ಬ್ರೇಕಿಂಗ್ ನ್ಯೂಸ್
31-01-25 03:57 pm Mangalore Correspondent ಕರಾವಳಿ
ಮಂಗಳೂರು, ಜ.31: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ವಿಚಾರದಲ್ಲಿ ದೂರು ನೀಡಿ ದೇಶಾದ್ಯಂತ ಸಂಚಲನ ಎಬ್ಬಿಸಿರುವ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪರವಾಗಿ ವಾಮಾಚಾರದ ಮೂಲಕ ಶಕ್ತಿ ತುಂಬಿದ್ದಾರೆಯೇ ಎನ್ನುವ ಶಂಕೆ ಮೂಡುವಂತಹ ಸಾಕ್ಷ್ಯ ಲಭ್ಯವಾಗಿದೆ. ವಾರದ ಹಿಂದಷ್ಟೇ ಮಂಗಳೂರಿನಲ್ಲಿ ಮಸಾಜ್ ಪಾರ್ಲರ್ ಕೇಂದ್ರಕ್ಕೆ ದಾಳಿ ನಡೆಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್ ನಲ್ಲಿ ಸ್ಫೋಟಕ ಅಂಶಗಳು ಪತ್ತೆಯಾಗಿದ್ದು, ಮಂಗಳೂರು ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.
ಬಂಧನವಾಗಿದ್ದ ಪ್ರಸಾದ್ ಅತ್ತಾವರ ಮತ್ತಿತರ ಆರೋಪಿಗಳನ್ನು ಮಂಗಳೂರಿನ ಬರ್ಕೆ ಠಾಣೆ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ, ಪ್ರಸಾದ್ ಅತ್ತಾವರ ಮೊಬೈಲ್ ಪರಿಶೀಲನೆ ಸಂದರ್ಭದಲ್ಲಿ ಆಘಾತಕಾರಿ ಅಂಶಗಳು ಪತ್ತೆಯಾಗಿವೆ. ಸಿಎಂ ಸಿದ್ದರಾಮಯ್ಯ ವಿರುದ್ಧ ದೂರಿತ್ತು ಲೋಕಾಯುಕ್ತ ಮತ್ತು ಹೈಕೋರ್ಟಿನಲ್ಲಿ ಹೋರಾಟ ನಡೆಸುತ್ತಿರುವ ಮೈಸೂರು ಮೂಲದ ಆರ್ಟಿಐ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಪರವಾಗಿ ಅತಿಮಾನುಷ ಶಕ್ತಿಯನ್ನು ಆವಾಹಿಸಿ ಅವರಿಗೆ ಮತ್ತಷ್ಟು ಶಕ್ತಿ ನೀಡುವುದಕ್ಕೆ ಪ್ರಯತ್ನ ನಡೆಸಿರುವುದು ಪತ್ತೆಯಾಗಿದೆ.
ಪ್ರಸಾದ್ ಅತ್ತಾವರ ಮತ್ತು ಅನಂತ ಭಟ್ ಎಂಬವರ ಮಧ್ಯೆ ಹಲವು ವಿಚಾರಗಳು ಸಂವಹನ ಆಗಿವೆ. ಅಲ್ಲದೆ, ವಾಮಾಚಾರದ ವಿಡಿಯೋಗಳು ಪರಸ್ಪರ ರವಾನೆಯಾಗಿವೆ. ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಫೋಟೋಗಳನ್ನು ಮುಂದಿಟ್ಟು ಐದು ಕುರಿಗಳನ್ನು ಬಲಿ ಕೊಡಲಾಗಿದೆ. ಅಲ್ಲದೆ, ರಕ್ತತರ್ಪಣ ಮಾಡಿ ಇವರಿಬ್ಬರಿಗೆ ಮತ್ತಷ್ಟು ಶಕ್ತಿ ತುಂಬಲು ಪ್ರಯತ್ನ ಮಾಡಲಾಗಿದೆ ಎನ್ನುವ ರೀತಿಯ ವಿಡಿಯೋಗಳು ಮೊಬೈಲಿನಲ್ಲಿ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸೂಚನೆಯಂತೆ ಬರ್ಕೆ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿದ್ದಾರೆ.
ಕುರಿ ಬಲಿ ಕೊಟ್ಟಿರುವುದು ಪತ್ತೆ
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಒಂದು ವಾರದ ಹಿಂದೆ ಪ್ರಸಾದ್ ಅತ್ತಾವರ ಬಂಧನ ಮಾಡಲಾಗಿತ್ತು. ಆತನ ಮೊಬೈಲ್ ಪರಿಶೀಲನೆ ಮಾಡಿದಾಗ, ದೇವಸ್ಥಾನದಲ್ಲಿ ಕುರಿಗಳನ್ನು ಬಲಿ ಕೊಡುವ ದೃಶ್ಯ ಪತ್ತೆಯಾಗಿದೆ. ಐದು ಕುರಿಗಳ ಬಲಿ ಕೊಡುತ್ತಿರುವ ವಿಡಿಯೋಗಳಿದ್ದು, ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರಿಗೆ ಬಲ ತುಂಬುದಕ್ಕೆ ಈ ರೀತಿ ಮಾಡುತ್ತಿದ್ದರು. ಈ ಕುರಿತು ವಾಟ್ಸಪ್ ಚಾಟ್ ಕೂಡ ದೊರೆತಿದ್ದು ಇಬ್ಬರಿಗೆ ಬಲ ತಂಬುವುದಕ್ಕಾಗಿ ಕುರಿಗಳನ್ನು ಬಲಿ ನೀಡಿಲಾಗಿದೆ ಎಂದು ಚಾಟ್ ನಲ್ಲಿ ಉಲ್ಲೇಖ ಇರುವುದಾಗಿ ತಿಳಿಸಿದ್ದಾರೆ.
ಇಲ್ಲಿ ಉಲ್ಲೇಖ ಆಗಿರುವ ಅನಂತ್ ಭಟ್ ಯಾರು ಎನ್ನುವ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಈ ಘಟನೆ ಎಲ್ಲಿ ನಡೆದಿದ್ದು ಅಂತ ಸ್ಪಷ್ಟವಾಗಿಲ್ಲ. ಪ್ರಾಣಿ ಬಲಿ ನೀಡುವುದು, ವಾಮಾಚಾರ ಮಾಡುವುದು ನಿಷೇಧ ಇರುವುದರಿಂದ ಈ ಬಗ್ಗೆ ಪ್ರಕರಣ ದಾಖಲು ಮಾಡಿದ್ದೇವೆ. 2024ರ ಡಿಸೆಂಬರ್ 7ರಂದು ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಈ ಪೂಜೆ ಎಲ್ಲಿಯಾಗಿದೆ ಎನ್ನುವ ಬಗ್ಗೆ ಮತ್ತಷ್ಟು ತನಿಖೆ ಮಾಡಲಿದ್ದೇವೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಹಣದ ಕಂತೆ ರವಾನಿಸಿದ್ದನೇ ಪ್ರಸಾದ್ ?
ಇದಕ್ಕೆ ಪ್ರತಿಯಾಗಿ ಅನಂತ ಭಟ್ ಅವರಿಗೆ ಹಣದ ಕಂತೆಯನ್ನು ರವಾನೆ ಮಾಡಿರುವ ರೀತಿ ಕವರ್ ಒಂದರ ವಿಡಿಯೋ ಹಾಕಲಾಗಿದೆ. ಹಣ ಇರುವ ಚೀಲವನ್ನು ಸುಮ ಆಚಾರ್ಯ, ಪ್ರಶಾಂತ ಬಂಗೇರ, ಹರ್ಷ ಮೈಸೂರು ಮತ್ತು ಅನಂತ ಭಟ್ ಎಂಬವರಿಗೆ ತಲುಪಿಸುವುದಕ್ಕೆ ಸಾಕ್ಷಿ ಎನ್ನುವಂತೆ ವಾಟ್ಸಪ್ ನಂಬರಿಗೆ ಫೋಟೋ ರವಾನೆ ಮಾಡಲಾಗಿದೆ. ಹರ್ಷ, ಶ್ರೀನಿಧಿ ಮತ್ತು ಸ್ನೇಹಮಯಿ ಕೃಷ್ಣ ಅವರನ್ನು ಭೇಟಿಯಾಗಿರುವ ಫೋಟೋಗಳು ಕೂಡ ಪತ್ತೆಯಾಗಿವೆ. ಹರ್ಷ, ಗಂಗರಾಜು, ಸ್ನೇಹಮಯಿ ಕೃಷ್ಣ, ಶ್ರೀನಿಧಿ ಮತ್ತು ಸುಮ ಆಚಾರ್ಯ ಅವರ ಫೋಟೋ, ಹೆಸರುಗಳನ್ನು ನಮೂದಿಸಿ ಶಕ್ತಿ ದೇವತೆಯ ಕೊರಳಿಗೆ ಹಾಕಿ ಯಾವುದೋ ದುರುದ್ದೇಶದಿಂದ ದುಷ್ಟ ಶಕ್ತಿಯನ್ನು ಆವಾಹಿಸಿ, ರಕ್ತವನ್ನು ದೇವಿ ಮೂರ್ತಿಗೆ ಸಿಂಪಡಿಸಿರುವುದು ಕಂಡುಬಂದಿದೆ ಎಂದು ಈ ಕುರಿತು ಬರ್ಕೆ ಠಾಣೆ ಇನ್ಸ್ ಪೆಕ್ಟರ್ ಸೋಮಶೇಖರ್ ನೀಡಿರುವ ದೂರಿನಲ್ಲಿ ದಾಖಲಾಗಿದೆ.
Rama Sene leader Prasad Attavar mobile videos reveal animal sacrife videos to give strength to Snehamahi Krishna in muda case. During saloon attack investigation when checking his whatapp chats the police have found videos of sacrificing lambs to give more boost in muda case to RTI activist Snehamahi Krishna
04-04-25 12:00 pm
Bangalore Correspondent
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
Hubballi student suicide attempt: ಯುವತಿಯ ಖಾಸಗ...
02-04-25 10:48 pm
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
04-04-25 12:44 pm
HK News Desk
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
04-04-25 01:39 pm
Mangalore Correspondent
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm