಯಂತೆ. ಮೆಷಿನ್ ಬಳಸಿ ಹೆದ್ದಾರಿ ನಡುವೆ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಗಣಿಗಾರಿಕೆ ನಡೆಸುವಂತಿಲ್ಲ..!
ಈ ಬಗ್ಗೆ ಗಣಿ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರಲ್ಲಿ ಕೇಳಿದಾಗ, ಯಾವುದೇ ಕಾರಣಕ್ಕೂ ಹೆದ್ದಾರಿ ನಡುವೆ ಕಲ್ಲಿನ ಕೋರೆ ನಡೆಸುವಂತಿಲ್ಲ. ಬಂಡೆ ಕಲ್ಲನ್ನು ಒಡೆದರೂ, ಅದನ್ನು ಹೆದ್ದಾರಿ ಕೆಲಸಕ್ಕೆ ಮಾತ್ರ ಬಳಸಿಕೊಳ್ಳಲು ಅವಕಾಶ ಇದೆ. ಅದನ್ನು ವ್ಯಾಪಾರ ಮಾಡಲು ಅವಕಾಶ ಇಲ್ಲ. ಕೆಂಪು ಕಲ್ಲು ಕಡಿದರೂ ಗಣಿ ಇಲಾಖೆಗೇ ಬಿಟ್ಟು ಕೊಡಬೇಕು ಎಂದಿದ್ದಾರೆ. ಮಂಗಳೂರಿನ ಗಣಿ ಇಲಾಖೆಯಲ್ಲಿ ಹಿರಿಯ ಭೂ ವಿಜ್ಞಾನಿ ಆಗಿರುವ ಕೃಷ್ಣವೇಣಿ ಬಳಿ ಈ ಬಗ್ಗೆ ಪ್ರಶ್ನೆ ಮಾಡಿದಾಗ, ಅಲ್ಲಿ ಕೆಂಪು ಕಲ್ಲು ತೆಗೆಯುವುದಕ್ಕೆ ಪರವಾನಗಿ ಕೇಳಿದ್ದಾರೆ, ನಾವು ಲೈಸನ್ಸ್ ಕೊಟ್ಟಿಲ್ಲ. ಕೆಂಪು ಕಲ್ಲನ್ನು ತೆಗೆದರೂ ತಮ್ಮದೇ ಕೆಲಸಕ್ಕೆ ಬಳಸಿಕೊಳ್ಳಬಹುದು. ಹೊರಗೆ ಮಾರಾಟ ಮಾಡುವ ಹಾಗಿಲ್ಲ. ನಾನು ಭೇಟಿ ಕೊಟ್ಟು ನೋಡುತ್ತೇನೆ ಎಂದಿದ್ದಾರೆ.
ಸದ್ಯಕ್ಕೆ ಸಂಸದರು ಬದಲಾಗಿದ್ದಾರೆ, ಹೆದ್ದಾರಿ ಕಾಮಗಾರಿಗೆ ಚುರುಕು ಸಿಗಬಹುದು ಅನ್ನುವ ನಿರೀಕ್ಷೆ ಒಂದ್ಕಡೆಯಿತ್ತು. ಆದರೆ ಮೂಡುಬಿದ್ರೆ ಹೆದ್ದಾರಿಗೆ ಗ್ರಹಣವೇ ಬಡಿದು ಹೋಗಿದೆ. ಅಲ್ಲಲ್ಲಿ ರಸ್ತೆ ಅಗೆದು ಅನಗತ್ಯ ಎನ್ನುವ ಕಡೆಯೂ ಮೇಲ್ಸೇತುವೆಗೆ ಪಿಲ್ಲರ್ ಹಾಕಿದ್ದಾರೆ. ವರ್ಷ ಕಳೆದರೂ ಪಿಲ್ಲರ್ ಅಷ್ಟೇ ಉಳಿದುಬಿಟ್ಟಿರುವುದು ವ್ಯವಸ್ಥೆಯ ಅಣಕವಾಗಿ ಕಾಣುತ್ತಿದೆ. ಅರೆಬರೆ ಕಾಮಗಾರಿಯಿಂದಾಗಿ ವಾಹನ ಚಾಲನೆಯೇ ಸಾಹಸ ಎನ್ನುವಂತಾಗಿದೆ. ಗುರುಪುರದಲ್ಲಿ ಖಾಸಗಿ ಗುತ್ತಿಗೆದಾರನಿಗೆ ಕೊಟ್ಟು ನೂರು ಮೀಟರ್ ಅಂತರದಲ್ಲಿ ಪ್ರತ್ಯೇಕ ಸೇತುವೆಯನ್ನೇ ಕಟ್ಟಿದ್ದಾರೆ. ಹೆದ್ದಾರಿಯನ್ನು ಎತ್ತಲೋ ತಿರುಗಿಸಿ 5 ಕಿಮೀ ಉದ್ದಕ್ಕೆ ಬೈಪಾಸ್ ರಸ್ತೆ ಮಾಡುವುದಾಗಿ ಹೇಳಿ ಜನರನ್ನು ಯಾಮಾರಿಸುತ್ತಿದ್ದಾರೆ. ಕೆತ್ತಿಕಲ್ ಭಾಗದಲ್ಲಿ ಮಳೆಗಾಲದಲ್ಲಿ ಗುಡ್ಡ ಕುಸಿದು ಜಾರುತ್ತಿದ್ದರೂ, ಮತ್ತೆ ಅದೇ ಗುಡ್ಡವನ್ನು ಅಗೆದು ಕಾಂಕ್ರೀಟ್ ತಡೆಗೋಡೆ ಕಟ್ಟುತ್ತಿದ್ದಾರೆ. ಮುಂದಿನ ಮಳೆಗಾಲಕ್ಕೆ ಇಲ್ಲಿನ ಗುಡ್ಡ ಪೂರ್ತಿ ಕುಸಿದು ಹೋದರೂ, ಅಧಿಕಾರಸ್ಥರಿಗೆ ಚಿಂತೆ ಇಲ್ಲ. ಕಳೆದ ಬಾರಿ ಉಸ್ತುವಾರಿ ಸಚಿವರಿಂದ ತೊಡಗಿ ಎಲ್ಲ ಬಂದು ವೀಕ್ಷಣೆ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ.
ಇದು ಚಿನ್ನ ಲೇಪನದ ರಸ್ತೆಯಂತೆ !
ಮಂಗಳೂರಿನ ಕುಲಶೇಖರದಿಂದ ಕಾರ್ಕಳದ ಸಾಣೂರು ವರೆಗಿನ 45 ಕಿಮೀ ಉದ್ದದ ಹೆದ್ದಾರಿ ಕಾಮಗಾರಿಯನ್ನು 2020ರಲ್ಲಿ ಡಿಬಿಎಲ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. 1137 ಕೋಟಿ ಮೊತ್ತದ ಯೋಜನೆಯಾಗಿದ್ದು, ಅಂದಾಜು ಒಂದು ಕಿಮೀ ಹೆದ್ದಾರಿ ಖರ್ಚು 26 ಕೋಟಿಯಷ್ಟಾಗುತ್ತದೆ. ಅಂದ್ರೆ, ಚಿನ್ನ ಲೇಪನದ ರಸ್ತೆಯೇ ಮಾಡುತ್ತಿದ್ದಾರೆಯೇ ಎನ್ನುವ ಸಂಶಯ ಇದೆ. ಇಷ್ಟು ಮೊತ್ತ ನಿಗದಿಪಡಿಸಿದರೂ, ಕಾಮಗಾರಿ ವೇಗ ನೋಡಿದರೆ ಇದೇ ಮೊತ್ತದಲ್ಲಿ ಮುಗಿಯುವ ಸಾಧ್ಯತೆ ಇಲ್ಲ. ವಿಳಂಬವಾಯ್ತು ಎಂದು ಇನ್ನೂ ನೂರಿನ್ನೂರು ಕೋಟಿಯನ್ನು ಗುತ್ತಿಗೆ ಕಂಪನಿಯವರು ಮತ್ತೆ ಬಿಡುಗಡೆ ಮಾಡಿಸಿಕೊಂಡು ಬಂದರೂ ಅಚ್ಚರಿಯಿಲ್ಲ. ಕೈಕಂಬದಿಂದ ಸೂರಲ್ಪಾಡಿ – ಗಂಜಿಮಠದಲ್ಲಿ ಒಂದು ಬದಿಯಲ್ಲಿ ಕಾಮಗಾರಿ ಮುಗಿದಿದ್ದರೂ, ಅಲ್ಲಿ ಕೆಲಸ ಮುಗಿಸುವ ಬದಲು ಟೋಲ್ ಗೇಟ್ ಮಾಡುವುದಕ್ಕೇ ಆದ್ಯತೆ ಕೊಟ್ಟಿದ್ದಾರೆ. ಕಾಮಗಾರಿ ಆಗದಿದ್ದರೂ ಟೋಲ್ ಕಲೆಕ್ಷನ್ ಮೊದಲೇ ಶುರುವಾಗುತ್ತೋ ಅನ್ನುವ ಆತಂಕ ಜನರಲ್ಲಿದೆ.
Widening of Mangalore Moodbidri highway, illegal red stone mining underway, officers take no action. A detailed report by Headline Karnataka. A video also has gone viral where residents are questioning the enginner about the illegal red stone mining. The four-lane road starts from Bikarnakatte, off NH 75 in Mangaluru and ends at Sanur, about 5 km before Karkala in Udupi district. The 45 km project highway via Gurupura and Moodbidri would have a total width of 45 m, including 18-20 m of carriageway.
04-04-25 12:00 pm
Bangalore Correspondent
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
Hubballi student suicide attempt: ಯುವತಿಯ ಖಾಸಗ...
02-04-25 10:48 pm
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
04-04-25 12:44 pm
HK News Desk
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
04-04-25 01:39 pm
Mangalore Correspondent
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm